ನವದೆಹಲಿ ;ದೇಶದ ಅತ್ಯಂತ ಪ್ರತಿಷ್ಠಿತ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜೆಇಇ ಅಡ್ವಾನ್ಸ್‌ಡ್ 2025 ರ ಫಲಿತಾಂಶ ಪ್ರಕಟವಾಗಿದೆ.ಈ ಪರೀಕ್ಷೆಯಲ್ಲಿ ಐಐಟಿ ದೆಹಲಿ ವಲಯದ ರಾಜಿತ್ ಗುಪ್ತಾ 360 ಅಂಕಗಳಲ್ಲಿ 332 ಅಂಕಗಳನ್ನು ಪಡೆದು ಸಾಮಾನ್ಯ ರ್ಯಾಂಕ್ ಪಟ್ಟಿ (ಸಿಆರ್‌ಎಲ್)ಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.2025ರ ಮೇ 18ರಂದು ಜರುಗಿದ ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆಗೆ ಒಟ್ಟು 1,80,422 ಅಭ್ಯರ್ಥಿಗಳು ಪೇಪರ್ 1 ಮತ್ತು 2ರಿಬ್ಬಕ್ಕೂ ಹಾಜರಾಗಿದ್ದು, ಇದರಲ್ಲಿ 54,378 ಮಂದಿ ಅರ್ಹತೆ ಪಡೆದಿದ್ದಾರೆ. ಐಐಟಿ ಖಡಗ್ಪುರ ವಲಯದ ದೇವದತ್ತ ಮಾಝಿ 360 ಅಂಕಗಳಲ್ಲಿ 312 ಅಂಕಗಳನ್ನು ಗಳಿಸಿ ಸಿಆರ್‌ಎಲ್ 16ರೊಂದಿಗೆ ಭಾರತದ ಸರ್ವೋತ್ತಮ ಮಹಿಳಾ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಅಂಕಪತ್ರಗಳು ಮತ್ತು ಅಂತಿಮ ಉತ್ತರ ಕೀಗಳನ್ನು ಅಧಿಕೃತ ವೆಬ್‌ಸೈಟ್ jeeadv.ac.in ನಲ್ಲಿ ಪರಿಶೀಲಿಸಬಹುದು.
ಈ ವರ್ಷದ JEE ಅಡ್ವಾನ್ಸ್‌ಡ್ ಪರೀಕ್ಷೆ ತೀವ್ರ ಸ್ಪರ್ಧೆಯಿಂದ ಕೂಡಿದ್ದು, ಪೇಪರ್ 1 ಮತ್ತು ಪೇಪರ್ 2 ಎರಡೂ ವಿಭಾಗಗಳಲ್ಲಿ ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ಒಟ್ಟು ಅಂಕಗಳ ಆಧಾರದ ಮೇಲೆ ರ್ಯಾಂಕ್ ಪಟ್ಟಿಯನ್ನು ನಿರ್ಧರಿಸಲಾಗುತ್ತದೆ. ಪ್ರತಿ ಪೇಪರ್ 180 ಅಂಕಗಳ ಮೌಲ್ಯ ಹೊಂದಿದ್ದು, ಗರಿಷ್ಠ ಒಟ್ಟು ಅಂಕ 360 ರಷ್ಟಿದೆ. ಸಾಮಾನ್ಯ ರ್ಯಾಂಕ್ ಪಟ್ಟಿಯಲ್ಲಿ (CRL) ಸ್ಥಾನ ಪಡೆಯಲು, ವಿದ್ಯಾರ್ಥಿಗಳು ವಿಷಯವಾರು ಹಾಗೂ ಒಟ್ಟಾರೆ ಅರ್ಹತಾ ಅಂಕಗಳ ಮಾನದಂಡಗಳನ್ನು ಪೂರ್ಣಗೊಳಿಸಬೇಕು.
ಟಾಪ್ 10 ರ್ಯಾಂಕ್ ಹೊಂದಿರುವವರು
ರಜಿತ್ ಗುಪ್ತಾ – AIR 1 (IIT ದೆಹಲಿ ವಲಯ)
ಸಕ್ಷಮ್ ಜಿಂದಾಲ್ – AIR 2
ಮಜೀದ್ ಮುಜಾಹಿದ್ ಹುಸೇನ್ – AIR 3
ಪಾರ್ಥ್ ಮಂದರ್ ವರ್ತಕ್ – AIR 4
ಉಜ್ವಲ್ ಕೇಸರಿ – AIR 5
ಅಕ್ಷತ್ ಕುಮಾರ್ ಚೌರಾಸಿಯಾ – AIR 6
ಸಾಹಿಲ್ ಮುಖೇಶ್ ಡಿಯೋ – AIR 7
ದೇವೇಶ್ ಪಂಕಜ್ ಭಯ್ಯಾ – AIR 8
ಅರ್ನವ್ ಸಿಂಗ್ – AIR 9
ವಡ್ಲಮುಡಿ ಲೋಕೇಶ್ – AIR 10
ರಜಿತ್ ಗುಪ್ತಾ 360 ಅಂಕಗಳಲ್ಲಿ 332 ಅಂಕಗಳನ್ನು ಪಡೆದು ಪರೀಕ್ಷೆಯಲ್ಲಿ ಶ್ರೇಷ್ಟ ಸ್ಥಾನ ಪಡೆದಿದ್ದಾರೆ. ಅವರು IIT ದೆಹಲಿ ವಲಯದ ವಿದ್ಯಾರ್ಥಿ. ವರದಿಗಳ ಪ್ರಕಾರ, ಈ ವರ್ಷದ ಆರಂಭದಲ್ಲಿ ಜೇಇಇ ಮೇನ್‌ನ ಎರಡೂ ಸೆಷನ್‌ಗಳಲ್ಲಿ ಅವರು 100 ಶೇಕಡಾವಾರು ಪಡೆದಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


