ನವರಸ ನಾಯಕ ಮತ್ತು ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ವರ್ಷದಲ್ಲಿ ಕೇವಲ 28 ದಿನ ಮಾತ್ರ ಭಕ್ತರಿಗೆ ದರ್ಶನ ನೀಡುವ ಕೇರಳದ ಕೊಣ್ಣುರು ಸಮೀಪದ ಪವಿತ್ರ ಕೊಟ್ಟಿಯೂರು ಶಿವ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಈ ದೇವಸ್ಥಾನವು ಕೇರಳದ ಕಣ್ಣುರು ಜಿಲ್ಲೆಯ ದಟ್ಟ ಕಾಡುಗಳ ಮಧ್ಯೆ, ಬಾವಲಿ ನದಿಯ ತೀರದಲ್ಲಿ ನೆಲೆಗೊಂಡಿದೆ. ಜಗ್ಗೇಶ್ ಅವರು ಬಾವಲಿ ನದಿಯನ್ನು ದಾಟಿ, ಅಕ್ಕರೆ ಕೊಟ್ಟಿಯೂರು ದೇವಸ್ಥಾನದಲ್ಲಿ ಶಿವನ ದರ್ಶನ ಪಡೆದಿದ್ದಾರೆ. ಈ ಕ್ಷಣವನ್ನು ಅವರು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ವಿಡಿಯೋ ಹಾಗೂ ಚಿತ್ರಗಳೊಂದಿಗೆ ಹಂಚಿಕೊಂಡಿದ್ದಾರೆ, ಇತ್ತೀಚೆಗೆ ನಟ ದರ್ಶನ್ ತೂಗುದೀಪ್ ಅವರು ಕೂಡ ತಮ್ಮ ಕುಟುಂಬದೊಂದಿಗೆ ಇದೇ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲದೆ, ಕನ್ನಡದ ಇನ್ನೂ ಹಲವು ಸೆಲೆಬ್ರಿಟಿಗಳು ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ್ದು, ಜಗ್ಗೇಶ್ ಅವರೂ ಈಗ ಈ ಪವಿತ್ರ ಕ್ಷೇತ್ರದಲ್ಲಿ ಶಿವನ ದರ್ಶನ ಪಡೆದಿದ್ದಾರೆ. ಈ ಅನುಭವವನ್ನು ಜಗ್ಗೇಶ್ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ಈ ಕ್ಷೇತ್ರದ ಪೌರಾಣಿಕತೆ, ನೈಸರ್ಗಿಕ ಸೌಂದರ್ಯ ಮತ್ತು ಆಧ್ಯಾತ್ಮಿಕ ಶಾಂತಿಗೆ ಮತ್ತಷ್ಟು ಪ್ರಾಮುಖ್ಯತೆ ನೀಡಿದೆ
ಕೇರಳದ ಈ ಪ್ರಸಿದ್ಧ ಹಾಗೂ ಪುರಾತನ ಕ್ಷೇತ್ರದ ಬಗ್ಗೆ ಜನತೆಗೆ ಇರೋ ಮಾಹಿತಿ ಅತ್ಯಲ್ಪ. ಇದನ್ನು ‘ದಕ್ಷಿಣದ ಕಾಶಿ’ ಎಂದೂ ಸಹ ಕರೆಯುತ್ತಾರೆ. ಅಕ್ಕರೆ ಕೊಟ್ಟಿಯೂರು ದೇವಸ್ಥಾನವು ವರ್ಷಕ್ಕೆ 28 ದಿನ ಮಾತ್ರ ತೆರೆಯಲಾಗುತ್ತದೆ ಮತ್ತು ಪ್ರತಿ ವರ್ಷ ವೈಶಾಖ ಮಹೋತ್ಸವ ಸಂದರ್ಭದಲ್ಲಿ ಜೂನ್ 8ರಿಂದ ಜುಲೈ 4ರ ತನಕ ಭಕ್ತರಿಗೆ ದರ್ಶನ ನೀಡುತ್ತದೆ. ಈ ಪವಿತ್ರ ಕ್ಷೇತ್ರವು ನೈಸರ್ಗಿಕ ಸೌಂದರ್ಯ ಮತ್ತು ಆಧ್ಯಾತ್ಮಿಕತೆ ಮಿಶ್ರಿತವಾಗಿ, ದೇವರ ದರ್ಶನಕ್ಕಾಗಿ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಈಗಾಗಲೇ ಲಕ್ಷಾಂತರ ಭಕ್ತರು ಈ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಿ ಶಿವನ ಕೃಪೆಗೆ ಪಾತ್ರರಾಗಿದ್ದಾರೆ. ಕಣ್ಣೂರಿನ ಬೆಟ್ಟಗಾಡುಗಳ ಮಧ್ಯೆ ಹಸಿರಿನ ನೈಸರ್ಗಿಕ ಸೌಂದರ್ಯದಲ್ಲಿ ಅಂಕುಡೊಂಕಾಗಿ ಇರುವ ಈ ಕ್ಷೇತ್ರದಲ್ಲಿ ಎರಡು ದೇವಸ್ಥಾನಗಳಿವೆ,ಪುರಾಣ ಕತೆಗಳಲ್ಲಿ ಬರುವ ದಕ್ಷಯಾಗ ನಡೆದಿದ್ದು ಇಲ್ಲೇ ಮತ್ತು ಇದೇ ಸ್ಥಳದಲ್ಲಿ ಸತೀದೇವಿ ತನ್ನನ್ನು ತಾನು ಯಜ್ಞಕುಂಡಕ್ಕೆ ಅರ್ಪಣೆಮಾಡಿಕೊಂಡಳು ಎಂಬ ಪ್ರತೀತಿ ಇದೆ. ಆ ಯಜ್ಞ ನಡೆದ ಸ್ಥಲವೇ ಇದು ಎಂಬುದು ಇಲ್ಲಿನ ಪ್ರತೀತಿ

ಪೊಲೀಸ್ ಅಧಿಕಾರಿಗೆ ಧನ್ಯವಾದ ಸಲ್ಲಿಸಿದ ನಟ ಜಗ್ಗೇಶ್!
ಜಗ್ಗೇಶ್ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ಶ್ರೀ ಕೊಟ್ಟಿಯೂರು ಶಿವನ ಆಲಯಕ್ಕೆ ಭೇಟಿ ನೀಡಿದ ಆಧ್ಯಾತ್ಮಿಕ ಕ್ಷಣ.”ಇದು ಹಿಂದೆ ಕಾಡಿನ ಸುತ್ತಮುತ್ತ ವಾಸಮಾಡುತ್ತಿದ್ದ ಜನರ ಆರಾಧನ ಕ್ಷೇತ್ರವಾಗಿತ್ತು. ಇಂದು ಶಬರಿಮಲೆ ಅಯ್ಯಪ್ಪನ ಆಲಯದಂತೆ ಪ್ರಸಿದ್ಧಿ ಪಡೆದಿದೆ. ಸರ್ವೇಜನಾಃ ಸುಖಿನೋಭವಂತು,” ಎಂದು ಹೇಳಿದ್ದಾರೆ. ಜೊತೆಗೆ, ಕೇರಳದಲ್ಲಿ ತಮ್ಮ ಭೇಟಿ ಯಶಸ್ವಿಯಾಗಲು ಸಹಾಯ ಮಾಡಿದ ಕರ್ನಾಟಕ ಮೂಲದ ಪೊಲೀಸ್ ಅಧಿಕಾರಿ ಯತೀಶ್ ಚಂದ್ರ ಅವರಿಗೆ ಜಗ್ಗೇಶ್ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. “ನನ್ನ ಆತ್ಮೀಯ ಮಿತ್ರ, ಕೇರಳ ರಾಜ್ಯದ DIG ಪೊಲೀಸ್ ಅಧಿಕಾರಿ ಯತೀಶ್ ಚಂದ್ರ ಅವರು ನನಗೆ ಆತಿಥ್ಯ ನೀಡಿ ದರ್ಶನಕ್ಕೆ ಸಹಕಾರಿಯಾದರು. ಧನ್ಯವಾದಗಳು ಸಾರ್,” ಎಂದು ಜಗ್ಗೇಶ್ ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಆಷಾಢ ಹಿನ್ನೆಲೆ ಚಾಮುಂಡಿಬೆಟ್ಟಕ್ಕೆ ಶಿವರಾಜ್‌ಕುಮಾರ್ ದಂಪತಿ ಭೇಟಿ
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


