ಗದಗ: ರಾಜ್ಯದೆಲ್ಲೆಡೆ ಮೈಕ್ರೊಫೈನಾನ್ಸ್ ಕಂಪನಿಗಳು ನಡೆಸುತ್ತಿರುವ ಕಿರುಕುಳ ಇತ್ತೀಚಿನ ದಿನಗಳಗಲ್ಲಿ ದೊಡ್ಡ ಮಟ್ಟದಲ್ಲಿ ಹೊರಬಂದಿದ್ದು, ರಾಜ್ಯ ಸರ್ಕಾರ ಸಹ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಮೈಕ್ರೊಫೈನಾನ್ಸ್ ಹಾವಳಿ ಹತ್ತಿಕ್ಕಲು ದೊಡ್ಡ ಮಟ್ಟದಲ್ಲಿಯೇ ತಯಾರಿ ನಡೆಸಿದೆ.
ಮೈಕ್ರೊಫೈನಾನ್ಸ್ ಕಂಪನಿಗಳು ಹೇರುವ ಬಡ್ಡಿಯನ್ನು ಕಟ್ಟಲಾಗದೇ ಸಂಕಷ್ಟಕ್ಕೆ ಸಿಲುಕಿ ಈಗಾಗಲೇ ಹಲವಾರು ಮಂದಿ ಆತ್ಮಹತ್ಯೆಗೆ ಶರಣಾಗಿದ್ದು, ಹಲವೆಡೆ ಕಿರುಕುಳ ನೀಡಿದವರನ್ನು ಬಂಧಿಸಲಾಗಿದೆ.
ಹೀಗೆ ರಾಜ್ಯಾದ್ಯಂತ ಮೈಕ್ರೊಫೈನಾನ್ಸ್ ವಿರುದ್ಧ ಇಷ್ಟು ದೊಡ್ಡ ಸಮರ ನಡೆಯುತ್ತಿರುವಾಗಲೇ ಅತ್ತ ಗದಗದಲ್ಲಿ ಬಡ್ಡಿ ದಂಧೆಕೋರನೊಬ್ಬ ಕೇವಲ ಹತ್ತು ಸಾವಿರ ರೂಪಾಯಿಗಳ ಸಾಲಕ್ಕೆ ಆಕೆಯನ್ನು ಮನೆಯಿಂದ ಹೊರಹಾಕಿದ್ದಾನೆ.
ಹೌದು, ಉಷಾದೇವಿ ಎಂಬ ವೃದ್ಧೆ ತಮ್ಮ ಸಹೋದರನ ಆಸ್ಪತ್ರೆ ವೆಚ್ಚಕೆಂದು ಮೌಲಾಸಾಬ್ ಎಂಬಾತನ ಬಳಿ ಹತ್ತು ಸಾವಿರ ಪಡೆದುಕೊಂಡಿದ್ದರು. ಆದರೆ ಹಣ ವಾಪಸ್ ಮಾಡಲಾಗದ ವೃದ್ಧೆ ಉಷಾದೇವಿ ಇನ್ನು ಸ್ವಲ್ಪ ದಿವಸ ಕಾಲಾವಕಾಶ ಕೇಳಿದ್ದರು. ಆದರೆ ಇದಕ್ಕೊಪ್ಪದ ಮೌಲಾಸಾಬ್ ವೃದ್ಧೆಯನ್ನು ಮನೆಯಿಂದ ಹೊರಹಾಕಿ ಮನೆಗೆ ಬೀಗ ಹಾಕಿದ್ದಾನೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


