ನಟ ರಿಷಬ್ ಶೆಟ್ಟಿ ಹೊಗಳುವ ಭರದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಕಾಂತಾರ ದೈವಕ್ಕೆ ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮಾತನಾಡಿದ ರಣವೀರ್ ಸಿಂಗ್ ಅವರು, ಕಾಂತಾರ-1 ಚಿತ್ರವನ್ನು ಥಿಯೇಟರ್‌ನಲ್ಲಿ ನೋಡಿದೆ. ರಿಷಬ್ ಶೆಟ್ಟಿ ಅವರ ಅಭಿನಯ ನಿಜವಾಗಿಯೂ ಅದ್ಭುತವಾಗಿದೆ. ಹೆಣ್ಣು ದೆವ್ವ ನಿಮ್ಮ ಮೇಲೆ ಬರುತ್ತಲ್ಲ ಅದು ಅದ್ಭುತ. ನಿಮ್ಮ ನಟನೆ ಸೂಪರ್ ಎಂದು ದೈವದ ಅನುಕರಣೆ ಮಾಡಿದ್ದರು.
ಹೀಗೆ ದೈವ ಎನ್ನುವ ಬದಲು ದೆವ್ವ ಎಂದು ಹೇಳಿಕೆ ನೀಡುವ ಮೂಲಕ ರಣ್‌ವೀರ್ ಸಿಂಗ್ ವಿವಾದವನ್ನು ಎಬ್ಬಿಸಿದ್ದರು. ಇನ್ನು ನೆಟ್ಟಿಗರು ಈ ಕುರಿತು ಕಿಡಿಕಾರಿದ್ದು, ಓರ್ವ ಸ್ಟಾರ್ ನಟನಿಗೆ ದೊಡ್ಡ ಚಿತ್ರದ ಅಂಶ ಅರ್ಥವಾಗದೇ ಇರುವುದು ವಿಪರ್ಯಾಸದ ಸಂಗತಿ ಹಾಗೂ ದಡ್ಡತನ ಎಂದು ಬೇಸರ ಹೊರಹಾಕಿದ್ದರು.
ಇನ್ನು ರಣ್‌ವೀರ್ ಸಿಂಗ್‌ಣ ಈ ವರ್ತನೆ ರಿಷಬ್ ಶೆಟ್ಟಿಗೂ ಇರಿಸು ಮುರಿಸು ತರಿಸಿತ್ತು. ರಣ್‌ವೀರ್ ದೈವದ ಅನುಕರಣೆ ಮಾಡಲು ಹೊರಟಾದ ನೇರವಾಗಿ ಬೇಡ ಎಂದು ಹೇಳಿದ್ದರು.
ಹೀಗೆ ಸಾಮಾಜಿಕ ಜಾಲತಾಣದಲ್ಲಿ ರಣ್‌ವೀರ್ ನಡೆದುಕೊಂಡ ರೀತಿಗೆ ಭಾರೀ ವಿರೋಧ ಹಾಗೂ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಇದೀಗ ರಣ್‌ವೀರ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಬರೆದುಕೊಳ್ಳುವ ಮೂಲಕ ಕ್ಷಮೆಯಾಚಿಸಿದ್ದಾರೆ.
ಚಿತ್ರದಲ್ಲಿ ರಿಷಬ್ ಶೆಟ್ಟಿಯವರ ಅತ್ಯದ್ಭುತ ಪ್ರದರ್ಶನವನ್ನು ಹೈಲೈಟ್ ಮಾಡುವುದು ನನ್ನ ಉದ್ದೇಶವಾಗಿತ್ತು. ರಿಷಬ್ ಶೆಟ್ಟಿ ಆ ಒಂದು ನಿರ್ದಿಷ್ಟ ದೃಶ್ಯದಲ್ಲಿ ಅಭಿನಯಿಸಿರುವುದು ಓರ್ವ ನಟನಾಗಿ ಎಷ್ಟು ಕಷ್ಟ ಎನ್ನುವುದು ನನಗೆ ಗೊತ್ತು. ಅದಕ್ಕೆ ನನ್ನ ಗೌರವವಿದೆ. ನನಗೆ ಎಲ್ಲ ಸಂಸ್ಕೃತಿ, ಆಚರಣೆ ಮತ್ತು ದೇಶದ ನಂಬಿಕೆಗಳ ಮೇಲೆ ಅಪಾರವಾದ ಗೌರವವಿದೆ. ನಾನು ಯಾರದ್ದಾದರೂ ಭಾವನೆಗಳಿಗೆ ಧಕ್ಕೆಯನ್ನುಂಟುಮಾಡಿದ್ದರೆ ದಯವಿಟ್ಟು ಕ್ಷಮಿಸಿ ಎಂದು ಬರೆದುಕೊಂಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


