ಕಾಮಿಡಿ ಕಿಲಾಡಿ ಮೂಲಕ ಹೆಸರು ಕೀರ್ತಿ ಗಳಿಸಿದ್ದ ಚಂದ್ರಶೇಖರ ಸಿದ್ದಿ ಕಳೆದ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಂದ್ರಶೇಖರ್ ಸಿದ್ದಿ ಮಾನಸಿಕ ಖಿನ್ನತೆಗೊಳಗಾಗಿದ್ದರು ಎಂದು ಹೇಳುತ್ತಿದ್ದಾರೆ. ಅವಕಾಶಗಳ ಕೊರತೆ ಸಿದ್ದಿ ಆತ್ಮಹತ್ಯೆಗೆ ಕಾರಣವಾಯಿತು ಎನ್ನುತ್ತಾರೆ. ಇದೀಗ ಚಂದ್ರಶೇಖರ್ ಸಿದ್ದಿಯವರ ಪತ್ನಿ ಕಮಲಾಕ್ಷಿ ತಮ್ಮ ಪತಿಯ ಸಾವಿನ ಕುರಿತು ಮಾತನಾಡಿದ್ದಾರೆ.
ಚಂದ್ರಶೇಖರ್ ಸಿದ್ದಿ ಅವರ ಪತ್ನಿ ಕಮಲಾಕ್ಷಿ, ”ನಾವು ಭಟ್ಟರ ಮನೆಯಲ್ಲಿ ಕೆಲಸಕ್ಕೆ ಇದ್ವಿ ಅಲ್ಲಿ ಎಲ್ಲ ಸರಿ ಇತ್ತು, ಅವತ್ತು ಬೆಳಗ್ಗೆ ಎಲ್ಲಾ ಚೆನ್ನಾಗಿಯೇ ಮಾತನಾಡಿದ್ದರು. ನಾನೇ ದೋಸೆ ಮಾಡಿಕೊಟ್ಟೆ, ಬೆಳಗ್ಗೆ 8 ಗಂಟೆಗೆ ಕೆಲಸಕ್ಕೆ ಹೋಗ್ತಿದ್ದರು, ಅವತ್ತು ಕೂಡ ತೋಟದ ಕೆಲಸಕ್ಕೆ ಹೋದರು”.
”ನಾನು ನನ್ನ ಮಗನನ್ನು ಶಾಲೆಗೆ ಕಳುಹಿಸಿ, 10ಕ್ಕೆ ಎಂದಿನಂತೆ ಅಂಗನವಾಡಿಯಲ್ಲಿ ಕೆಲಸ ಮಾಡುತ್ತೇನೆ, ಅವತ್ತು ಕೂಡ ನಾನು ಹೋಗಿದ್ದೇ, ನಮಗೆ ಅಲ್ಲಿಯೇ ಭಟ್ಟರ ಮನೆಯಲ್ಲಿ ಒಂದು ರೂಮ್ ಕೂಡ ಕೊಟ್ಟಿದ್ದಾರೆ. ನಾವು ಅಲ್ಲಿಯೇ ಅಡುಗೆ ಮಾಡಿಕೊಳ್ಳುತ್ತೇವೆ, ಅವತ್ತು ಮಧ್ಯಾಹ್ನ 1.30ರ ಸಮಯಕ್ಕೆ ಮಗನನ್ನು ಸ್ಕೂಲಿನಿಂದ ಕರೆದುಕೊಂಡು ಬರಲು ನಾನು ಮನೆಗೆ ಬಂದೆ, ಆದರೆ ಅವರು, ನಾನೇ ಹೋಗ್ತಿನಿ ಎಂದರು. ನಿಮಗೆ ಸುಸ್ತಾಗಿದೆ ಎಂದು ಕೇಳಿದರೂ ಕೇಳಲಿಲ್ಲ ಅವರು ಬಟ್ಟೆ ಬದಲಾಯಿಸಿಕೊಂಡು ಹೊರಟರು. 2 ಗಂಟೆಗೆ ಸುಮಾರಿಗೆ ಮಗನನ್ನು ಶಾಲೆಯಿಂದ ಕರೆದುಕೊಂಡು ಬಂದರು” ಎಂದು ಹೇಳಿದ್ದಾರೆ. ಅವತ್ತು ಬೆಳಗ್ಗೆಯಿಂದಲೂ ಏನೋ ಒಂದು ಥರ ನೆಗೆಟಿವಿಟಿ ಯೋಚನೆ ಬರ್ತಿದೆ ಎಂದು ಹೇಳ್ತಿದ್ದರು ಎಂದು ಕೂಡ ಹೇಳಿದ್ದಾರೆ. ಯಾವ ಸಮಸ್ಯೆ ಕೂಡ ಇರಲಿಲ್ಲ ಸರಿಯಾಗಿಯೇ ಇದ್ದರು ಎಂದು ಹೇಳಿದ್ದಾರೆ.
”ಆರು ತಿಂಗಳ ಹಿಂದೆ ಅವರಿಗೇನಾಗಿತ್ತು ಗೊತ್ತಿಲ್ಲ. ನನಗೆ ಮೋಸ ಮಾಡ್ತಿಯಾ ನೀನು, ಬೇರೆಯವರು ನನಗೆ ಮೋಸ ಮಾಡ್ತಾರೆ. ನೀನು ನನ್ನ ಬಿಟ್ಟು ಬೇರೆಯವರ ಜೊತೆಗೆ ಹೋಗ್ತಿಯಾ’ ಅಂತೆಲ್ಲಾ ಹೇಳುತ್ತಿದ್ದರು. ಆ ಟೈಮ್‌ನಲ್ಲಿ ನನಗೆ ಚೆನ್ನಾಗಿ ಹೊಡೆದಿದ್ದರು ಕೂಡ. ಕೊನೆಗೆ ಇದು ಬೇಡವೇ ಬೇಡ ಎಂದು ನನ್ನ ತಂದೆ ಮನೆಗೆ ನಾನು ಹೊರಟುಹೋಗಿದ್ದೆ. ನಂತರ ಕೆಲ ದಿವಸಗಳ ನನ್ನ ಕರೆದುಕೊಂಡು ಹೋಗಲು ಬಂದರು. ಆಗ ನಾನು, ಮೊದಲು ನೀವು ಸರಿಯಾಗಿ, ಟೆನ್ಷನ್ ಕಡಿಮೆ ಮಾಡಿಕೊಳ್ಳಿ ಎಂದು ಹೇಳಿ ಕಳುಹಿಸಿದ್ದೆ” ಎಂದು ಕಮಲಾಕ್ಷಿ ಹೇಳಿದ್ದಾರೆ. ಆಗಾಗ ಸ್ವಲ್ಪ ಕುಡಿತ ಇದ್ರು ಅಷ್ಟೇ ಅದು ಬಿಟ್ಟರೆ ಏನೂ ಇರಲಿಲ್ಲ ಎಂದು ಹೇಳಿದ್ದಾರೆ ಕಮಲಾಕ್ಷಿ.
,ಉತ್ತರ ಪ್ರದೇಶ: ಕಾಲುವೆಗೆ ಬಿದ್ದ ವಾಹನ; 11 ಜನರು ಸಾವು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


