ದುಬೈ: ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು (ಮಾರ್ಚ್ 2) ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದ ಅಂತಿಮ ಪಂದ್ಯ ನಡೆಯುತ್ತಿದ್ದು, ಭಾರತ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆರಿಸಿಕೊಂಡಿದ್ದು, ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿರುವ ಭಾರತ ಕೇವಲ 30 ರನ್‌ಗಳಿಗೆ ತನ್ನ ಮೊದಲ 3 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದುಕೊಂಡಿದೆ.
ರೋಹಿತ್ ಶರ್ಮಾ 15 ರನ್‌ಗಳಿಗೆ ನಿರ್ಗಮಿಸಿದರೆ, ಶುಬ್‌ಮನ್ ಗಿಲ್ ಕೇವಲ 2 ರನ್ ಕಲೆಹಾಕಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ 14 ಎಸೆತಗಳಲ್ಲಿ 11 ರನ್ ಗಳಿಸಿ ಔಟ್ ಆದರು. ಮ್ಯಾಟ್ ಹೆನ್ರಿ ಎಸೆದ ಎಸೆತವನ್ನು ಆಫ್‌ಸೈಡ್ ಪಾಯಿಂಟ್ ಕಡೆಗೆ ಬಾರಿಸುವ ಪ್ರಯತ್ನ ಮಾಡಿದ ಕೊಹ್ಲಿ ಬೌಂಡರಿ ಪಡೆದುಕೊಳ್ಳುವಲ್ಲಿ ವಿಫಲರಾದರು.
ಬೌಂಡರಿ ಕಡೆ ಸಾಗುತ್ತಿದ್ದ ಚೆಂಡನ್ನು ಗ್ಲೆನ್ ಫಿಲಿಪ್ಸ್ ಹಕ್ಕಿಯಂತೆ ಹಾರಿ ಮತ್ತೊಮ್ಮೆ ತಾವೊಬ್ಬ ಅತ್ಯದ್ಭುತ ಫೀಲ್ಡರ್ ಎಂಬುದನ್ನು ಸಾಬೀತುಪಡಿಸಿದರು. ಸದ್ಯ ಗ್ಲೆನ್ ಫಿಲಿಪ್ಸ್ ಹಿಡಿದ ಈ ಕ್ಯಾಚ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಕೆಟ್‌ಗೆ ಪಂದ್ಯ ವೀಕ್ಷಿಸುತ್ತಿದ್ದ ಅನುಷ್ಕಾ ಶರ್ಮಾ ಪ್ರತಿಕ್ರಿಯಿಸಿದ ರೀತಿ ಸಹ ವೈರಲ್ ಆಗಿದೆ.
ವಿರಾಟ್ ಔಟ್ ಆಗುತ್ತಿದ್ದಂತೆ ಅನುಷ್ಕಾ ಶರ್ಮಾ ತಲೆಮೇಲೆ ಕೈ ಇಟ್ಟುಕೊಂಡು ಬೇಸರ ಹೊರಹಾಕಿದ್ದಾರೆ. ಈ ಫೋಟೊಗಳು ಸದ್ಯ ವೈರಲ್ ಆಗಿವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


