Saturday, September 19, 2026
spot_img
More
    spot_img
    HomeLatest newsಶಾಲಿನಿ ಬೆಳಗ್ಗೆ ಮುಖ್ಯಮಂತ್ರಿಗೆ ರಾತ್ರಿ ಸರ್ಕಾರಕ್ಕೆ ಕೆಲಸ ಮಾಡ್ತಾರೆ ಎಂದಿದ್ದ ರವಿಕುಮಾರ್‌ ವಿರುದ್ಧ ಪ್ರಿಯಾಂಕ್‌ ಖರ್ಗೆ...

    ಶಾಲಿನಿ ಬೆಳಗ್ಗೆ ಮುಖ್ಯಮಂತ್ರಿಗೆ ರಾತ್ರಿ ಸರ್ಕಾರಕ್ಕೆ ಕೆಲಸ ಮಾಡ್ತಾರೆ ಎಂದಿದ್ದ ರವಿಕುಮಾರ್‌ ವಿರುದ್ಧ ಪ್ರಿಯಾಂಕ್‌ ಖರ್ಗೆ ಕಿಡಿ

    ಕಲಬುರ್ಗಿ: ಎಂಎಲ್‌ಸಿ ರವಿಕುಮಾರ್‌ ಬುದ್ಧಿ ಸರಿಯಿಲ್ಲ, ಹಾಗಾಗಿ ಅವರು ನಿಮ್ಹಾನ್ಸ್‌ನಲ್ಲಿ ಇರಬೇಕು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Advertisement

    ಈ ಕುರಿತು ಕಲಬುರ್ಗಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್‌ ಖರ್ಗೆ ಅವರು, ರವಿಕುಮಾರ್‌ ಮೂಲತಃ ಬಿಜೆಪಿಯವರಲ್ಲ, ಆರ್‌ಎಸ್‌ಎಸ್‌ನಿಂದ ಬಂದವರು. ಮನುಸ್ಮೃತಿ ಹಿನ್ನೆಲೆಯಿಂದ ಬಂದಿದವರಾಗಿದ್ದಾರೆ. ಮನುಸ್ಮೃತಿಯಲ್ಲಿ ಮಹಿಳೆಯರ ಬಗ್ಗೆ ಏನು ಹೇಳಲಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಬಿಜೆಪಿ ನಾಯಕರು ಸಂಸ್ಕೃತಿ ಬಗ್ಗೆ ಹೇಳುತ್ತಾರೆ. ಆದರೆ ಅವರ ಪಕ್ಷದ ನಾಯಕರಿಗೆ ಯಾವುದೂ ಅನ್ವಯವಾಗುತ್ತಿಲ್ಲ ಎಂದು ಕಿಡಿಕಾರಿದರು.

    ರವಿಕುಮಾರ್‌ ರಾಜ್ಯ ಸರ್ಕಾರದ ಕಾರ್ಯದರ್ಶಿ ಶಾಲಿನಿ ಅವರ ಕುರಿತು ಆಡಿದ ಮಾತುಗಳು ವಿಡಿಯೋದಲ್ಲಿಯೇ ರೆಕಾರ್ಡ್‌ ಆಗಿದೆ. ಇದಕ್ಕಿಂತ ಸಾಕ್ಷಿಯೇನು ಬೇಕು? ಇದು ಅವರ ಮನಃಸ್ಥಿತಿ ತೋರಿಸುತ್ತಿದೆ. ಕೊಳಕು ಮನಸ್ಸು, ಅವರ ಕೊಳಕು ಬುದ್ಧಿ, ಕೊಳಕು ನಾಲಿಗೆ ಇದನ್ನೆಲ್ಲಾ ಹೇಳಿಸುತ್ತಿದೆ. ಅಂದರೆ ಅವರ ಬುದ್ಧಿ ಸರಿಯಿಲ್ಲ ಎಂದರ್ಥ. ಹಾಗಾಗಿ ಅವರು ನಿಮ್ಹಾನ್ಸ್‌ಗೆ ಹೋಗಬೇಕು. ಮಹಿಳೆಯರಿಗೆ ಗೌರವ ಕೊಡಬೇಕು ಎಂಬುದು ಗೊತ್ತಿಲ್ಲ. ಮಾತಿನ ಮೇಲೆ ಹಿಡಿತವಿಲ್ಲ ಎಂದ ಮೇಲೆ ಅವರು ಹುಚ್ಛಾಸ್ಪತ್ರೆಯಲ್ಲಿರುವುದೇ ಸೂಕ್ತ ಎಂದು ಕಿಡಿಕಾರಿದರು.

    ಇನ್ನು ಮುಂದುವರಿದು ಮಾತನಾಡಿದ ಅವರು, ರವಿಕುಮಾರ್‌ ಈ ಹಿಂದೆ ಕಲಬುರ್ಗಿ ಜಿಲ್ಲೆ ಹಾಗೂ ಕಲಬುರ್ಗಿ ಜಿಲ್ಲಾಧಿಕಾರಿಯ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿದ್ದರು. ಕೋರ್ಟ್‌ ಕ್ಷಮೆಯಾಚಿಸುವಂತೆ ಸೂಚಿಸಿದರೂ ಈವರೆಗೆ ಕ್ಷಮೆ ಕೇಳಿಲ್ಲ. ಉದ್ಧಟತನ ಮೆರೆಯುತ್ತಿದ್ದಾರೆ. ಈಗ ಮತ್ತೆ ಶಾಲಿನಿ ರಜನೀಶ್‌ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪೊಲೀಸ್ ಅಧಿಕಾರಿ ಸ್ವಯಂ ನಿವೃತ್ತಿ ವಿಚಾರ: ಕೈ ಎತ್ತಿದ್ದ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಯದುವೀರ್

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading