ಗದಗ ;ಗದಗ ನಗರದ ಭೀಷ್ಮ ಕೆರೆಗೆ ಹಾರಿ ಚಂದ್ರಿಕಾ ನಡುವಿನಮನಿ (21) ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ದುಃಖಕರ ಘಟನೆ ನಡೆದಿದೆ.ಚಂದ್ರಿಕಾ ಅವರು ಬಾಗಲಕೋಟೆಯ ಶಿರೂರು ಮೂಲದವರಾಗಿದ್ದು, ಗದಗಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದರು.
ಗದಗ ನಗರದ ಭೀಷ್ಮ ಕೆರೆಗೆ ಹಾರಿ ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅನಗತ್ಯವಾಗಿ ಸುತ್ತಾಡುವುದನ್ನು ಬಿಟ್ಟು, ಓದಿನ ಕಡೆ ಗಮನ ಕೊಡು ಎಂದು ಸಹೋದರ ಬುದ್ಧಿವಾದ ಹೇಳಿದ್ದರು. ಇತ್ತೀಚೆಗೆ ಗೆಳೆಯರೊಂದಿಗೆ ಪ್ರವಾಸಕ್ಕೆ ಹೋಗಿ ಬಂದಿದ್ದಕ್ಕಾಗಿ ಹಾಗೂ ಓದಿನ ಕಡೆ ಗಮನ ನೀಡುವಂತೆ ಸಹೋದರ ಚೇತನ್ ಅವರು ಫೋನ್ ಮೂಲಕ ಬುದ್ಧಿವಾದ ಹೇಳಿದ್ದರು.ಸಹೋದರನ ಮಾತಿನಿಂದ ಮನನೊಂದ ವಿದ್ಯಾರ್ಥಿನಿ ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದರಿಂದ ಮನನೊಂದ ಚಂದ್ರಿಕಾ ಅವರು ತಡರಾತ್ರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.ನಿನ್ನೆ ರಾತ್ರಿ ಸುಮಾರು 1:30ಕ್ಕೆ ಬಾಡಿಗೆ ಮನೆಯಿಂದ ಹೊರಹೋಗಿದ್ದ ಚಂದ್ರಿಕಾ ಅವರ ಶವ ಇಂದು ಮುಂಜಾನೆ ಭೀಷ್ಮ ಕೆರೆಯಲ್ಲಿ ಪತ್ತೆಯಾಗಿದೆ.ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.ಒಳ್ಳೆಯ ಭವಿಷ್ಯಕ್ಕಾಗಿ ಸಹೋದರ ಹೇಳಿದ ಸಣ್ಣ ಬುದ್ಧಿವಾದಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿನಿ ತನ್ನ ಜೀವನವನ್ನು ಮುಗಿಸಿಕೊಂಡಿರುವುದು ಎಲ್ಲರಿಗೂ ಆಘಾತ ತಂದಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


