ಬೆಳಗಾವಿ: ಸದಾ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಗೀಡಾಗಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲಾಧಿಕಾರಿಗಳಿಂದ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ ಅನುಭವಿಸಿ ಬಳಿಕ ಕೋರ್ಟ್ ಮೆಟ್ಟಿಲೇರಿ ಅನುಮತಿ ಪಡೆದುಕೊಂಡಂತಹ ಕನ್ನೇರಿ ಶ್ರೀ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿ ಮತ್ತೆ ಸುದ್ದಿಯಾಗಿದ್ದಾರೆ.
ರಾಯಬಾಗದ ಹನುಮ ಮಾಲಾ ದೀಕ್ಷಾ ಸಮಾರಂಭದಲ್ಲಿ ಮಾತನಾಡಿದ ಕನ್ನೇರಿ ಶ್ರೀ ಹನುಮ ಮಾಲೆಯ ಕುರಿತು ಪ್ರಸ್ತಾಪಿಸಿ ಬಸವ ತಾಲಿಬಾನಿಗಳು ಎಂದು ಹೇಳಿಕೆಯನ್ನು ನೀಡಿ ಭಾರೀ ವಿವಾದ ಎಬ್ಬಿಸಿದ್ದಾರೆ.
ಹನುಮ ಮಾಲೆಯ ಕುರಿತು ಯಾರೂ ಟೀಕೆ ಮಾಡಬಾರದು ಎಂದ ಕನ್ನೇರಿ ಶ್ರೀ ಕಮ್ಯೂನಿಸ್ಟರು ಹಾಗೂ ನಮ್ಮಂತಹ ಬಟ್ಟೆ ಹಾಕಿಕೊಂಡ ಬಸವ ತಾಲಿಬಾನಿಗಳು ನಿಮ್ಮ ಮೇಲೆ ಟೀಕೆ ಮಾಡಬಹುದು. ಏಕೆಂದರೆ ಅವರು ಹಿಂದೆ ಬೇರೆ ಬೇರೆ ಸಂಪ್ರದಾಯಗಳ ಮೇಲೆ ಸಿಕ್ಕಾಪಟ್ಟೆ ಟೀಕೆ ಮಾಡಿದ್ದಾರೆ, ನಿಮ್ಮ ಮೇಲೂ ಟೀಕೆ ಮಾಡಬಹುದು ಎಂದರು.
ಇನ್ನು ಕೈನಲ್ಲಿ ಕೋಲು ಹಿಡಿದು ಪರೇಡ್ ಮಾಡುವ ಬಜರಂಗದಳ ಹಾಗೂ ಆರ್‌ಎಸ್‌ಎಸ್ ಕುರಿತ ಟೀಕೆಗಳನ್ನೂ ಸಹ ಇದೇ ವೇಳೆ ಉಲ್ಲೇಖಿಸಿದ ಅವರು ಕೋಲು ಹಿಡಿದುಕೊಳ್ಳದೇ ಇನ್ನೇನು ದೀಪ ಹಿಡಿದುಕೊಂಡು ಓಡಾಡಬೇಕಾ ಎಂದು ಪ್ರಶ್ನಿಸಿ ಕಿಡಿಕಾರಿದರು. ಅವರು ನಮ್ಮ ಮನೆ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರೆ ಅದೇ ದೀಪದಲ್ಲಿ ಆರತಿ ಎತ್ತಬೇಕಾ ಎಂದು ಆಕ್ರೋಶ ಹೊರಹಾಕಿದರು.
ಅಣ್ಣನ ಬುದ್ಧಿವಾದದಿಂದ ಮನನೊಂದು: ಕೆರೆಗೆ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಬಲಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


