ನವದೆಹಲಿ;ಉದ್ಯಮಿ ಚಂದ್ರಿಕಾ ಟಂಡನ್‌ಗೆ ಗ್ರಾಮಿ ಅವಾರ್ಡ್(Grammy Award) ಚೆನ್ನೈ ಮೂಲದ ಅಮೆರಿಕ ಪ್ರಜೆ ಚಂದ್ರಿಕಾ ಟಂಡನ್ ತಮ್ಮ ‘ತ್ರಿವೇಣಿ(Triveni)’ ಅಲ್ಬಮ್‌ಗೆ 67ನೇ ಗ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.ಲಾಸ್ ಏಂಜಲೀಸ್‌ನ ಕ್ರಿಪ್ಟೋ ಡಾಟ್ ಕಾಮ್ ಅರೆನಾದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಸತ್ಕರಿಸಲಾಗಿದೆ. 67ನೇ ವಾರ್ಷಿಕ ಗ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ತಮ್ಮ ‘ತ್ರಿವೇಣಿ’ ಅಲ್ಬಮ್‌ಗಾಗಿ ಅತ್ಯುತ್ತಮ ಹೊಸ ಪೀಳಿಗೆಯ, ಚಾಂಟ್ ಅಲ್ಬಮ್ ವಿಭಾಗದಲ್ಲಿ ಗ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. 7 ಟ್ರ್ಯಾಕ್‌ಗಳ ತ್ರಿವೇಣಿ ಅಲ್ಬಮ್, ಪ್ರಾಚೀನ ಮಂತ್ರಗಳು ಮತ್ತು ವಿಶ್ವ ಸಂಗೀತದ ಸಮ್ಮಿಶ್ರಣವಾಗಿದೆ.ಈ ಆಲ್ಬಂನಲ್ಲಿ ಒಟ್ಟು ಏಳು ಹಾಡುಗಳಿದ್ದು ಅವೆಲ್ಲವೂ ಕೇಳುಗರಿಗೆ ವಿಶೇಷ ಅನುಭವ ನೀಡುತ್ತವೆ ಎಂದು ಪ್ರಶಸ್ತಿ ವಿಜೇತರಾದ ಚಂದ್ರಿಕಾ ಟಂಡನ್ ಅವರು ಹೇಳಿದ್ದಾರೆ.ರೆಕಾರ್ಡಿಂಗ್ ಅಕಾಡೆಮಿ ಆಯೋಜಿಸಿದ ಅತಿದೊಡ್ಡ ಸಂಗೀತ ಪ್ರಶಸ್ತಿಯ 67 ನೇ ಆವೃತ್ತಿ ಇದಾಗಿದೆ.ದಕ್ಷಿಣ ಆಫ್ರಿಕಾದ ಫ್ಲೌಟಿಸ್ಟ್ ವೂಟರ್ ಕೆಲ್ಲರ್‌ಮ್ಯಾನ್ ಮತ್ತು ಜಪಾನಿನ ಸೆಲಿಸ್ಟ್ ಎರು ಮಾಟ್ಸುಮೊಟೊ ಅವರ ಒಟ್ಟಿಗೆ ಜೊತೆ ಸೇರಿ ಚಂದ್ರಿಕಾ ಅವರು ‘ತ್ರಿವೇಣಿ’ ಆಲ್ಬಂ ಮಾಡಿದ್ದರು. ‘ನನಗೆ ಖುಷಿ ಆಗುತ್ತಿದೆ’ ಎಂದು ಚಂದ್ರಿಕಾ ಅವರು ಹೇಳಿಕೊಂಡಿದ್ದಾರೆ. ಈ ಸಹಯೋಗದಲ್ಲಿ ಅನೌಷ್ಕಾ ಶಂಕರ್, ರಾಧಿಕಾ ವೆಕಾರಿಯಾ ಕೂಡ ಇದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


