ಪುಣೆ: ನ್ಯಾಯಾಲಯದಲ್ಲಿ ಅದೆಷ್ಟೋ ಸುಳ್ಳು ಪ್ರಕರಣಗಳು ಸರಿಯಾದ ಸಾಕ್ಷಿ ಸಿಗದೇ ಅಂತಿಮ ಹಂತದಲ್ಲಿ ಬೆಳಕಿಗೆ ಬಂದಿವೆ. ಆದರೆ ಆ ಪ್ರಕರಣ ಸುಳ್ಳು ಎಂಬುದು ಸಾಬೀತಾಗುವಷ್ಟರಲ್ಲಿ ಆರೋಪಿ ಸ್ಥಾನದಲ್ಲಿರುವ ನಿರಪರಾಧಿಯ ಮರ್ಯಾದೆ ಹಾಗೂ ಜೀವನ ಕಳೆದುಹೋಗಿರುತ್ತದೆ.
ಅಂತಹ ಪ್ರಕರಣಗಳ ಸಾಲಿಗೆ ಪುಣೆಯ ವಿಶೇಷ ಪೋಕ್ಸೊ ನ್ಯಾಯಾಲಯ ಸಾಕ್ಷಿಯಾಗಿದೆ. 2018ರಲ್ಲಿ ತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ನಡೆದಿದೆ ಎಂದು ಬಾಲಕಿಯನ್ನು ಕರೆತಂದು ಆಕೆಯ ಅಜ್ಜಿಯ ಸಹೋದರಿ ದೂರನ್ನು ದಾಖಲಿಸಿದ್ದರು.
ಪೋಕ್ಸೊ ಪ್ರಕರಣದಡಿ ಕೊಂಢ್ವಾ ಪೊಲೀಸರು ಮಹೇಶ್ವರ್ ಬಿಂದ್‌ಮಾಧವ್‌ನನ್ನು ಬಂಧಿಸಿದರು. ಆಗಸ್ಟ್ 2, 2018ರಂದು ಬಂಧನಕ್ಕೊಳಗಾಗಿ ಜೈಲಿಗೆ ಹೋದ ಮಹೇಶ್ವರ್ ಇದೇ ನವೆಂಬರ್ 25ರಂದು ಖುಲಾಸೆಯಾಗಿ ಹೊರಬಂದಿದ್ದಾರೆ.
ಟ್ರಯಲ್ ಮುಗಿದ ಬಳಿಕ ಪ್ರಕರಣದ ಮೂವರು ಪ್ರಮುಖ ಸಾಕ್ಷಿಗಳಾದ ಬಾಲಕಿ, ಆಕೆಯ ತಾಯಿ ಹಾಗೂ ಬಾಲಕಿಯ ಅಜ್ಜಿಯ ಸಹೋದರಿ ಮೂವರೂ ಸಹ ಲೈಂಗಿಕ ಕಿರುಕುಳ ನಡೆದಿದೆ ಎಂಬುದನ್ನು ಒಪ್ಪಲಿಲ್ಲ. ಮುಖ್ಯವಾಗಿ ಬಾಲಕಿ ತನ್ನ ಮೇಲೆ ಅತ್ಯಾಚಾರ ಆಗಿಲ್ಲ ಎಂದದ್ದು ಹಾಗೂ ದೂರು ದಾಖಲಿಸಿದ ಬಾಲಕಿಯ ಸಂಬಂಧಿ ಸಹ ಅತ್ಯಾಚಾರ ಆಗಿಲ್ಲ ಎಂದು ಸತ್ಯ ಬಾಯಿಬಿಟ್ಟಿದ್ದು ನ್ಯಾಯಾಲಯ ಮಹೇಶ್ವರ್ ಬಿಂದ್‌ಮಾಧವ್‌ರನ್ನು ನಿರಪರಾಧಿ ಎಂದು ತೀರ್ಪು ನೀಡಿ ಸುಳ್ಳು ಪ್ರಕರಣ ದಾಖಲಿಸಿದ ಬಾಲಕಿಯ ತಾಯಿ ಸಂಬಂಧಿಗೆ ಛೀಮಾರಿ ಹಾಕಿತು. ಇನ್ನು ಪತಿಯ ವಿರುದ್ಧ ಹಾಗೂ ತನ್ನ ಮಗಳ ಬಗ್ಗೆ ಗಂಭೀರ ವಿಷಯವೊಂದು ಕೇಳಿಬಂದಾಗ ಸತ್ಯ ಗೊತ್ತಿದ್ದರೂ ಇಷ್ಟು ವರ್ಷ ಸುಮ್ಮನಿದ್ದ ಬಾಲಕಿಯ ತಾಯಿ ನ್ಯಾಯಾಲಯದಲ್ಲಿ ತಲೆ ತಗ್ಗಿಸಿ ನಿಂತಿದ್ದಳು.
ಲಿಂಗಾಯತ ಸ್ವಾಮೀಜಿಗಳು ಬಸವ ತಾಲಿಬಾನಿಗಳು ಎಂದು ವೇದಿಕೆಯಲ್ಲೇ ನಾಲಿಗೆಹರಿಬಿಟ್ಟ ಕನ್ನೇರಿ ಶ್ರೀ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


