ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಇನ್ಫೋಸಿಸ್‌ನ ಕಾಮುಕ ಉದ್ಯೋಗಿಯೊಬ್ಬನನ್ನು ಬಂಧಿಸಿದ್ದಾರೆ. ಕಂಪನಿಯಲ್ಲಿ ತನ್ನೊಡನೆ ಕೆಲಸಕ್ಕೆ ಬರುತ್ತಿದ್ದ ಮಹಿಳಾ ಸಹದ್ಯೋಗಿಗಳು ಶೌಚಾಲಯಕ್ಕೆ ತೆರಳಿದಾಗ ರಹಸ್ಯವಾಗಿ ವಿಡಿಯೊ ಮಾಡಿಕೊಳ್ಳುತ್ತಿದ್ದ ಇನ್ಫೋಸಿಸ್ ಉದ್ಯೋಗಿಯನ್ನು ಬಂಧಿಸಿದ್ದಾರೆ.
ಆಂಧ್ರ ಪ್ರದೇಶ ಮೂಲದ ಸ್ವಪ್ನಿಲ್ ನಾಗೇಶ್ ಮಲಿ ಎಂಬಾತ ಈ ಕೃತ್ಯ ಎಸಗಿರುವ ಆರೋಪಿಯಾಗಿದ್ದು, ತನ್ನ ನೀಚ ಕೃತ್ಯದ ವೇಳೆಯೇ ರೆಡ್ ಹ್ಯಾಂಡ್ ಆಗಿ ಮಹಿಳಾ ಉದ್ಯೋಗಿಯೊಬ್ಬರಿಗೆ ಸಿಕ್ಕಿಬಿದ್ದಿದ್ದಾನೆ.
ಮಹಿಳಾ ಉದ್ಯೋಗಿಗಳು ಶೌಚಾಲಯ ಬಳಸಲು ತೆರಳಿದಾಗ ಪಕ್ಕದ ರೂಮ್ ಕಮೋಡ್ ಬಳಸಿ ಮೇಲೆ ಹತ್ತಿ ರಹಸ್ಯವಾಗಿ ವಿಡಿಯೊ ಸೆರೆ ಹಿಡಿಯುತ್ತಿದ್ದ ಸ್ವಪ್ನಿಲ್ ಈ ಬಾರಿ ಅದೇ ರೀತಿ ಕೆಲಸ ಮಾಡಲು ಮುಂದಾಗಿ ಸಿಬ್ಬಂದಿಯೊಬ್ಬರಿಗೆ ಸಿಕ್ಕಿ ಬಿದ್ದಿದ್ದಾನೆ. ಬಾಗಿಲಿನ ಮೇಲೆ ಕಾಣುತ್ತಿದ್ದ ಪ್ರತಿಬಿಂಬದ ಮೂಲಕ ಈತನ ಕೃತ್ಯದ ಕುರಿತು ಅರಿತ ಮಹಿಳಾ ಸಿಬ್ಬಂದಿ ಕೂಡಲೇ ಚೀರಿಕೊಂಡಿದ್ದು, ಈತನ ಹೇಯ ಕೃತ್ಯ ಬೆಳಕಿಗೆ ಬಂದಿದೆ.
ಸ್ವಪ್ನಿಲ್ ನಾಗೇಶ್ ಮಲಿ ಮೊಬೈಲ್‌ನಲ್ಲಿ ಒಟ್ಟು 30 ಮಹಿಳಾ ಉದ್ಯೋಗಿಗಳ ವಿಡಿಯೊಗಳು ಪತ್ತೆಯಾಗಿದ್ದು, ಈತ ಆ ವಿಡಿಯೊಗಳನ್ನು ಏನು ಮಾಡುತ್ತಿದ್ದ, ಅಂತರ್ಜಾಲಕ್ಕೇನಾದರೂ ಅಪ್‌ಲೋಡ್ ಮಾಡುತ್ತಿದ್ದನಾ ಎಂಬ ಆತಂಕ ಇತರೆ ಉದ್ಯೋಗಿಗಳಲ್ಲಿ ಸೃಷ್ಟಿಯಾಗಿದೆ.
ಕೃಷಿ ಕನ್ನಡ ಎಐ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ರಾಕಿಂಗ್ ಸ್ಟಾರ್ ಯಶ್; ಬೆಲೆ ಎಷ್ಟು ಕೋಟಿ ಗೊತ್ತಾ?
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


