ಕೊಲ್ಕತ್ತಾ: ನಿನ್ನೆಯಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಡೆದ ಲಾಸ್ಟ್ ಬಾಲ್ ಥ್ರಿಲ್ಲರ್ ಬೆನ್ನಲ್ಲೇ ಇಂದು ( ಮೇ 4 ) ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಪಂದ್ಯವೂ ಲಾಸ್ಟ್ ಬಾಲ್ ಥ್ರಿಲ್ಲರ್ ಆಗಿ ಹೊರಹೊಮ್ಮಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗೆಲ್ಲಲು 207 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ರಾಜಸ್ಥಾನ್ ರಾಯಲ್ಸ್ ಕೊನೆಯ ಎಸೆತದವರೆಗೂ ಪ್ರಯತ್ನಿಸಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್ ಕಲೆಹಾಕಿತು.
ಕೆಕೆಆರ್ ಇನ್ನಿಂಗ್ಸ್: ತಂಡದ ಪರ ರಹ್ಮನುಲ್ಲಾ ಗುರ್ಬಝ್ 35 (25), ಸುನಿಲ್ ನರೈನ್ 11 (9), ಅಜಿಂಕ್ಯಾ ರಹಾನೆ 30 (24), ಅಂಗ್ಕ್ರಿಶ್ ರಘುವಂಶಿ 44 (31), ಆಂಡ್ರೆ ರಸೆಲ್ 25 ಎಸೆತಗಳಲ್ಲಿ 4 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 57 ರನ್ ಬಾರಿಸಿದರೆ, ರಿಂಕು ಸಿಂಗ್ 6 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 19 ರನ್ ಬಾರಿಸಿದರು.
ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್, ಯುದ್ವೀರ್ ಸಿಂಗ್, ಮಹೀಶ ತೀಕ್ಷಣ ಹಾಗೂ ರಿಯಾನ್ ಪರಾಗ್ ತಲಾ ಒಂದೊಂದು ವಿಕೆಟ್ ಪಡೆದರು.
ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್: ತಂಡದ ಪರ ಯಶಸ್ವಿ ಜೈಸ್ವಾಲ್ 34 (21), ವೈಭವ್ ಸೂರ್ಯವಂಶಿ 4 (2), ಕುಶಾಲ್ ಸಿಂಗ್ ರಾಥೋಡ್ ಡಕ್‌ಔಟ್, ಧ್ರುವ್ ಜುರೆಲ್ ಡಕ್‌ಔಟ್, ವನಿಂದು ಹಸರಂಗ ಡಕ್‌ಔಟ್, ಶಿಮ್ರಾನ್ ಹೆಟ್ಮೇರ್ 29 (23), ಜೋಫ್ರಾ ಆರ್ಚರ್ 12 (8), ಶಿವಮ್ ದುಬೆ ಅಜೇಯ 25 (14) ರನ್ ಕಲೆಹಾಕಿದರು. ಒಂದೆಡೆ ತಂಡದ ವಿಕೆಟ್‌ಗಳು ಸಾಲು ಸಾಲಾಗಿ ಬೀಳುತ್ತಿದ್ದರೆ ಮತ್ತೊಂದೆಡೆ ಏಕಾಂಗಿ ಹೋರಾಟ ನಡೆಸಿದ ನಾಯಕ ರಿಯಾನ್ ಪರಾಗ್ 45 ಎಸೆತಗಳಲ್ಲಿ 6 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 95 ರನ್ ಚಚ್ಚಿದರು. ಅಂತಿಮ ಹಂತದಲ್ಲಿ ಜತೆಯಾದ ಶುಭಮ್ ದುಬೆ ಹಾಗೂ ಆರ್ಚರ್ ಜೋಡಿ ಆಟವನ್ನು ಕೊನೆಯ ಎಸೆತದವರೆಗೂ ಕೊಂಡೊಯ್ಯಿತು.
ಕೊನೆಯ ಓವರ್‌ನಲ್ಲಿ ತಂಡಕ್ಕೆ ಗೆಲ್ಲಲು 22 ರನ್ ಬೇಕಿದ್ದಾಗ ವೈಭವ್ ಅರೋರಾ ಬೌಲಿಂಗ್ ಎಸೆದರು. ಮೊದಲ ಎಸೆತಕ್ಕೆ ಎರಡು ರನ್ ಬಾರಿಸಿದ ಜೋಫ್ರಾ ಆರ್ಚರ್ ಎರಡನೇ ಎಸೆತಕ್ಕೆ ಒಂದು ರನ್ ಬಾರಿಸಿದರು. ಬಳಿಕ ದುಬೆ ಮೂರನೇ ಎಸೆತಕ್ಕೆ ಸಿಕ್ಸರ್, ನಾಲ್ಕನೇ ಎಸೆತಕ್ಕೆ ಬೌಂಡರಿ ಹಾಗೂ ಐದನೇ ಎಸೆತಕ್ಕೆ ಸಿಕ್ಸರ್ ಚಚ್ಚಿದರು. ಹೀಗೆ ಕೊನೆಯ ಎಸೆತದಲ್ಲಿ ತಂಡಕ್ಕೆ ಗೆಲ್ಲಲು 3 ರನ್ ಬೇಕಿತ್ತು. ಸತತ ಮೂರು ಬೌಂಡರಿ ಬಾರಿಸಿದ್ದ ಶುಭಮ್ ದುಬೆ ಅಂತಿಮ ಎಸೆತದಲ್ಲಿ ವಿಫಲರಾದರು. ಎರಡು ರನ್ ಯತ್ನ ಮಾಡಿದರಾದರೂ ಎರಡನೇ ರನ್ ಯತ್ನದಲ್ಲಿ ಜೋಫ್ರಾ ಆರ್ಚರ್ ರನ್‌ಔಟ್ ಆದರು. ಈ ಮೂಲಕ ಸೂಪರ್ ಓವರ್ ಸಹ ಸಾಧ್ಯವಾಗಲಿಲ್ಲ.
ಕೊಲ್ಕತ್ತಾ ನೈಟ್ ರೈಡರ್ಸ್ ಪರ ಮೊಯಿನ್ ಅಲಿ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ ತಲಾ ಎರಡೆರಡು ವಿಕೆಟ್ ಪಡೆದರೆ, ವೈಭವ್ ಅರೋರಾ ಒಂದು ವಿಕೆಟ್ ಪಡೆದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


