ಬೆಂಗಳೂರು (ನವೆಂಬರ್ 30, 2025): ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್‌ವುಡ್‌ನ ಹಿರಿಯ ನಟ ಹಾಗೂ ಹಾಸ್ಯ ಕಲಾವಿದ ಉಮೇಶ್ ಅವರು ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಹಾಸ್ಯ ನಟನಾಗಿ, ನಿರ್ದೇಶಕನಾಗಿ ನೂರಾರು ಸಿನಿಮಾಗಳಲ್ಲಿ ಎಂ.ಎಸ್ ಉಮೇಶ್‌ರವರು ಜನಪ್ರಿಯತೆ ಪಡೆದಿದ್ದರು.
ಹೀಗೆ ಅಗಲಿದ ಹಿರಿಯ ಕಲಾವಿದ ಉಮೇಶ್ ಬಗ್ಗೆ ಚಿತ್ರರಂಗ ಹಾಗೂ ರಾಜಕೀಯದ ಹಲವು ಗಣ್ಯರು ಮಾತನಾಡಿದ್ದು, ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ ಸಹ ತಾನು ತೆರೆ ಹಂಚಿಕೊಂಡ ಹಾಸ್ಯ ದಿಗ್ಗಜ ಉಮೇಶ್ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಉಮೇಶ್ ಅವರ ಸಾವಿನ ಸುದ್ದಿ ಕೇಳಿ ಬಹಳ ಬೇಸರವಾಯಿತು ಎಂದ ಟೆನ್ನಿಸ್ ಕೃಷ್ಣ ಅವರು ತೆರೆ ಮೇಲೆ ಮಾತ್ರವಲ್ಲದೇ ನಿಜ ಜೀನವದಲ್ಲಿಯೂ ಸಹ ಎಲ್ಲರನ್ನೂ ನಗಿಸುತ್ತಿದ್ದರು, ಮನಸ್ಸಿನೊಳಗೆ ಎಷ್ಟೇ ನೋವಿದ್ದರೂ ನಗಿಸುವುದು ಕಷ್ಟ ಎಂದು ಹೊಗಳಿದರು.
ತನಗೆ ತಂದೆಯಾಗಿಯೂ ಸಹ ಪಾತ್ರವನ್ನು ನಿರ್ವಹಿಸಿದ್ದರು ಎಂದ ಟೆನ್ನಿಸ್ ಕೃಷ್ಣ ಅವರೊಟ್ಟಿಗೆ ತುಂಬಾ ಚಿತ್ರಗಳಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಅದೃಷ್ಟ ಎಂದರು. ಕನ್ನಡ ಮಾತ್ರವಲ್ಲದೇ ತಮಿಳಿನಲ್ಲೂ ಸಹ ನಟಿಸುವ ಅವಕಾಶ ಬಂದಿತ್ತು, ಸ್ವತಃ ರಜನಿಕಾಂತ್ ಅವರು ತಮ್ಮ ಚಿತ್ರದಲ್ಲಿ ನಟಿಸುವ ಅವಕಾಶ ಮಾಡಿಕೊಟ್ಟರೂ ಉಮೇಶ್ ಅವರು ಹೋಗಲಿಲ್ಲ ಎಂದು ತಿಳಿಸಿದರು.
ಇನ್ನು ಕಳೆದ ಕೆಲವು ದಿನಗಳಿಂದ ಉಮೇಶ್ ಅವರಿಗೆ ತೀವ್ರ ಅನಾರೋಗ್ಯ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಮೃತಪಟ್ಟಿದ್ದಾರೆ.
ಉಮೇಶ್ ಅವರು ಕಳೆದ ಕೆಲ ದಿನಗಳ ಹಿಂದೆ ಮನೆಯಲ್ಲೇ ಕಾಲು ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆ ವೇಳೆ ಅವರಿಗೆ 4ನೇ ಹಂತದ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಅವರು ಕಿಮೋಥೆರಪಿ ಹಾಗೂ ಇಮ್ಯೂನೋಥೆರಪಿ ಮೂಲಕ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದರು.
ಕುಮಾರಸ್ವಾಮಿಗೆ ನಿಷ್ಠೆಯಿಂದ ಇದ್ದೆ; ಸಿದ್ದರಾಮಯ್ಯ ಜತೆಗಿನ ಭಿನ್ನಾಭಿಪ್ರಾಯದ ಬಗ್ಗೆ ಡಿಕೆಶಿ ಪ್ರತಿಕ್ರಿಯೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


