Saturday, September 19, 2026
spot_img
More
    spot_img
    HomeEntertainmentಅತಿಹೆಚ್ಚು ವ್ಯೂಸ್‌ ಪಡೆದ ಗ್ಲಿಂಪ್ಸ್ ದಾಖಲೆ ಮುರಿಯುವಲ್ಲಿ ಎಡವಿದ ರಾಮಾಯಣ; ಕಾರಣವೇನು?

    ಅತಿಹೆಚ್ಚು ವ್ಯೂಸ್‌ ಪಡೆದ ಗ್ಲಿಂಪ್ಸ್ ದಾಖಲೆ ಮುರಿಯುವಲ್ಲಿ ಎಡವಿದ ರಾಮಾಯಣ; ಕಾರಣವೇನು?

    ನಿನ್ನೆ ( ಜುಲೈ 3 ) ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರ ರಾಮಾಯಾಣ ಚಾಪ್ಟರ್‌ 1ರ ಇಂಟ್ರೊಡಕ್ಷನ್‌ ಗ್ಲಿಂಪ್ಸ್‌ ಅನ್ನು ಬಿಡುಗಡೆ ಮಾಡಲಾಯಿತು. ಸಂಪೂರ್ಣ ವಿಎಫ್‌ಎಕ್ಸ್‌ನಿಂದ ಕೂಡಿದ್ದ ಈ 3.03 ನಿಮಿಷದ ವಿಡಿಯೊದಲ್ಲಿ ಬ್ರಹ್ಮ, ವಿಷ್ಣು ಹಾಗೂ ಶಿವನ ಸೃಷ್ಟಿಯಾದ ರಾವಣ ಹಾಗೂ ತ್ಯಾಗ ಮತ್ತು ಧರ್ಮಕ್ಕೆ ಪ್ರತೀಕವಾದ ರಾಮನ ಪರಿಚಯವನ್ನು ಅತ್ಯುನ್ನತ ಮಟ್ಟದಲ್ಲಿ ರಚಿಸಲಾಗಿದ್ದು, ವೀಕ್ಷಕರ ಮನ್ನಣೆ ಗಳಿಸಿದೆ.

    Advertisement

    ಗ್ಲಿಂಪ್ಸ್‌ ವಿಎಫ್‌ಎಕ್ಸ್‌ಗೆ ಭಾರೀ ಮನ್ನಣೆ ವ್ಯಕ್ತವಾಗುತ್ತಿದ್ದು, ಎಡಿಟಿಂಗ್‌ಗಾಗಿ ಎಂಟು ಬಾರಿ ಆಸ್ಕರ್‌ ಪಡೆದಿರುವ ಡಿಎನ್‌ಇಜಿ ತನ್ನ ಕೈಚಳಕ ತೋರಿಸಿದೆ. ಎಆರ್‌ ರಹಮಾನ್‌ ಹಾಗೂ ಹ್ಯಾನ್ಸ್‌ ಜಿಮ್ಮರ್‌ ಹಿನ್ನೆಲೆ ಸಂಗೀತ ವಿಡಿಯೊನ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

    ಗ್ಲಿಂಪ್ಸ್‌ನ ಕೊನೆಯ ಒಂದೆರಡು ಸೆಕೆಂಡ್‌ ರಾಮ ಹಾಗೂ ರಾವಣರ ದರ್ಶನವಾಗಲಿದ್ದು, ಇದು ಅಭಿಮಾನಿಗಳ ಪಾಲಿನ ಫೇವರಿಟ್‌ ಭಾಗವಾಗಿದೆ. ಇಷ್ಟು ಶ್ರೀಮಂತವಾಗಿದ್ದ ರಾಮಾಯಣ ಗ್ಲಿಂಪ್ಸ್‌ ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ದಾಖಲೆ ಪಡೆದುಕೊಳ್ಳಲಿದೆ ಎಂದು ಊಹಿಸಲಾಗಿತ್ತು.

    ದೊಡ್ಡ ದೊಡ್ಡ ಸ್ಟಾರ್‌ಗಳು ಗ್ಲಿಂಪ್ಸ್‌ನ ಲಿಂಕ್‌ ಹಂಚಿಕೊಳ್ಳುವ ಮೂಲಕ ಪ್ರಚಾರವನ್ನೂ ಮಾಡಿದರು. ಆದರೂ ರಾಮಾಯಣ ಗ್ಲಿಂಪ್ಸ್‌ ಮೊದಲ 24 ಗಂಟೆಗಳಲ್ಲಿ 12.9 ಮಿಲಿಯನ್‌ ವೀಕ್ಷಣೆಗಳನ್ನು ಮಾತ್ರ ಪಡೆದುಕೊಂಡಿದೆ. ಸೋನಿ ಮ್ಯೂಸಿಕ್‌ ಇಂಡಿಯಾ ಹಾಗೂ ವರ್ಲ್ಡ್‌ ಆಫ್ ರಾಮಾಯಣ ಈ ಎರಡೂ ಚಾನೆಲ್‌ಗಳಲ್ಲಿ ಈ ಗ್ಲಿಂಪ್ಸ್‌ ಬಿಡುಗಡೆಯಾಗಿದ್ದು, ಇದು ಎರಡೂ ಚಾನೆಲ್‌ಗಳು ಸೇರಿದ ವೀಕ್ಷಣೆಯಾಗಿದೆ.

    ಇನ್ನು ರಾಮಾಯಣಕ್ಕೆ ನಿರೀಕ್ಷಿತ ವೀಕ್ಷಣೆಗಿಂತ ಕಡಿಮೆ ಬರಲು ಕಾರಣ ಹೊಸ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಹ್ಯಾಂಡಲ್‌ಗಳಲ್ಲಿ ಹಂಚಿಕೊಂಡಿದ್ದು, ಇನ್ನು ಟೀಸರ್‌ನಲ್ಲಿ ಚಿತ್ರದ ದೃಶ್ಯಗಳು ಇಲ್ಲದೇ ಇರುವುದು ಸಹ ವೀಕ್ಷಣೆ ಕಡಿಮೆಯಾಗುವುದಕ್ಕೆ ಕಾರಣ ಎನ್ನಬಹುದು. ಮುಂದಿನ ದಿನಗಳಲ್ಲಿ ಟೀಸರ್‌ ಹಾಗೂ ಟ್ರೈಲರ್‌ಗಳಲ್ಲಿ ಐಮ್ಯಾಕ್ಸ್‌ಗೆಂದೇ ತಯಾರಾಗಿರುವ ರಾಮಾಯಣ ತನ್ನ ಖದರ್‌ ಪ್ರದರ್ಶಿಸಲಿದೆ.

    ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ಗ್ಲಿಂಪ್ಸ್‌ಗಳು
    1.‌ ರಾಕಿಂಗ್ ಸ್ಟಾರ್‌ ಯಶ್‌ ಅವರ ಮುಂದಿನ ಚಿತ್ರ ಟಾಕ್ಸಿಕ್‌ ಗ್ಲಿಂಪ್ಸ್‌ 36 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡು ಅಗ್ರಸ್ಥಾನದಲ್ಲಿದ್ದು, ರಾಮಾಯಣ ಈ ದಾಖಲೆಯನ್ನು ಮುರಿದರೆ ನಂಬರ್‌ 1 ಆಗಲಿದೆ.

    2. ರಾಮ್‌ಚರಣ್‌ ನಟೆಯ ಪೆಡ್ಡಿ – 31.15 ಮಿಲಿಯನ್

    3. ಅಲ್ಲು ಅರ್ಜುನ್‌ ನಟನೆಯ ಪುಷ್ಪ 2 – 27.67 ಮಿಲಿಯನ್‌

    4. ಜೂನಿಯರ್‌ ಎನ್‌ಟಿಆರ್ ನಟನೆಯ ದೇವರ – 26.17 ಮಿಲಿಯನ್‌

    5. ವಿಜಯ್‌ ನಟನೆಯ ಜನನಾಯಗನ್‌ – 22.57 ಮಿಲಿಯನ್‌.

    ಮೈಸೂರು: ಸಂಸದರು ಭೇಟಿ ನೀಡಿದ್ದ ಜಾಗದಲ್ಲೇ ಮಲಯಾಳಂ ಬೋರ್ಡ್;‌ ಕಿಡಿಕಾರಿದ ಕನ್ನಡಿಗರು

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading