ಬೆಂಗಳೂರು: ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ತಿರುಗುವ ಕರ್ಮ ಸಿದ್ದರಾಮಯ್ಯ ಅವರಿಗೆ ಬರಬಾರದಿತ್ತು ಎಂದು ಜೆಡಿಎಸ್ ಟೀಕಿಸಿದೆ.
ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ನಾನೇ ಸಿಎಂ ಎಂದು ಮಾಧ್ಯಮಗಳ ಮುಂದೆ ಹೇಳಿಕೊಳ್ಳುತ್ತಿರುವುದರ ಹಿಂದೆ ಸಿಎಂ ಕುರ್ಚಿ ಅಲುಗಾಡುತ್ತಿರುವುದನ್ನು ಸೂಚಿಸುತ್ತಿದೆ ಎಂದು ಹೇಳಿದೆ.
ನಾಯಕತ್ವ ಬದಲಾವಣೆ ಆಗಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬಣದ ಕಾಂಗ್ರೆಸ್ ಶಾಸಕರಾದ ಇಕ್ಬಾಲ್ ಹುಸೇನ್, ಹೆಚ್.ಸಿ ಬಾಲಕೃಷ್ಣ, ಡಾ.ರಂಗನಾಥ್, ರವಿ ಗಾಣಿಗ ಸೇರಿದಂತೆ ಹಲವರು ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದಾರೆ. ಇನ್ನು ತಮ್ಮ ನಾಯಕನ ಕುರ್ಚಿಗೆ ಕುತ್ತು ಬಂದಿರುವುದು ಸ್ಪಷ್ಟವಾಗುತ್ತಲೇ ಸಿದ್ದರಾಮಯ್ಯ ಆಪ್ತರು ಸಹ ಕೂಗುಮಾರಿಗಳಂತೆ ಅವರ ಪರ ಬ್ಯಾಟ್ ಬೀಸುತ್ತಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.
ಲಾಟರಿ ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ಸರ್ಕಾರದ ದುರಾಡಳಿತದ ವಿರುದ್ಧ ಮತ್ತು ನಿಮ್ಮ ನಾಯಕತ್ವದ ಬಗ್ಗೆ ಸಚಿವರು ಹಾಗೂ ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನದ ಬೆಂಕಿ ಎದ್ದು, ಹಾದಿ ಬೀದಿಯಲ್ಲಿ ಹೊಗೆಯಾಡುತ್ತಿದೆ. ವಿಪಕ್ಷಗಳ ವಿರುದ್ಧ ಬೆಂಕಿಯುಗುಳಿದರೇ, ನಿಮ್ಮ ಹೊಟ್ಟೆಕಿಚ್ಚು ಮತ್ತಷ್ಟು ಉಲ್ಬಣಿಸುತ್ತದೆಯೇ ಹೊರತು, ಉಪಶಮನವಾಗುವುದಿಲ್ಲ ಎಂದು ಜೆಡಿಎಸ್ ಟೀಕೆ ಮಾಡಿದೆ.
ದೇವನಹಳ್ಳಿ ರೈತ ಚಳವಳಿಗೆ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಬೆಂಬಲ; ಮುಖ್ಯಮಂತ್ರಿಗೆ ಪತ್ರ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗೆ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


