ಸರಕಾರದ ಅಧಿಕೃತ ಕೆಲಸಗಳಿಗೆ ವಿಶೇಷ ವಿಮಾನ ಹಾಗೂ ಹೆಲಿಕಾಪ್ಟರ್ ಬಳಕೆಯ ಸೌಲಭ್ಯವನ್ನು ಕೇವಲ ಸಿಎಂ, ಡಿಸಿಎಂಗೆ ಮಾತ್ರವಲ್ಲದೆ ಇತರ ಸಚಿವರಿಗೂ ವಿಸ್ತರಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.
ಸದ್ಯಕ್ಕೆ ರಾಜ್ಯದಲ್ಲಿ ಖಾಸಗಿ ಸಂಸ್ಥೆಗಳಿಂದ ಗಂಟೆಯ ಲೆಕ್ಕದಲ್ಲಿ ಬಾಡಿಗೆ ಪಡೆಯಲಾಗುತ್ತಿದೆ. ವಿಶೇಷ ವಿಮಾನಕ್ಕೆ ಒಂದು ಗಂಟೆಗೆ 5 ಲಕ್ಷ ರೂ. ಹೆಲಿಕಾಪ್ಟರ್ ಗಳಿಗೆ 2.5ರಿಂದ 3 ಲಕ್ಷ ರೂ.ವರೆಗೆ ಬಾಡಿಗೆ ಕೊಡಬೇಕಾಗುತ್ತದೆ. ತುರ್ತು ವೇಳೆ ಹೆಚ್ಚಿನ ಬಾಡಿಗೆ ಭರಿಸಬೇಕಿದೆ. ಈ ಕಾರಣಕ್ಕೆ ತುರ್ತಾಗಿ ಸೇವೆ ಸಿಗುವಂತಾಗಲು ವಾರ್ಷಿಕ ಗುತ್ತಿಗೆಯನ್ನು ಸರಕಾರ ಯೋಚಿಸುತ್ತಿದೆ.
ಸದ್ಯದ ನಿಯಮ ಪ್ರಕಾರ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹುದ್ದೆಯಲ್ಲಿ ಇರುವವರಿಗೆ ಮಾತ್ರ ಈ ಸೌಲಭ್ಯ ಪಡೆಯುವುದಕ್ಕೆ ಅವಕಾಶವಿದೆ. ಆದರೆ ವಾರ್ಷಿಕ ಗುತ್ತಿಗೆ ಸಂದರ್ಭದಲ್ಲಿ ಎಲ್ಲ ಸಚಿವರಿಗೂ ಬಳಕೆಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


