Sunday, November 1, 2026
spot_img
More
    spot_img
    HomeDelhi Assembly Election 2025Delhi Assembly Election 2025: ಬಿಜೆಪಿ ಗೂಂಡಾಗಳನ್ನು ತಪಾಸಣೆ ಮಾಡದ ಪೊಲೀಸರು; ವಿಡಿಯೊ ಪೋಸ್ಟ್‌ ಮಾಡಿ...

    Delhi Assembly Election 2025: ಬಿಜೆಪಿ ಗೂಂಡಾಗಳನ್ನು ತಪಾಸಣೆ ಮಾಡದ ಪೊಲೀಸರು; ವಿಡಿಯೊ ಪೋಸ್ಟ್‌ ಮಾಡಿ ಆರೋಪಿಸಿದ ಎಎಪಿ

    ನವದೆಹಲಿ: ನಾಳೆ (ಫೆಬ್ರವರಿ 5) ದೆಹಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಅಧಿಕಾರದಲ್ಲಿರುವ ಎಎಪಿಗೆ ಈ ಬಾರಿ ಕಾಂಗ್ರೆಸ್‌ ಹಾಗೂ ಬಿಜೆಪಿ ಪ್ರಬಲ ಸ್ಪರ್ಧೆಯನ್ನೊಡ್ಡಲು ತಯಾರಾಗಿದ್ದು, ಎಲ್ಲೆಡೆ ಭರ್ಜರಿ ಪ್ರಚಾರ ಮಾಡಿವೆ.

    ಇನ್ನು ಬಿಜೆಪಿ ವಿರುದ್ಧ ಚುನಾವಣೆ ಘೋಷಣೆಯಾದಾಗಿನಿಂದಲೂ ಸಾಕಷ್ಟು ಅಕ್ರಮಗಳ ಆರೋಪವನ್ನು ಮಾಡುತ್ತಾ ಬಂದಿರುವ ಎಎಪಿ ನಿನ್ನೆ ಮಧ್ಯರಾತ್ರಿಯೂ ಸಹ ಬಿಜೆಪಿಯನ್ನು ದೂಷಿಸಿ ವಿಡಿಯೊವೊಂದನ್ನು ಹಂಚಿಕೊಂಡಿದೆ. ಈ ವಿಡಿಯೊದಲ್ಲಿ ಪೊಲೀಸರು ಕಾರೊಂದನ್ನು ತಪಾಸಣೆ ಮಾಡದೇ ಕಳುಹಿಸುತ್ತಿದ್ದಾರೆ. ಜನರು ತಪಾಸಣೆ ಮಾಡಿ ಎಂದು ಕೇಳಿದರೂ ಸ್ಪಂದಿಸದೇ ಪೊಲೀಸರು ಆ ವಾಹನವನ್ನು ಕಳುಹಿಸಿದ್ದಾರೆ.

    ಈ ವಿಡಿಯೊವನ್ನು ಹಂಚಿಕೊಂಡಿರುವ ಎಎಪಿ ದೆಹಲಿ ಪೊಲೀಸ್‌ ಹಾಗೂ ಬಿಜೆಪಿ ಮೈತ್ರಿ ಮುನ್ನೆಲೆಗೆ ಬಂದಿದ್ದು, ಇಬ್ಬರೂ ಸೇರಿ ಕಾನೂನನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿದೆ. ಕಲ್ಕಾಜಿ ವಿಧಾನಸಭಾ ಕ್ಷೇತ್ರದಲ್ಲಿ ಕೊಳಚೆ ಪ್ರದೇಶಕ್ಕೆ ಬಿಜೆಪಿ ಅಭ್ಯರ್ಥಿ ರಮೇಶ್‌ ಬಿಧೂರಿಯ ಕಡೆಯ ಬಿಜೆಪಿ ಗೂಂಡಾಗಳು ಜನರನ್ನು ಹೆದರಿಸಲು ಬಂದಿದ್ದರು. ಈ ವೇಳೆ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರು ಎಷ್ಟೇ ಒತ್ತಾಯಿಸಿದರೂ ಸಹ ಕಾರನ್ನು ತಪಾಸಣೆ ಮಾಡದೇ ವಾಹನವನ್ನು ಕಳುಹಿಸಿ ತಾವೂ ಸಹ ಜಾಗ ಖಾಲಿ ಮಾಡಿದರು ಎಂದು ಎಎಪಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search