Tuesday, August 11, 2026
spot_img
More
    spot_img
    HomeChampions Trophy 2025Champions Trophy 2025: ಆತನಿಗೆ ಕೊನೆಯವರೆಗೂ ಆಡಬೇಕು ಎಂದು ಹೇಳಿದ್ದೆ ಕೇಳಲಿಲ್ಲ; ಕೆಎಲ್ ರಾಹುಲ್

    Champions Trophy 2025: ಆತನಿಗೆ ಕೊನೆಯವರೆಗೂ ಆಡಬೇಕು ಎಂದು ಹೇಳಿದ್ದೆ ಕೇಳಲಿಲ್ಲ; ಕೆಎಲ್ ರಾಹುಲ್

    ದುಬೈ: ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಆಟದ ನೆರವಿನಿಂದ 4 ವಿಕೆಟ್‌ಗಳ ಗೆಲುವನ್ನು ಕಂಡಿದೆ.

    Advertisement

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ 264 ರನ್ ಕಲೆಹಾಕಿ ಆಲ್‌ಔಟ್ ಆಗಿ ಭಾರತಕ್ಕೆ 265 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಭಾರತ 48.1 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 267 ರನ್ ಕಲೆಹಾಕಿದೆ.

    ಇನ್ನು ಪಂದ್ಯದಲ್ಲಿ ಕೊಹ್ಲಿ ಜವಾಬ್ದಾರಿಯುತ ಆಟವಾಡಿದ್ದು, ಗೆಲುವಿಗೆ ಪ್ರಮುಖ ಕಾರಣರಾಗಿದ್ದಾರೆ. ತಂಡ ಆರಂಭಿಕ ಆಘಾತ ಅನುಭವಿಸಿದಾಗ ಐದನೇ ಓವರ್‌ನಲ್ಲಿ ಕಣಕ್ಕಿಳಿದ ಕೊಹ್ಲಿ 42ನೇ ಓವರ್‌ವರೆಗೂ ಬ್ಯಾಟ್ ಬೀಸಿದರು. ಒಂದೆಡೆ ಉಳಿದ ಆಟಗಾರರು ತಮ್ಮ ಕಾಣಿಕೆ ನೀಡಿ ನಿರ್ಗಮಿಸುತ್ತಿದ್ದರೆ ಮತ್ತೊಂದೆಡೆ ಕೊಹ್ಲಿ ಎಲ್ಲರ ಜೊತೆ ಜತೆಯಾಟವನ್ನಾಡಿ ತಂಡವನ್ನು ಗೆಲುವಿನ ದಡಕ್ಕೆ ತಂದಿಟ್ಟರು.

    ಹೀಗೆ ಇನ್ನಿಂಗ್ಸ್ ಕಟ್ಟಿದ್ದ ಕೊಹ್ಲಿ 84 ರನ್ ಗಳಿಸಿದ್ದಾಗ ಆಡಂ ಜಂಪಾ ಎಸೆದ 43ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಕ್ಯಾಚ್ ನೀಡಿ ಔಟ್ ಆದರು. ಈ ಮೂಲಕ ಕೊಹ್ಲಿ ಶತಕ ವಂಚಿತರಾದರು.

    ಇನ್ನು ವಿರಾಟ್ ಕೊಹ್ಲಿ ಶತಕ ಮಿಸ್ ಮಾಡಿಕೊಂಡಿದ್ದು ಹಾಗೂ ಕೊನೆಯವರೆಗೂ ಕಣದಲ್ಲಿ ಇರದೇ ಇದ್ದದ್ದು ಅಭಿಮಾನಿಗಳಲ್ಲಿ ತುಸು ಬೇಸರವನ್ನುಂಟುಮಾಡಿದ್ದು, ಕೆಎಲ್ ರಾಹುಲ್ ಸಹ ಬೇಸರ ಹೊರಹಾಕಿದ್ದಾರೆ.

    ಪಂದ್ಯ ಮುಗಿದ ಬಳಿಕ ಮಾತನಾಡಿದ ಕೆಎಲ್ ರಾಹುಲ್ “ನಾನು ಆಡಲು ಬಂದ ಕೂಡಲೇ ವಿರಾಟ್‌ಗೆ ಕೊನೆಯವರೆಗೂ ಇರಬೇಕು. ಪ್ರತಿ ಓವರ್‌ನಲ್ಲೂ ನಾನು ರಿಸ್ಕ್ ತೆಗೆದುಕೊಳ್ಳುತ್ತೇನೆ ಎಂದಿದ್ದೆ. ಸೆಟ್ ಆಗಿರುವ ಬ್ಯಾಟ್ಸ್‌ಮನ್ ಆದ ಕಾರಣ ತಂಡಕ್ಕೆ ನಿಮ್ಮ ಅವಶ್ಯಕತೆ ಇದೆ ಎಂದಿದ್ದೆ. ಅದನ್ನು ಕೇಳದೇ ಕೊಹ್ಲಿ ರಿಸ್ಕ್ ತೆಗೆದುಕೊಂಡರು’ ಎಂದು ಕೆಎಲ್ ರಾಹುಲ್ ತಿಳಿಸಿದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading