Monday, November 2, 2026
spot_img
More
    spot_img
    HomeScienceಪ್ರಾಣದ ಆಸೆ ಬಿಟ್ಟು ಬಾಹ್ಯಾಕಾಶಕ್ಕೆ ಹೋಗುವ ಗಗನಯಾತ್ರಿಗಳ ವೇತನ ಎಷ್ಟು ಗೊತ್ತೆ ?

    ಪ್ರಾಣದ ಆಸೆ ಬಿಟ್ಟು ಬಾಹ್ಯಾಕಾಶಕ್ಕೆ ಹೋಗುವ ಗಗನಯಾತ್ರಿಗಳ ವೇತನ ಎಷ್ಟು ಗೊತ್ತೆ ?

    ಬಾಹ್ಯಾಕಾಶ ಯಾನಿಗಳು ಅಥವಾ ಗಗನಯಾತ್ರಿಗಳು ಎಷ್ಟು ವೇತನ ಪಡೆಯಬಹುದು? ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳುವ ವೇಳೆ ಮತ್ತು ಅಲ್ಲಿಂದ ಭೂಮಿಗೆ ಮರಳುವ ವೇಳೆ ಸದಾ ಜೀವ ಭಯದಲ್ಲೇ ಇರುವ ವಿಜ್ಞಾನಿಗಳಿಗೆ ಸಂಬಳ ಎಷ್ಟು ಗೊತ್ತೆ ?

    ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿ ಅಲ್ಲಿಯೇ ಸಿಕ್ಕಿಬಿದ್ದಿರುವ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್‌ ಮತ್ತಿತರರಿಗೆ ಕಳೆದ ವರ್ಷದ ವೇತನ ಶ್ರೇಣಿಯ ಅನ್ವಯ ವಾರ್ಷಿಕ 70 ಲಕ್ಷ ರು.ನಿಂದ 1.27 ಕೋಟಿ ರು.ವರೆಗೂ ವೇತನ ನಿಗದಿಪಡಿಸಲಾಗಿದೆ. ಆದರೆ ಈ ವೇತನ ಸೇನೆಯಿಂದ ಆಯ್ಕೆಯಾದ ಗಗನಯಾತ್ರಿಗಳಿಗೆ ಸ್ವಲ್ಪ ಕಡಿಮೆ ಇರುತ್ತದೆ. ಕಾರಣ, ಯಾತ್ರೆ ಬಳಿಕ ಅವರು ಸೇನೆಯ ಹುದ್ದೆಯಲ್ಲಿ ಮುಂದುವರೆಯುತ್ತಾರೆ. ಉದಾಹರಣೆಗೆ ಭಾರತೀಯ ಮೂಲದ ರಾಜಾ ಚಾರಿ ಅವರ ಮಾಸಿಕ ವೇತನ 8.92 ಲಕ್ಷ ರು.ನಷ್ಟಿದೆ.

    ಇನ್ನು ಯುರೋಪಿಯನ್‌ ಸ್ಪೇಸ್‌ ಏಜೆನ್ಸಿಯ ಗಗನಯಾತ್ರಿಗಳಲ್ಲಿ, ಆರಂಭಿಕ ಹಂತದಲ್ಲಿ ಮಾಸಿಕ 5.50 ಲಕ್ಷ ರು., ಬ್ರಿಟನ್‌ನಲ್ಲಿ 5.86 ಲಕ್ಷ ರು., ಫ್ರಾನ್ಸ್‌ನಲ್ಲಿ 7.23- 8.43 ಲಕ್ಷ ರು., ರಷ್ಯಾದಲ್ಲಿ 4.58 ಲಕ್ಷ ರು. ವೇತನ ನಿಗದಿ ಮಾಡಲಾಗಿದೆ. ಇದಲ್ಲದೇ ಗಗನಯಾತ್ರಿಗಳಿಗೆ ವಿವಿಧ ದೇಶಗಳು ಪ್ರತಿ ಉಡ್ಡಯನಕ್ಕೂ ಪ್ರತ್ಯೇಕ ಬೋನಸ್‌ ಮತ್ತು ಇತರೆ ಭತ್ಯೆಗಳನ್ನೂ ನೀಡುತ್ತವೆ.

    ಹೆಸರು/ದೇಶ ವೇತನ

    ಸುನಿತಾ ವಿಲಿಯಮ್ಸ್‌ 70 ಲಕ್ಷ – 1.27 ಕೋಟಿ (ವಾರ್ಷಿಕ)

    ರಾಜಾ ಚಾರಿ 8.92 ಲಕ್ಷ (ಮಾಸಿಕ)

    ಯೂರೋಪ್‌ ಗಗನ ಯಾತ್ರಿಗಳ ವೇತನ- 5.50 ಲಕ್ಷ (ಮಾಸಿಕ)

    ಬ್ರಿಟನ್‌ ಗಗನ ಯಾತ್ರಿಗಳ ವೇತನ- 5.86 ಲಕ್ಷ (ಮಾಸಿಕ)

    ಫ್ರಾನ್ಸ್ ಗಗನ ಯಾತ್ರಿಗಳ ವೇತನ 7.23- 8.43 ಲಕ್ಷ (ಮಾಸಿಕ)

    ರಷ್ಯಾ ಗಗನ ಯಾತ್ರಿಗಳ ವೇತನ- 4.58 ಲಕ್ಷ (ಮಾಸಿಕ)

    ,ಗೂಗಲ್ ಮ್ಯಾಪ್ ನಲ್ಲಿ  ಆರು ವೈಶಿಷ್ಟ್ಯ ಲಭ್ಯ ! ನಿಮಗಿದು ಗೊತ್ತ ?


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search