ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಪ್ಪಿಸಲು, ನಮ್ಮ ಮೆಟ್ರೋ ಇತಿಹಾಸದಲ್ಲೇ ಮೊದಲ ಬಾರಿಗೆ ಯಕೃತ್ತೊಂದನ್ನು ಸಾಗಿಸಲಾಗಿದೆ. ಇದು ಶುಕ್ರವಾರದಂದು ನಡೆದಿದ್ದು, ವೈಟ್‌ಫೀಲ್ಡ್ ನಿಲ್ದಾಣದಿಂದ ರಾಜರಾಜೇಶ್ವರಿ ನಗರ (ಆರ್.ಆರ್. ನಗರ) ನಿಲ್ದಾಣದವರೆಗೆ ಯಕೃತ್ತನ್ನು ಯಶಸ್ವಿಯಾಗಿ ಸಾಗಿಸಲಾಯಿತು.ವೈದೇಹಿ ಆಸ್ಪತ್ರೆಯ ವೈದ್ಯಕೀಯ ತಂಡವು ಅಂಬ್ಯುಲೆನ್ಸ್ ಮೂಲಕ ಯಕೃತ್ತನ್ನು ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣಕ್ಕೆ ತಂದರು.ನಿಲ್ದಾಣದಲ್ಲಿ ಸಹಾಯಕ ಭದ್ರತಾ ಅಧಿಕಾರಿಗಳು ಮತ್ತು ಮೆಟ್ರೋ ಸಿಬ್ಬಂದಿ ತಂಡವನ್ನು ಬರಮಾಡಿಕೊಂಡು, ಸೂಕ್ತ ಭದ್ರತೆಯೊಂದಿಗೆ ಸಾಗಿಸಲು ನೆರವಾದರು.ಮೆಟ್ರೋ ರೈಲು ರಾತ್ರಿ 8:42ಕ್ಕೆ ವೈಟ್‌ಫೀಲ್ಡ್‌ನಿಂದ ಹೊರಟು, 9:48ಕ್ಕೆ ರಾಜರಾಜೇಶ್ವರಿ ನಗರ ನಿಲ್ದಾಣ ತಲುಪಿತು.ಅಲ್ಲಿ ಕಾಯುತ್ತಿದ್ದ ಅಂಬ್ಯುಲೆನ್ಸ್‌ಗೆ ಯಕೃತ್ತನ್ನು ವರ್ಗಾಯಿಸಲಾಯಿತು. ಅಲ್ಲಿಂದ ಯಕೃತ್ತು ಸುರಕ್ಷಿತವಾಗಿ ಸ್ಪರ್ಶ ಆಸ್ಪತ್ರೆ ತಲುಪಿ ಈ ಜೀವ ಉಳಿಸುವ ಕಾರ್ಯಚರಣೆಯಲ್ಲಿ ಸಮಯಕ್ಕೆ ಸರಿಯಾಗಿ ಸಹಕರಿಸಿದ ಎಲ್ಲ ಮೆಟ್ರೋ ಸಿಬ್ಬಂದಿ, ಭದ್ರತಾ ಅಧಿಕಾರಿಗಳು ಮತ್ತು ಹೋಮ್ ಗಾರ್ಡ್‌ಗಳಿಗೆ ವೈದ್ಯಕೀಯ ತಂಡವು ಕೃತಜ್ಞತೆ ಸಲ್ಲಿಸಿದೆ. ಈ ಕಾರ್ಯವು ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮಾರ್ಗಸೂಚಿಗಳ ಅನುಸಾರವಾಗಿ ನಡೆದಿದೆ. ಮೆಟ್ರೋ ಮೂಲಕ ಅಂಗಾಂಗ ಸಾಗಣೆ ಮಾಡಿದ ದೇಶದ ಎರಡನೇ ನಗರ ಬೆಂಗಳೂರು ಆಗಿದೆ. ಈ ಹಿಂದೆ ಇದೇ ವರ್ಷ ಜನವರಿಯಲ್ಲಿ ಹೈದರಾಬಾದ್ ಮೆಟ್ರೋದಲ್ಲಿ ಹೃದಯವನ್ನು ಸಾಗಿಸಲಾಗಿತ್ತು.
ಮನೆಗೆಲಸದಾಕೆ ಮೇಲಿನ ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


