Tuesday, November 3, 2026
spot_img
More
    spot_img
    HomeTop Storyಚಿತ್ರರಂಗದಲ್ಲಿ ಅಷ್ಟೆಲ್ಲಾ ಕಲಾವಿದರಿದ್ರೂ ಸಾಧು ಕೋಕಿಲಗೆ ಕಾಂಗ್ರೆಸ್ ಚಲನಚಿತ್ರ ಅಕಾಡೆಮಿ ಅಧ್ಯಕ್ಷನ ಪಟ್ಟ ಕೊಟ್ಟಿದ್ದೇಕೆ? ಡಿಕೆಶಿ...

    ಚಿತ್ರರಂಗದಲ್ಲಿ ಅಷ್ಟೆಲ್ಲಾ ಕಲಾವಿದರಿದ್ರೂ ಸಾಧು ಕೋಕಿಲಗೆ ಕಾಂಗ್ರೆಸ್ ಚಲನಚಿತ್ರ ಅಕಾಡೆಮಿ ಅಧ್ಯಕ್ಷನ ಪಟ್ಟ ಕೊಟ್ಟಿದ್ದೇಕೆ? ಡಿಕೆಶಿ ಕೊಟ್ರು ಖಡಕ್ ಉತ್ತರ

    ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ಹಾಸ್ಯನಟ, ಸಂಗೀತ ನಿರ್ದೇಶನ, ಗಾಯಕ ಸಾಧು ಕೋಕಿಲ ಅವರನ್ನು ಕಳೆದ ವರ್ಷದ ಫೆಬ್ರವರಿ ಅಂತ್ಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿತು.

    ಸಾಧು ಕೋಕಿಲ ಅವರಿಗಿರುವ ಅನುಭವ, ಜ್ಞಾನ ಹಾಗೂ ಚಿತ್ರರಂಗದ ಜೊತೆ ಅವರಿಗಿರುವ ಉತ್ತಮ ಒಡನಾಟ ಈ ಸ್ಥಾನಕ್ಕೆ ಅವರು ಸರಿಯಾದ ವ್ಯಕ್ತಿ ಎಂಬ ಅಭಿಪ್ರಾಯವನ್ನು ಮೂಡಿಸಿದ್ದವು. ಆದರೆ ಚಿತ್ರರಂಗದಲ್ಲಿ ಇನ್ನೂ ಹಲವಾರು ಅನುಭವಿ ಕಲಾವಿದರಿದ್ದರೂ ಸಾಧು ಕೋಕಿಲ ಅವರಿಗೆ ಈ ಜವಾಬ್ದಾರಿ ಲಭಿಸಿದ್ದು ಹೇಗೆ ಎಂಬ ಪ್ರಶ್ನೆ ಜನರಲ್ಲಿತ್ತು.

    ಈ ಪ್ರಶ್ನೆಗೆ ನಿನ್ನೆ ಬೆಂಗಳೂರಿನಲ್ಲಿ ನಡೆದ 16ನೇ ಬೆಂಗಳೂರು ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಉತ್ತರ ನೀಡಿದ್ದಾರೆ. ಚಲಚಿತ್ರೋತ್ಸವಕ್ಕೆ ಚಿತ್ರರಂಗದ ಸುಮಾರು ಇಪ್ಪತ್ತು ಕಲಾವಿದರನ್ನು ಹೊರತುಪಡಿಸಿ ಇನ್ಯಾವ ಕಲಾವಿದರೂ ಬಾರದ ಕಾರಣಕ್ಕೆ ಬೇಸರವನ್ನು ಹೊರಹಾಕಿದ ಡಿಕೆ ಶಿವಕುಮಾರ್ ಮೇಕೆದಾಟು ಪಾದಯಾತ್ರೆ ಮಾಡಿದ ಸಂದರ್ಭದಲ್ಲೂ ಸಹ ತಮಗೆ ಸಾಧು ಕೋಕಿಲ ಹಾಗೂ ಯಾರೂ ಬೆಂಬಲ ನೀಡಿಲಿಲ್ಲ ಎಂದರು.

    ಅಂದಿನ ದಿನ ನಮ್ಮ ಕಷ್ಟದ ಕಾಲದಲ್ಲಿ ನಮ್ಮ ಜೊತೆ ನಿಂತ ಕಾರಣಕ್ಕೆ ಸಾಧು ಅವರನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿದೆವು ಎಂದು ಡಿಕೆಶಿ ತಿಳಿಸಿದರು. ನಮ್ಮ ಕಷ್ಟ ಕಾಲದಲ್ಲಿ ನಿಂತುಕೊಂಡವರನ್ನು ಗುರುತಿಸಬೇಕು, ಸಹಾಯ ಮಾಡಬೇಕು ಅಂತ ಹೇಳಿ ಅವರಿಗೆ ಅಧ್ಯಕ್ಷರ ಸ್ಥಾನ ಕೊಟ್ಟೆವು. ಇದು ತಲೆಲೆ ಇರಲಿ ಎಂದು ಇತರೆ ಕಲಾವಿದರಿಗೆ ಸರ್ಕಾರದ ಜತೆ ಉತ್ತಮ ಬಾಂಧವ್ಯ ಹೊಂದುವಂತೆ ಹಾಗೂ ಚಿತ್ರರಂಗಕ್ಕೆ ಸಂಬಂಧಿಸಿದ ಮತ್ತು ನಾಡಿಗೆ ಸಂಬಂಧಿಸಿದ ವಿಷಯಗಳಲ್ಲಿ ಸರ್ಕಾರದ ಜತೆ ಕೈ ಜೋಡಿಸುವಂತೆ ಎಚ್ಚರಿಕೆ ನೀಡಿದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search