Friday, June 19, 2026
spot_img
More
    spot_img
    HomeEntertainmentರಾಮಾಯಣ ಗ್ಲಿಂಪ್ಸ್‌ ಬಿಡುಗಡೆ: ರಾವಣನ ಪ್ರತೀಕಾರ vs ರಾಮನ ಧರ್ಮದ ಯುದ್ಧ; ಹೇಗಿದೆ ಗ್ಲಿಂಪ್ಸ್?

    ರಾಮಾಯಣ ಗ್ಲಿಂಪ್ಸ್‌ ಬಿಡುಗಡೆ: ರಾವಣನ ಪ್ರತೀಕಾರ vs ರಾಮನ ಧರ್ಮದ ಯುದ್ಧ; ಹೇಗಿದೆ ಗ್ಲಿಂಪ್ಸ್?

    ಬಾಲಿವುಡ್‌ ನಿರ್ದೇಶಕ ನಿತೇಶ್‌ ತಿವಾರಿ ಇದೇ ಮೊದಲ ಬಾರಿಗೆ ಪೌರಾಣಿಕ ಸಿನಿಮಾವೊಂದನ್ನು ನಿರ್ದೇಶಿಸಿದ್ದು, ಜನಪ್ರಿಯ ರಾಮಾಯಣವನ್ನು ತೆರೆ ಮೇಲೆ ತರಲು ಮುಂದಾಗಿದ್ದಾರೆ. ಎರಡು ಭಾಗಗಳಲ್ಲಿ ರಾಮಾಯಣ ಬಿಡುಗಡೆಯಾಗಲಿದ್ದು, ಇದೀಗ ರಾಮಾಯಣ ಇಂಟ್ರೊಡಕ್ಷನ್‌ ಗ್ಲಿಂಪ್ಸ್‌ ಬಿಡುಗಡೆಯಾಗಿದೆ.

    Advertisement

    ʼವರ್ಲ್ಡ್‌ ಆಫ್‌ ರಾಮಾಯಣʼ ಎಂಬ ಹೊಸ ಯುಟ್ಯೂಬ್‌ ಚಾನೆಲ್‌ನಲ್ಲಿ ಈ ಗ್ಲಿಂಪ್ಸ್‌ ಬಿಡುಗಡೆಗೊಂಡಿದ್ದು, 3.03 ನಿಮಿಷಗಳ ಈ ಗ್ಲಿಂಪ್ಸ್‌ ಗುಣಮಟ್ಟ ವಿಶ್ವಮಟ್ಟದಲ್ಲಿದೆ. ಈ ವಿಡಿಯೊ ಸಂಪೂರ್ಣ ವಿಎಫ್‌ಎಕ್ಸ್‌ ಹಾಗೂ ಗ್ರಾಫಿಕ್‌ನಿಂದಲೇ ಕೂಡಿದ್ದು, ನಿರ್ದೇಶಕರು ಚಿತ್ರದ ದೃಶ್ಯಗಳನ್ನೇನೂ ಬಿಟ್ಟುಕೊಟ್ಟಿಲ್ಲ.

    ಮೊದಲಿಗೆ ಬ್ರಹ್ಮ ಸೃಷ್ಟಿಕರ್ತ, ವಿಷ್ಣು ಸಂರಕ್ಷಕ ಹಾಗೂ ಶಿವ ವಿನಾಶಕ ಎಂಬ ಸಾಲುಗಳೊಂದಿಗೆ ಆರಂಭವಾಗುವ ಗ್ಲಿಂಪ್ಸ್‌ನಲ್ಲಿ ಈ ತ್ರಿಮೂರ್ತಿಗಳಿಂದಾದ ಸೃಷ್ಟಿಯೇ ಬ್ರಹ್ಮಾಂಡವನ್ನು ತನ್ನ ಮುಷ್ಟಿಯಲ್ಲಿಟ್ಟುಕೊಳ್ಳಲು ಹೊರಟಾಗ ಎಲ್ಲ ಯುದ್ಧಗಳಿಗೂ ಅಂತ್ಯ ಹಾಡುವಂತಹ ಮಹಾ ಯುದ್ಧ ಪ್ರಾರಂಭವಾಯಿತು ಎಂದು ರಾವಣನ ಪರಿಚಯ ನೀಡಲಾಗಿದೆ.

    ಬಳಿಕ ರಾವಣನ ಶಕ್ತಿ ಹಾಗೂ ಪ್ರತೀಕಾರ ಮತ್ತು ರಾಮನ ಧರ್ಮ ಹಾಗೂ ತ್ಯಾಗದ ನಡುವಿನ ಅಮರ ಕಥೆ ಇದಾಗಿದೆ ಎಂದು ಸಣ್ಣ ವಿವರಣೆ ನೀಡಲಾಗಿದೆ. ಇನ್ನು ರಾಮನಾಗಿ ರಣ್‌ಬೀರ್‌ ಕಪೂರ್‌, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ರಾಕಿಂಗ್‌ ಸ್ಟಾರ್‌ ಯಶ್‌ ನಟಿಸಿದ್ದಾರೆ.

    ಗ್ಲಿಂಪ್ಸ್‌ನ ಕೊನೆಯಲ್ಲಿ ರಾಮ ಬಿಲ್ಲು ದಾಳಿ ನಡೆಸುವ ದೃಶ್ಯವಿದ್ದು, ರಾವಣ ಕಪ್ಪು ಹೊದಿಕೆ ಹೊದ್ದು ಅರ್ಧಮುಖ ಪ್ರದರ್ಶಿಸುವ ರೋಮಾಂಚನದ ದಶ್ಯಗಳು ವೀಕ್ಷಕರ ಮನ ಗೆದ್ದಿವೆ. ಈ ದೀಪಾವಳಿಗೆ ಮೊದಲ ಭಾಗ ಬಿಡುಗಡೆಯಾದರೆ, ಮುಂದಿನ ದೀಪಾವಳಿಗೆ ಎರಡನೇ ಭಾಗ ಬಿಡುಗಡೆಯಾಗಲಿದೆ.

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಮೈಕ್ರೋಸಾಫ್ಟ್‌ನಲ್ಲಿ ಲೇಆಫ್‌ ಮುಂದುವರಿಕೆ: 9,000 ಉದ್ಯೋಗ ಕಡಿತ, ಸೇಲ್ಸ್ ತಂಡವೇ ಮುಖ್ಯ ಟಾರ್ಗೆಟ್!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಕಾಕ್ರೋಚ್ ಜನತಾ ಪಾರ್ಟಿ: ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ ವೈರಲ್ ಟ್ರೆಂಡ್!

    ಕಾಕ್ರೋಚ್ ಜನತಾ ಪಾರ್ಟಿ ಎಂಬ ಪದ ಸಾಮಾಜಿಕ ಜಾಲತಾಣದಲ್ಲಿ ಯಾವಾಗ, ಹೇಗೆ ವೈರಲ್ ಆಯಿತು? ಈ ಟ್ರೆಂಡ್ ಹಿಂದಿನ ಸಂಪೂರ್ಣ ಕಥೆ ಓದಿ.

    ಬೆಂಗಳೂರಿನಲ್ಲಿ ಮುಂಗಾರು ಆರ್ಭಟ: ಆಲಿಕಲ್ಲು ಮಳೆ, ಗುಡುಗು-ಸಿಡಿಲಿಗೆ ನಗರ ತತ್ತರ

    ಬೆಂಗಳೂರು: ಸಂಜೆ ಐಟಿ ರಾಜಧಾನಿ ಬೆಂಗಳೂರಿನ ಮೇಲೆ ಪ್ರಕೃತಿ ತನ್ನ ಕೋಪವನ್ನು ಸಂಪೂರ್ಣವಾಗಿ ತೋರಿಸಿತು. ಕಾರ್ಮೋಡ ಕವಿದ ಆಕಾಶದಿಂದ ಮೊದಲು ಗುಡುಗು-ಸಿಡಿಲಿನ ಆರ್ಭಟ, ಬಳಿಕ ಆಲಿಕಲ್ಲು ಮಳೆ ಮತ್ತು ಜೋರು ಗಾಳಿ ನಗರವನ್ನು...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading