ಹಾಸನ: ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ಸತತವಾಗಿ ಹೃದಯಾಘಾತಕ್ಕೊಳಗಾಗಿ ಸಾಯುತ್ತಿರುವವರ ವರದಿಯಾಗುತ್ತಲೇ ಇದ್ದು, ಇಂದು ( ಜುಲೈ 3 ) ಹಾಸನದಲ್ಲಿ ಮತ್ತೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಚಿಕ್ಕನಾಯಕನಹಳ್ಳಿಯ ಸಿ.ಬಿ. ವಿರೂಪಾಕ್ಷ ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದು, ಈ ಮೂಲಕ ಕಳೆದ 43 ದಿನಗಳಲ್ಲಿ ಒಟ್ಟು 29 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಇನ್ನು ನಿನ್ನೆಯಷ್ಟೇ ಹಾಸನ ಜಿಲ್ಲೆಯಲ್ಲಿ ಇಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದು, ಸದ್ಯ ಸ್ಥಳೀಯರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗುತ್ತಲೇ ಇದೆ.
ವಿರೂಪಾಕ್ಷ ಅವರಿಗೆ ಎದೆ ನೋವು ಕಾಣಿಸಿಕೊಂಡ ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ನಿನ್ನೆ ಬೆಳಗ್ಗೆ 53 ವರ್ಷದ ಸಂಪತ್ ಕುಮಾರ್ ಎನ್ನುವವರು ಹೃದಯಾಘಾತಕ್ಕೆ ಬಲಿಯಾಗಿದ್ದರು. ಹಾಸನ ನಗರದ ಕರಿಗೌಡ ಕಾಲೊನಿಯ ನಿವಾಸಿ ಸಂಪತ್ ಅವರನ್ನು ಎದೆ ನೋವು ಕಾಣಿಸಿಕೊಂಡ ಕಾರಣ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಲ್ಲದೇ ನಿನ್ನೆ ಹಾಸನ ತಾಲೂಕಿನ ಮುಟ್ನಳ್ಳಿಯ 52 ವರ್ಷದ ಸಣ್ಣಪ್ಪಶೆಟ್ಟಿ ಎಂಬುವವರೂ ಸಹ ಹೃದಯಾಘಾತಕ್ಕೆ ಬಲಿಯಾಗಿದ್ದರು.
ಸಾಲು ಸಾಲು ಹೃದಯಾಘಾತ; ಕಾರಣ ತಿಳಿಯಲು ತಜ್ಞರ ಸಮಿತಿ
ಕನ್ನಡ ಕೃಷಿ ಎಐ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


