ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅವಧಿ ಮುಗಿದಿದೆಯಾ ಅಥವಾ ಮುಗಿಯಲು ಸ್ವಲ್ಪ ದಿನಗಳೇ ಬಾಕಿಯಿದೆಯಾ?, ಅದನ್ನು ನವೀಕರಿಸುವುದು ಬಹಳ ಸುಲಭವಾಗಿದೆ. ಈಗ ನೀವು ಸಾರಿಗೆ ಇಲಾಖೆಯ ಕಚೇರಿಗೆ ಹೋಗದೆ, ನಿಮ್ಮ ಸ್ಮಾರ್ಟ್‌ಫೋನ್, ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಿಂದಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.ನಿಮ್ಮ ಚಾಲನಾ ಪರವಾನಗಿಯ ಅವಧಿ ಮುಗಿದ ನಂತರ 30 ದಿನಗಳ ಒಳಗೆ ನವೀಕರಣ ಮಾಡದಿದ್ದರೆ ದಂಡ ಪಾವತಿಸಬೇಕಾಗುತ್ತದೆ. ಬಹಳ ದಿನಗಳ ನಂತರ ನವೀಕರಿಸಲು ಮುಂದಾದರೆ, ಹೊಸ ಲೈಸೆನ್ಸ್‌ಗೆ ಮತ್ತೆ ಅರ್ಜಿ ಹಾಕಬೇಕಾಗಬಹುದು ಮತ್ತು ಪರೀಕ್ಷೆಗಳನ್ನೂ ಎದುರಿಸಬೇಕಾಗಬಹುದು. ಆದ್ದರಿಂದ, ಮುಕ್ತಾಯ ದಿನಾಂಕದ ಮೊದಲು ಅಥವಾ ಅವಧಿ ಮುಗಿದ ಕೂಡಲೇ ನವೀಕರಿಸುವುದು ಉತ್ತಮ.ವಾಹನ ಚಲಾಯಿಸಲು ಚಾಲನಾ ಪರವಾನಗಿ, ಆರ್‌ಸಿ, ವಿಮೆ ಮತ್ತು ಮಾಲಿನ್ಯ ಪ್ರಮಾಣಪತ್ರ ಅಗತ್ಯವಾಗಿದ್ದು, ಇವು ಸದಾ ನಿಮ್ಮೊಂದಿಗೆ ಇರಬೇಕಾಗುತ್ತದೆ. ಹೊಸ ಲೈಸೆನ್ಸ್ ಪಡೆಯುವಾಗ ವಯಸ್ಸಿನ ಆಧಾರದ ಮೇಲೆ ಮಾನ್ಯತೆ ನೀಡಲಾಗುತ್ತದೆ. ಅವಧಿ ಮುಗಿಯುವ ಮುನ್ನವೇ ನವೀಕರಿಸುವುದು ಕಡ್ಡಾಯ.ಹೀಗಾಗಿ ನಿಮ್ಮ ಲೈಸೆನ್ಸ್ ಅವಧಿಯನ್ನು ಗಮನದಲ್ಲಿ ಇಟ್ಟುಕೊಳ್ಳಿ ಮತ್ತು ಮುಕ್ತಾಯಕ್ಕೆ ಮುಂಚೆಯೇ ನವೀಕರಿಸಿ. ಈ ಎಲ್ಲ ಪ್ರಕ್ರಿಯೆಯನ್ನು ನಿಮ್ಮ ಸ್ಮಾರ್ಟ್‌ಫೋನ್, ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಮನೆಯಿಂದಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈಗ ಆ ಪ್ರಕ್ರಿಯೆ ಏನೆಂದು ತಿಳಿದುಕೊಳ್ಳೋಣ.
ಡ್ರೈವಿಂಗ್ ಲೈಸೆನ್ಸ್ ನವೀಕರಣಕ್ಕೆ ಅಗತ್ಯವಿರುವ ದಾಖಲೆಗಳು
ನಿಮ್ಮ ಡ್ರೈವಿಂಗ್ ಲೈಸೆನ್ಸ್ ನವೀಕರಿಸಲು ಕೆಳಗಿನ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು:
ಅವಧಿ ಮುಗಿದ ಡ್ರೈವಿಂಗ್ ಲೈಸೆನ್ಸ್ (ಮೂಲ ಲೈಸೆನ್ಸ್)
ಪಾಸ್‌ಪೋರ್ಟ್ ಅಳತೆಯ ಫೋಟೋ (ಇತ್ತೀಚಿನದು)
ಫೋಟೋ ಮೇಲೆ ನಿಮ್ಮ ಸಹಿ
ಗುರುತಿನ ಚೀಟಿ (ಉದಾ: ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ವೋಟರ್ ಐಡಿ)
ವಿಳಾಸದ ದಾಖಲೆ (ಉದಾ: ಆಧಾರ್ ಕಾರ್ಡ್, ಪಾಸ್‌ಪೋರ್ಟ್, ವಿದ್ಯುತ್ ಬಿಲ್, ಬ್ಯಾಂಕ್ ಸ್ಟೇಟ್ಮೆಂಟ್)
ವೈದ್ಯಕೀಯ ಪ್ರಮಾಣಪತ್ರ (FORM 1-A) – 40 ವರ್ಷ ಮೇಲ್ಪಟ್ಟವರಿಗೆ ಅಥವಾ ಅಗತ್ಯವಿದ್ದರೆ
ಆನ್‌ಲೈನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್ ನವೀಕರಿಸುವುದು ಹೇಗೆ?
ಡ್ರೈವಿಂಗ್ ಲೈಸೆನ್ಸ್ ನವೀಕರಣ – ಆನ್‌ಲೈನ್ ಪ್ರಕ್ರಿಯೆ ಹಂತ ಹಂತವಾಗಿ,ನಿಮ್ಮ ಡ್ರೈವಿಂಗ್ ಲೈಸೆನ್ಸ್ ನವೀಕರಿಸಲು ನೀವು ಮನೆಯಿಂದಲೇ ಸರಳವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇಲ್ಲಿದೆ ಪ್ರಕ್ರಿಯೆ:
ಮೊದಲಿಗೆ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ (Parivahan Sewa ಅಥವಾ ಕರ್ನಾಟಕ ಸಾರಿಗೆ ಇಲಾಖೆ ಪೋರ್ಟಲ್) ಗೆ ಭೇಟಿ ನೀಡಿ.
“Driving Licence Related Services” ಅಥವಾ “DL Renewal” ಆಯ್ಕೆಮಾಡಿ.
ನಿಮ್ಮ ರಾಜ್ಯವನ್ನು (Karnataka) ಆಯ್ಕೆ ಮಾಡಿ.”Apply for DL Renewal” ಮೇಲೆ ಕ್ಲಿಕ್ ಮಾಡಿ.
ಚಾಲನಾ ಪರವಾನಗಿ ಸಂಖ್ಯೆ, ಹುಟ್ಟಿದ ದಿನಾಂಕ, ಆರ್‌ಟಿಎ ಕಚೇರಿ, ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿ.
“Get DL Details” ಕ್ಲಿಕ್ ಮಾಡಿ, ನಿಮ್ಮ ವಿವರಗಳನ್ನು ಪರಿಶೀಲಿಸಿ ಮತ್ತು ದೃಢೀಕರಿಸಿ.ಮೊಬೈಲ್ OTP ಮೂಲಕ ದೃಢೀಕರಣ ಮಾಡಿ.
ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ (ಅವಶ್ಯಕತೆ ಇದ್ದರೆ ಫಿಟ್ನೆಸ್ ಪ್ರಮಾಣಪತ್ರ, ಫೋಟೋ, ಸೈನ್ ಇತ್ಯಾದಿ).
ಅರ್ಜಿಯನ್ನು ಫಿಲ್ ಮಾಡಿ, ಪರಿಶೀಲಿಸಿ ಮತ್ತು ಸೇವ್ ಮಾಡಿ.ಸ್ಲಾಟ್ ಬುಕ್ಕಿಂಗ್ ಆಯ್ಕೆ ಮಾಡಿ, ನಿಮಗೆ ಬೇಕಾದ ದಿನಾಂಕ ಮತ್ತು ಸಮಯ ಆಯ್ಕೆಮಾಡಿ.
ಪಾವತಿಸಬೇಕಾದ ಶುಲ್ಕವನ್ನು ಪರಿಶೀಲಿಸಿ, “Pay Now” ಕ್ಲಿಕ್ ಮಾಡಿ ಮತ್ತು ಪಾವತಿ ಮಾಡಿ.ಪಾವತಿ ರಸೀದಿ ಮತ್ತು ಅರ್ಜಿ ಪ್ರತಿಯನ್ನು ಡೌನ್‌ಲೋಡ್ ಮಾಡಿ.
ಫಿಟ್ನೆಸ್ ಪ್ರಮಾಣಪತ್ರವನ್ನು ಪ್ರಿಂಟ್ ತೆಗೆದು ವೈದ್ಯಕೀಯ ಅಧಿಕಾರಿಯಿಂದ ಸಹಿ ಪಡೆಯಿರಿ (ಅವಶ್ಯಕತೆ ಇದ್ದರೆ).ನಿಗದಿತ ದಿನಾಂಕಕ್ಕೆ RTO ಕಚೇರಿಗೆ ಹೋಗಿ, ಮೂಲ ಚಾಲನಾ ಪರವಾನಗಿ, ಆಧಾರ್ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಿ.
ದೃಢೀಕರಣದ ನಂತರ, ನವೀಕರಿಸಿದ ಲೈಸೆನ್ಸ್ ನಿಮ್ಮ ವಿಳಾಸಕ್ಕೆ ಕಳುಹಿಸಲಾಗುತ್ತದೆ ಅಥವಾ ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು.
1,500 ರೂ. ವರೆಗೆ ಶುಲ್ಕ ಕಟ್ಟಬೇಕು!
ಡ್ರೈವಿಂಗ್ ಲೈಸೆನ್ಸ್ ಅನ್ನು ನಿಗದಿತ ಅವಧಿಗೆ ಮಾತ್ರ ನೀಡಲಾಗುತ್ತದೆ. ಲೈಸೆನ್ಸ್ ಮಾನ್ಯತೆ (ವ್ಯಾಲಿಡಿಟಿ) ಮುಗಿದ ನಂತರ, ಅದನ್ನು ನವೀಕರಿಸುವುದು ಕಡ್ಡಾಯ. ಈ ಪ್ರಕ್ರಿಯೆಗೆ ನಿಮಗೆ 30 ದಿನಗಳ ಗ್ರೇಸ್ ಅವಧಿ ಸಿಗುತ್ತದೆ. ನೀವು ಈ 30 ದಿನಗಳ ಒಳಗೆ ಲೈಸೆನ್ಸ್ ನವೀಕರಿಸಿದರೆ, ಕೇವಲ ₹400 ನವೀಕರಣ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ, 30 ದಿನಗಳ ನಂತರ ನವೀಕರಿಸಿದರೆ, ಶುಲ್ಕವು ಹೆಚ್ಚಾಗಿ ₹1,500 ವರೆಗೆ ಹೋಗಬಹುದು. ಆದ್ದರಿಂದ, ಸಮಯದಲ್ಲಿ ಲೈಸೆನ್ಸ್ ನವೀಕರಿಸುವುದು ನಿಮ್ಮ ಹಣ ಮತ್ತು ಸಮಯ ಉಳಿಸುವ ಉತ್ತಮ ಮಾರ್ಗವಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


