Tuesday, November 3, 2026
spot_img
More
    spot_img
    HomeSportsCricketಭಾರತ vs ಆಸ್ಟ್ರೇಲಿಯಾ 3ನೇ ಟಿ20: ಭಾರತಕ್ಕೆ ಗೆಲುವು; ಸರಣಿ ಜಯ ಈಗ ಮತ್ತಷ್ಟು ರೋಚಕ,...

    ಭಾರತ vs ಆಸ್ಟ್ರೇಲಿಯಾ 3ನೇ ಟಿ20: ಭಾರತಕ್ಕೆ ಗೆಲುವು; ಸರಣಿ ಜಯ ಈಗ ಮತ್ತಷ್ಟು ರೋಚಕ, ಕಠಿಣ

    ಹಾಬರ್ಟ್:‌ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳ ಗೆಲುವನ್ನು ಕಂಡಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿವೆ.

    ಮೊದಲ ಪಂದ್ಯ ಮಳೆಯಿಂದ ಫಲಿತಾಂಶವಿಲ್ಲದೇ ರದ್ದಾಗಿತ್ತು, ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿತ್ತು ಹಾಗೂ ಇದೀಗ ಮೂರನೇ ಪಂದ್ಯದಲ್ಲಿ ಭಾರತ ಗೆದ್ದಿರುವ ಕಾರಣ ಇನ್ನುಳಿದ ಎರಡು ಪಂದ್ಯಗಳನ್ನು ಗೆಲ್ಲುವ ತಂಡ ಸರಣಿ ಗೆಲ್ಲಲಿದೆ. ಹೀಗಾಗಿ ಸರಣಿ ಗೆಲುವು ಎರಡೂ ತಂಡಗಳಿಗೂ ಕಠಿಣವೆನಿಸಿದೆ.

    ಇನ್ನು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 186 ರನ್‌ ಬಾರಿಸಿ ಭಾರತಕ್ಕೆ 187 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಭಾರತ 18.3 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 188 ರನ್‌ ಬಾರಿಸಿದೆ.

    ಆಸ್ಟ್ರೇಲಿಯಾ ಇನ್ನಿಂಗ್ಸ್:‌ ಟ್ರಾವಿಸ್‌ ಹೆಡ್‌ 6, ಮಿಚೆಲ್‌ ಮಾರ್ಷ್‌ 11, ಜೋಶ್‌ ಇಂಗ್ಲಿಸ್‌ 1, ಟಿಮ್‌ ಡೇವಿಡ್‌ 74, ಮಿಚೆಲ್‌ ಓವನ್‌ ಡಕ್‌ಔಟ್, ಮಾರ್ಕಸ್‌ ಸ್ಟಾಯ್ನಿಸ್‌ 64, ಮ್ಯಾಥ್ಯೂ ಶಾರ್ಟ್‌ ಅಜೇಯ 26 ಹಾಗೂ ಕ್ಷೇವಿಯರ್‌ ಬ್ರಾಟ್ಲೆಟ್‌ ಅಜೇಯ 3 ರನ್‌ ಗಳಿಸಿದರು.

    ಭಾರತದ ಪರ ಅರ್ಷ್‌ದೀಪ್‌ ಸಿಂಗ್‌ 3 ವಿಕೆಟ್‌, ವರುಣ್‌ ಚಕ್ರವರ್ತಿ 2 ವಿಕೆಟ್‌ ಹಾಗೂ ಶಿವಮ್‌ ದುಬೆ 1 ವಿಕೆಟ್‌ ಪಡೆದರು.

    ಭಾರತ ಇನ್ನಿಂಗ್ಸ್:‌ ಅಭಿಷೇಕ್‌ ಶರ್ಮಾ 25, ಶುಬ್‌ಮನ್‌ ಗಿಲ್‌ 15, ಸೂರ್ಯಕುಮಾರ್‌ ಯಾದವ್‌ 24, ತಿಲಕ್‌ ವರ್ಮಾ 29, ಅಕ್ಷರ್‌ ಪಟೇಲ್‌ 17, ವಾಷಿಂಗ್ಟನ್‌ ಸುಂದರ್‌ ಅಜೇಯ 49 ಹಾಗೂ ಜಿತೇಶ್‌ ಶರ್ಮಾ ಅಜೇಯ 22 ರನ್‌ ಬಾರಿಸಿದರು.

    ಆಸ್ಟ್ರೇಲಿಯಾ ಪರ ನಾಥನ್‌ ಎಲ್ಲಿಸ್‌ 3 ವಿಕೆಟ್‌, ಕ್ಷೇವಿಯರ್‌ ಬ್ರಾಟ್ಲೆಟ್‌ ಹಾಗೂ ಮಾರ್ಕಸ್‌ ಸ್ಟಾಯ್ನಿಸ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಭಾರತೀಯರ ಸದ್ದಡಗಿಸಿ ಟ್ರೋಫಿ ಗೆಲ್ಲುತ್ತೇವೆ; ಮಹಿಳಾ ವಿಶ್ವಕಪ್‌ ಫೈನಲ್‌ಗೂ ಮುನ್ನ ದಕ್ಷಿಣ ಆಫ್ರಿಕಾ ನಾಯಕಿ ಹೇಳಿಕೆ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search