Thursday, November 5, 2026
spot_img
More
    spot_img
    HomeTop Storyಭಾರತ vs ಆಸ್ಟ್ರೇಲಿಯಾ 5ನೇ ಟೆಸ್ಟ್: ಪಂತ್‌ ದಾಖಲೆಯ ಅರ್ಧಶತಕ;‌ ಭಾರತಕ್ಕೆ 145 ರನ್‌ ಮುನ್ನಡೆ

    ಭಾರತ vs ಆಸ್ಟ್ರೇಲಿಯಾ 5ನೇ ಟೆಸ್ಟ್: ಪಂತ್‌ ದಾಖಲೆಯ ಅರ್ಧಶತಕ;‌ ಭಾರತಕ್ಕೆ 145 ರನ್‌ ಮುನ್ನಡೆ

    ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್‌- ಗವಾಸ್ಕರ್ ಸರಣಿಯ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ರಿಷಭ್‌ ಪಂತ್‌ ವೇಗದ ಅರ್ಧಶತಕದ ಬಲದಿಂದ ಭಾರತ ತಂಡ ಎರಡನೇ ದಿನದಾಟದಂತ್ಯಕ್ಕೆ 145 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

    ಟಾಸ್‌ ಗೆದ್ದು ಮೊದಲ ಇನ್ನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿದ ಪ್ರವಾಸಿ ಭಾರತ ತಂಡ ರಿಷಭ್‌ ಪಂತ್‌ 40(98) ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ಆಸ್ಟ್ರೇಲಿಯಾ ಬೌಲರ್‌ಗಳ ಎದುರು ರನ್‌ಗಳಿಸಲು ಪರದಾಡುವ ಮೂಲಕ ಮೊದಲ ದಿನವೇ 185 ರನ್‌ಗಳಿಗೆ ಆಲೌಟ್‌ ಅಯಿತು. ಆಸ್ಟ್ರೇಲಿಯಾ ಪರ ಬೋಲ್ಯಾಂಡ್‌ 4 ವಿಕೆಟ್‌ ಪಡೆದರೆ, ಸ್ಟಾರ್ಕ್‌ 3 ವಿಕೆಟ್, ಕಮಿನ್ಸ್‌ 2 ವಿಕೆಟ್‌ ಹಾಗೂ ಲಿಯಾನ್‌ ಒಂದು ವಿಕೆಟ್‌ ಪಡೆದರು.

    ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್‌ ಶುರುಮಾಡಿದ ಆಸೀಸ್‌ ಬ್ಯಾಟರ್‌ಗಳು ಕೂಡ ಟೀಮ್‌ ಇಂಡಿಯಾದ ಬೌಲರ್‌ಗಳ ಎದುರು ಮಂಡಿಯೂರುವ ಮೂಲಕ 181 ರನ್‌ಗಳಿಗೆ ಆಲೌಟ್‌ ಆಯಿತು. ಇಂಡಿಯಾದ ಪರ ಮೊಹಮ್ಮದ್‌ ಸಿರಾಜ್‌ ಹಾಗೂ ಪ್ರಸಿದ್ಧ ಕೃಷ್ಣ 3 ವಿಕೆಟ್‌ ಪಡೆದರೆ, ಬುಮ್ರಾ ಹಾಗೂ ನಿತೀಶ್‌ ರೆಡ್ಡಿ 2 ವಿಕೆಟ್‌ ಪಡೆದರು.

    4 ರನ್‌ಗಳ ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಭಾರತ ಎರಡನೇ ದಿನದಾಂತ್ಯಕ್ಕೆ 32 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 141 ರನ್‌ಗಳಿಸಿದೆ.

    ಆಸೀಸ್‌ ದಾಳಿ ಎದುರು ಎಂದಿನಂತೆ ಭಾರತದ ಅಗ್ರ ಬ್ಯಾಟರ್‌ಗಳು ರನ್‌ಗಳಿಸಲು ಪರದಾಡಿದರು. ಆದರೆ ರಿಷಭ್‌ ಪಂತ್‌ 61(33) ವೇಗದ ಅರ್ಧಶತಕ ಸಿಡಿಸಿ ಭಾರತದ ಇನ್ನಿಂಗ್ಸ್‌ಗೆ ಬಲ ತುಂಬಿದರು. 29‌ ಎಸೆತಗಳಲ್ಲಿ ಅರ್ಧಶತಕ ಗಳಿಸಿದ ರಿಷಭ್, ದೀರ್ಘ ಮಾದರಿಯಲ್ಲಿ ಎರಡನೇ ಬಾರಿಗೆ 30ಕ್ಕಿಂತ ಕಡಿಮೆ ಎಸೆತಗಳಲ್ಲಿ 50 ರನ್‌ ಗಳಿಸಿದರು.

    ತೀವ್ರ ವೈಫಲ್ಯ ಅನುಭವಿಸಿದ ಭಾರತದ ಬ್ಯಾಟರ್‌ಗಳಾದ ಜೈಸ್ವಾಲ್‌ 22(35), ಕೆಲ್‌ ರಾಹುಲ್‌ 13(20), ಶುಭಮನ್‌ ಗಿಲ್‌ 13(15), ವಿರಾಟ್‌ ಕೊಹ್ಲಿ 6(12), ನಿತೀಶ್‌ ರೆಡ್ಡಿ 4(21) ರನ್‌ಗಳಿಸಿ ಔಟಾದರು.

    ಸದ್ಯ ರವೀಂದ್ರ ಜಡೇಜಾ 8 ರನ್‌ ಹಾಗೂ ವಾಷಿಂಗ್ಟನ್‌ ಸುಂದರ್‌ 6 ರನ್‌ಗಳಿಸಿ 3ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

    ಆಸ್ಟ್ರೇಲಿಯಾ ಪರ ಬೋಲ್ಯಾಂಡ್‌ ಮತ್ತೆ 4 ವಿಕೆಟ್‌ ಉರುಳಿಸಿದರೆ, ಪ್ಯಾಟ್‌ ಕಮಿನ್ಸ್‌ ಮತ್ತು ವೆಬ್‌ಸ್ಟರ್‌ ತಲಾ ಒಂದು ವಿಕೆಟ್‌ ಹಂಚಿಕೊಂಡಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search