Tuesday, November 10, 2026
spot_img
More
    spot_img
    HomeTop StoryIPL 2025: ಡಿಆರ್‌ಎಸ್‌ ಸಿಗದೇ ಹೊರನಡೆದ ಬ್ರೆವಿಸ್‌ ಅಸಲಿಗೆ ಔಟ್‌ ಆಗಿಯೇ ಇರಲಿಲ್ಲ!

    IPL 2025: ಡಿಆರ್‌ಎಸ್‌ ಸಿಗದೇ ಹೊರನಡೆದ ಬ್ರೆವಿಸ್‌ ಅಸಲಿಗೆ ಔಟ್‌ ಆಗಿಯೇ ಇರಲಿಲ್ಲ!

    ಬೆಂಗಳೂರು: ನಿನ್ನೆ ( ಮೇ 3 ) ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನಡುವಿನ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 2 ರನ್‌ಗಳ ರೋಚಕ ಜಯ ಸಾಧಿಸಿತು.

    ಮೊದಲು ಬ್ಯಾಟಿಂಗ್‌ ಮಾಡಿದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಆರಂಭಿಕ ಆಟಗಾರರ ಅಬ್ಬರ ಹಾಗೂ ಅಂತಿಮ ಹಂತದಲ್ಲಿ ಶೆಫರ್ಡ್‌ ರೌದ್ರಾವತಾರದ ಆಟದ ನೆರವಿನಿಂದ 20 ಓವರ್‌ಗಳಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 213 ರನ್‌ ಕಲೆಹಾಕಿದ್ದು, 214 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಲು ಯತ್ನಿಸಿ ಕೊನೆಯ ಎಸೆತದವರೆಗೂ ಬಂದು ವಿಫಲವಾದ ಚೆನ್ನೈ ಸೂಪರ್‌ ಕಿಂಗ್ಸ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 211 ರನ್ ಕಲೆಹಾಕಿತು.

    ಇನ್ನು ಈ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಕಣಕ್ಕಿಳಿದ ಡಿವಾಲ್ಡ್‌ ಬ್ರೆವಿಸ್‌ ಔಟ್‌ ಇಲ್ಲದಿದ್ದರೂ ಔಟ್‌ ಎಂಬ ತೀರ್ಮಾನಕ್ಕೆ ಬಲಿಯಾದರು. ಆಯುಷ್‌ ಮ್ಹಾತ್ರೆ ಹಾಗೂ ರವೀಂದ್ರ ಜಡೇಜಾ ಅವರ ಅಬ್ಬರದ ಜತೆಯಾಟದ ನೆರವಿನಿಂದ ಗೆಲುವಿನತ್ತ ಮುಖ ಮಾಡಿತ್ತು. ಶತಕದ ಅಂಚಿನಲ್ಲಿದ್ದ ಆಯುಷ್‌ ಮ್ಹಾತ್ರೆ ಔಟ್‌ ಆದ ಬೆನ್ನಲ್ಲೇ ಕಣಕ್ಕಿಳಿದ ಡೆವಾಲ್ಡ್‌ ಬ್ರೆವಿಸ್‌ ಲುಂಗಿ ಎನ್‌ಗಿಡಿ 17ನೇ ಓವರ್‌ನ ಮೂರನೇ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಆದರು.

    ಹೀಗೆ ಎಲ್‌ಬಿಡಬ್ಲ್ಯೂಗೆ ವಿಕೆಟ್‌ ಒಪ್ಪಿಸಿದ ಬ್ರೆವಿಸ್‌ ಅಂಪೈರ್‌ ನಿರ್ಣಯ ಪ್ರಶ್ನಿಸಿ ಡಿಆರ್‌ಎಸ್‌ ತೆಗೆದುಕೊಳ್ಳಲು ಮುಂದಾದರು. ಆದರೆ ಅಂಪೈರ್‌ ಡಿಆರ್‌ಎಸ್‌ ತೆಗೆದುಕೊಳ್ಳಲಾಗುವುದಿಲ್ಲ ಸಮಯ ಮೀರಿದೆ ಎಂದರು. ಅಸಲಿಯತ್ತಿಗೆ ಆ ಎಲ್‌ಬಿಡಬ್ಲ್ಯೂ ಔಟ್‌ ಇರಲಿಲ್ಲ. ಪಿಚ್‌ ಸರಿ ಇರಲಿಲ್ಲ ಹಾಗೂ ವಿಕೆಟ್‌ ಹಿಟ್ಟಿಂಗ್‌ ಸಹ ಮಿಸ್‌ ಆಗಿತ್ತು. ಹೀಗಾಗಿ ಬ್ರೆವಿಸ್‌ ನಿಧಾನಕ್ಕೆ ರಿವ್ಯೂ ತೆಗೆದುಕೊಂಡು ಔಟ್‌ ಇಲ್ಲದಿದ್ದರೂ ಔಟ್‌ ಆಗಿ ಹೊರನಡೆದಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search