ರಾಜಸ್ಥಾನದ ಮಾರವಾಡ್ ಲೋಹಾವಟ್ ಪ್ರದೇಶದಲ್ಲಿ ಇತ್ತೀಚೆಗೆ ಭಾರಿ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿರುವ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ತನ್ನ ತಾಯಿ ತಾಯಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ತೆರಳುತ್ತಿದ್ದಾಗ ಎದುರುಗಡೆಯಿಂದ ಬಂದ ಥಾರ್ ಕಾರ್ ಒಂದು ರಭಸವಾಗಿ ನುಗ್ಗಿದ್ದು ನೀರಿನ ಹೊಡೆತಕ್ಕೆ ಆ ತಾಯಿ ಹಾಗೂ ಮಗ ಬೈಕ್ ಸಮೇತ ನೆಲಕ್ಕೆ ಕುಸಿದಿದ್ದಾರೆ.
ಈ ವಿಡಿಯೊವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಭಾರೀ ವೈರಲ್ ಆಗಿದ್ದು, ಥಾರ್ ಚಾಲಕನ ಸೊಕ್ಕಿನ ನಡತೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ರಾಜಸ್ಥಾನದಲ್ಲಿ ಇತ್ತೀಚೆಗೆ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ರಸ್ತೆಗಳು ಮತ್ತು ಮನೆಗಳು ಜಲಾವೃತಗೊಂಡಿವೆ. ಈ ಸಂದರ್ಭದಲ್ಲಿ, ಜನರು ತಮ್ಮ ಸುರಕ್ಷತೆಗಾಗಿ ಎಚ್ಚರಿಕೆ ವಹಿಸಬೇಕಾಗಿದೆ. ಈ ಘಟನೆಯು ರಸ್ತೆ ಸುರಕ್ಷತೆ ಮತ್ತು ಮಳೆಯ ಸಮಯದಲ್ಲಿ ಗಾಡಿಗಳ ತ್ವರಿತ ಗತಿಯ ಪರಿಣಾಮವನ್ನು ಎತ್ತಿ ತೋರಿಸುತ್ತಿದ್ದು, ರಸ್ತೆಯ ಮೇಲೆ ನೀರಿನ ಹರಿವಿದ್ದಿದ್ದರೆ ಪ್ರಮಾದ ಸಂಭವಿಸುತ್ತಿತ್ತು ಎಂದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
ಹಿರಿಯ ನಾಗರಿಕರ ಕಾರ್ಡ್: 60 ವರ್ಷವಾದ ಕೂಡಲೇ ನೀವು ಪಡೆಯಬಹುದಾದ ಪ್ರಮುಖ ಸೌಲಭ್ಯಗಳು
ಎಐ ಕೃಷಿ ವೆಬ್‌ಸೈಟ್‌ಗೆ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


