ವಿಜಯಪುರದ ದಿ. ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ್ ನಿಯಮಿತ ನೇಮಕಾತಿ ಅಧಿಸೂಚನೆಯನ್ನು ಪಕ್ರಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ 20/12/2025ರ ತನಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು.
ಅಧಿಸೂಚನೆ ಸಂಖ್ಯೆ 15/ ಸಿಬ್ಬಂದಿ ನೇಮಕಾತಿ/ 2025-26 ದಿನಾಂಕ: 25.11.2025 ಅಧಿಸೂಚನೆ ಸಂಖ್ಯೆ 14/ ಸಿಬ್ಬಂದಿ ನೇಮಕಾತಿ/ 2025-26 ದಿನಾಂಕ: 28.10.2025ರಂದು ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿತ್ತು.
ಅನಿವಾರ್ಯ ಕಾರಣಗಳಿಂದ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 26.11.2025 ರಿಂದ 20.12.2025 ರವರೆಗೆ ವಿಸ್ತರಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿದವರು ಮತ್ತೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವದಿಲ್ಲ.
ಮಾನ್ಯ ಸಹಕಾರ ಸಂಘಗಳ ನಿಬಂಧಕರು, ಬೆಂಗಳೂರು ಇವರ ಆದೇಶ ಸಂಖ್ಯೆಯುಬಿಸಿ 7/ ಯುಸಿಎಸ್/130/2022-23 ದಿನಾಂಕ:26.12.2022 ರಡಿಯಲ್ಲಿ ಹೊರಡಿಸಿದ ಆದೇಶದ ಮೇರೆಗೆ ದಿ ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ ನಿ, ಸಿಂದಗಿ ಇದರಲ್ಲಿ ಖಾಲಿ ಇರುವ ಈ ಕೆಳಗಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಇಚ್ಛೆಯುಳ್ಳ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಮಾತ್ರ ದಿನಾಂಕ 26.11.2025 ರಿಂದ 20.12.2025ರ ಸಾಯಂಕಾಲ 5 ಗಂಟೆಯವರೆಗೆ ಅರ್ಜಿಗಳನ್ನು ಸಲ್ಲಿಸಬಹುದು. ಆಸಕ್ತರು https://sindagiurbanbank.buffersoft.com/ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸತಕ್ಕದ್ದು.
ನೇಮಕಾತಿ ಮಾಡಿಕೊಳ್ಳುತ್ತಿರುವ ಹುದ್ದೆಗಳ ವಿವರ
- ಕಿರಿಯ ಸಹಾಯಕರು (6). ವೇತನ 27650-650-29600-750-32600-850-36000-950-39800-1100-46400-1250-52650
- ಜವಾನ (4). ವೇತನ 19950-450-20400-500-22400-550-24600-600-27000-650-29600-750-32600-850-36000-950-37900 ರೂ.ಗಳು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ವೇತನ ಮತ್ತು ಮತ್ತು ನಿಯಮಾನುಸಾರ ತುಟ್ಟಿ ಭತ್ಯೆ ಹಾಗು ಇತರ ಭತ್ಯೆಗಳನ್ನು ನೀಡಲಾಗುತ್ತದೆ.
ವಿದ್ಯಾರ್ಹತೆ, ವಯೋಮಿತಿ ಅರ್ಜಿ ಶುಲ್ಕ, ಅರ್ಜಿ ಸಲ್ಲಿಸುವ ವಿಧಾನ, ಆಯ್ಕೆ ವಿಧಾನ, ಇತರೆ ನಿಯಮಗಳನ್ನು ಬ್ಯಾಂಕಿನ ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಲಿಖಿತ ಪರೀಕ್ಷೆಯನ್ನು ಕನ್ನಡ ಭಾಷೆ 50, ಇಂಗ್ಲೀಷ್ ಭಾಷೆ 25, ಸಾಮಾನ್ಯ ಜ್ಞಾನ 25 ಮತ್ತು ಸಹಕಾರ ಮತ್ತು ಬ್ಯಾಂಕಿಂಗ್ 50, ಭಾರತದ ಸಂವಿಧಾನ 25, ಸಮಾಜದಯುಕ್ತವಾದ ಚಟುವಟಿಕೆ ಮತ್ತು ವಸ್ತುನಿಷ್ಠ ವಿಷಯ 25 ಅಂಕಗಳಿಗೆ ನಡೆಸಲಾಗುತ್ತದೆ.
ಹೆಚ್ಚಿನ ವಿವರಗಳಿಗಾಗಿ ಬ್ಯಾಂಕಿನ ವೆಬ್ ಸೈಟ್: http://www.sindgiurbanbank.com & https://sindagiurbanbank.buffersoft.com ಭೇಟಿ ನೀಡಿ, ಕರೆ ಮಾಡಲು ದೂರವಾಣಿ ಸಂಖ್ಯೆ 9035889855.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


