Wednesday, July 8, 2026
spot_img
More
    spot_img
    HomeLatest newsನಾನು ವೃತ್ತಿಜೀವನದ ಪೂರ್ತಿ ಬಾರಿಸಿದ ಸಿಕ್ಸರ್‌ಗಳನ್ನು ಅಭಿಷೇಕ್‌ ಶರ್ಮಾ 2 ಗಂಟೆಯಲ್ಲಿ ಬಾರಿಸಿಬಿಟ್ರು; ಮಾಜಿ ಇಂಗ್ಲೆಂಡ್‌...

    ನಾನು ವೃತ್ತಿಜೀವನದ ಪೂರ್ತಿ ಬಾರಿಸಿದ ಸಿಕ್ಸರ್‌ಗಳನ್ನು ಅಭಿಷೇಕ್‌ ಶರ್ಮಾ 2 ಗಂಟೆಯಲ್ಲಿ ಬಾರಿಸಿಬಿಟ್ರು; ಮಾಜಿ ಇಂಗ್ಲೆಂಡ್‌ ಕ್ರಿಕೆಟಿಗ

    ನಿನ್ನೆ (ಫೆಬ್ರವರಿ 2 ) ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಿನ ಪಂದ್ಯದಲ್ಲಿ ಭಾರತ 150 ರನ್‌ಗಳ ಭರ್ಜರಿ ಗೆಲುವು ದಾಖಲಿಸುವುದರ ಮೂಲಕ 5 ಪಂದ್ಯಗಳ ಟಿ20 ಸರಣಿಯನ್ನು 4-1 ಅಂತರದಿಂದ ಗೆದ್ದು ಬೀಗಿದೆ.

    Advertisement

    ಇನ್ನು ಅಂತಿಮ ಪಂದ್ಯದಲ್ಲಿ ಭಾರತ ಬೃಹತ್‌ ಮೊತ್ತ ಗಳಿಸಲು ಕಾರಣರಾದ ಅಭಿಷೇಕ್‌ ಶರ್ಮಾ 54 ಎಸೆತಗಳಲ್ಲಿ 7 ಬೌಂಡರಿ, 13 ಸಿಕ್ಸರ್‌ ಸೇರಿದಂತೆ 135 ರನ್‌ ಬಾರಿಸಿ ದಾಖಲೆಯ ಆಟವನ್ನಾಡಿದರು. ಹೀಗೆ ಒಂದೇ ಇನ್ನಿಂಗ್ಸ್‌ನಲ್ಲಿ 13 ಸಿಕ್ಸರ್‌ ಬಾರಿಸಿ ಅಬ್ಬರಿಸಿರುವ ಅಭಿಷೇಕ್‌ ಶರ್ಮಾ ಬ್ಯಾಟಿಂಗ್‌ ವೈಖರಿ ಕಂಡು ಇಡೀ ಕ್ರಿಕೆಟ್‌ ಜಗತ್ತೇ ಫಿದಾ ಆಗಿದೆ.

    ಅಭಿಷೇಕ್‌ ಶರ್ಮಾ ಭರ್ಜರಿ ಬ್ಯಾಟಿಂಗ್‌ ಕುರಿತು ದಿಗ್ಗಜ ಕ್ರಿಕೆಟಿಗರೂ ಸಹ ಮಾತನಾಡಿ ಹೊಗಳಿದ್ದು, ಇದೀಗ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಅಲಸ್ಟೈರ್‌ ಕುಕ್‌ ನನ್ನ ವೃತ್ತಿ ಜೀವನದ ಸಿಕ್ಸರ್‌ಗಳನ್ನೆಲ್ಲಾ ಅಭಿಷೇಕ್‌ ಶರ್ಮಾ ಒಂದೇ ಪಂದ್ಯದಲ್ಲಿ ಬಾರಿಸಿದರು ಎಂದು ಹೇಳಿಕೆ ನೀಡುವುದರ ಮೂಲಕ ಪ್ರಶಂಸಿಸಿದ್ದಾರೆ.

    ಹೌದು, ಪಂದ್ಯ ವೀಕ್ಷಿಸಿದ ಬಳಿಕ ಮಾತನಾಡಿದ ಅವರು ನಾನು ನನ್ನ ವೃತ್ತಿ ಜೀವನದುದ್ದಕ್ಕೂ ಬಾರಿಸಿದ ಎಲ್ಲಾ ಸಿಕ್ಸರ್‌ಗಳನ್ನೂ ಅಭಿಷೇಕ್‌ ಶರ್ಮಾ ಕೇವಲ ಎರಡು ಗಂಟೆಗಳಲ್ಲಿಯೇ ಬಾರಿಸಿಬಿಟ್ಟರು ಎಂದು ಕುಕ್‌ ಹೇಳಿಕೊಂಡಿದ್ದಾರೆ.

    ಅಂದಹಾಗೆ ಇಂಗ್ಲೆಂಡ್‌ನ ಅಲಸ್ಟೈರ್‌ ಕುಕ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಟ್ಟು 11 ಸಿಕ್ಸರ್‌ ಬಾರಿಸಿದ್ದು, ಏಕದಿನ ಕ್ರಿಕೆಟ್‌ನಲ್ಲಿ 10 ಸಿಕ್ಸರ್‌ ಬಾರಿಸಿದ್ದಾರೆ ಹಾಗೂ ಇನ್ನುಳಿದಂತೆ ಕೇವಲ 4 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಕುಕ್‌ ಯಾವುದೇ ಸಿಕ್ಸರ್‌ ಬಾರಿಸಿಲ್ಲ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading