ಮಗು ಜನಿಸಿದ ಒಂದು ಗಂಟೆ ಒಳಗೆ ಎದೆ ಹಾಲು ಕಡ್ಡಾಯವಾಗಿ ಕುಡಿಸಿ ನವಜಾತ ಶಿಶುಗಳಲ್ಲಿ ಅಪೌಷ್ಟಿಕತೆಯನ್ನು ದೂರ ಮಾಡಿ ಎಂದು ಮಂಡ್ಯ ಜಿಲ್ಲೆಯ ಕೆಆರ್ ಪುರು ತಾಲೂಕಿನ ಮಹದೇವಪುರ ವಲಯ ಆರೋಗ್ಯ ಅಧಿಕಾರಿಗಳಾದ ಡಾ.ಸವಿತಾ ತಿಳಿಸಿದರು.
ಕೃಷ್ಣರಾಜಪುರ ನಗರ ಪ್ರಾಥಮಿಕ ಆರೋಗ್ಯ ಮತ್ತು ಬಿಬಿಎಂಪಿ ಸಹಯೋಗದಲ್ಲಿ ಭಟ್ಟರಹಳ್ಳಿ ಸಮೀಪವಿರುವ ನಮ್ಮ ಕ್ಲಿನಿಕ್ ನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎದೆ ಹಾಲಿನಲ್ಲಿ ಮಗುವಿನ ಬೆಳವಣಿಗೆಗೆ ಪ್ರಯೋಜನಕಾರಿಯಾದ ಪೋಷಕಾಂಶಗಳು ತುಂಬಿರುವುದರಿಂದ ಮಗು ಹುಟ್ಟಿದ ಗಂಟೆ ಒಳಗೆ ಎದೆ ತಾಯಿಯ ಹಾಲುಣಿಸಬೇಕು, ತಾಯಿಯ ಮೊದಲ ದಪ್ಪ ಮತ್ತು ಹಳದಿ ಹಾಲು ನವಜಾತ ಶಿಶುವನ್ನು ಅನೇಕ ಮಾರಕ ಕಾಯಿಲೆಗಳಿಂದ ರಕ್ಷಿಸುತ್ತದೆ ಮತ್ತು ರೋಗಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಬೆಳೆಸುತ್ತದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಿಸರ್ಗ ಸ್ತನ್ಯಪಾನ ಮಹತ್ವದ ಕರಪತ್ರಗಳನ್ನು ಬಿಡುಗಡೆ ಮಾಡಿದರು. ಈ ವೇಳೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗುರುರಾಜ್ ಮತ್ತು ಶ್ರೀಶೈಲ ಕನ್ನಾಳ್, ಶುಶೂಷಕ ಅಧಿಕಾರಿ ಲೆವೀನಾ ಪಿಂಟು, ಬಿಬಿಎಂಪಿ ಹಿರಿಯ ಆರೋಗ್ಯ ನಿರೀಕ್ಷರಾಘವೇಂದ್ರ, ಕವಿತಾ ಬಾಯಿ ಸೇರಿದಂತೆ ಮತ್ತಿತರರು ಇದ್ದರು.
ಡೆತ್ ನೋಟ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಜಾನಪದ ಗಾಯಕಿಯ ಮಗ!
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


