ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳು ನಡೆದಿವೆ ಎಂದು ಆರೋಪಿಸಿ ಅನಾಮಿಕ ವ್ಯಕ್ತಿಯೋರ್ವ ನೀಡಿದ ದೂರಿನ ಆಧಾರದ ಮೇಲೆ ರಾಜ್ಯ ಸರ್ಕಾರ ಎಸ್‌ಐಟಿ ತನಿಖೆ ನಡೆಸುತ್ತಿದೆ.
ಪ್ರಣಬ್ ಮೊಹಂತಿ ನೇತೃತ್ವದ ಎಸ್‌ಐಟಿ ತಂಡ ಕಳೆದ ಆರು ದಿನಗಳಿಂದ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಮೊದಲಿಗೆ 13 ಸ್ಥಳಗಳನ್ನು ಅನಾಮಿಕನ ಸಹಾಯದ ಮೇರೆಗೆ ಗುರುತಿಸಿದ ಎಸ್‌ಐಟಿ ಅಧಿಕಾರಿಗಳು ಗುರುತಿಸಿದ ಸ್ಥಳಗಳಲ್ಲಿ ಗುಂಡಿ ಅಗೆಸಲು ಆರಂಭಿಸಿದರು.
ಈವರೆಗೆ 10 ಗುಂಡಿಗಳನ್ನು ಅಗೆಯಲಾಗಿದ್ದು, ಕೇವಲ 6ನೇ ಗುಂಡಿಯಲ್ಲಿ ಮಾತ್ರ ಅಸ್ತಿಪಂಜರದ ಅವಶೇಷಗಳು ಪತ್ತೆಯಾಗಿವೆ. ಇನ್ನುಳಿದ ಮೂರು ಸ್ಥಳಗಳಲ್ಲಿ ಏನಾದರೂ ಕುರುಹುಗಳು ಸಿಗಲಿವೆಯಾ ಎಂಬ ಪ್ರಶ್ನೆ ಹಾಗೂ ಕುತೂಹಲ ಎದ್ದಿದೆ.
ಎಸ್‌ಐಟಿ ಅಧಿಕಾರಿಗಳು ಗುಂಡಿ ಅಗೆಯಲು 15 ಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದು, ಜತೆಗೆ ಇಟಾಚಿಯನ್ನೂ ಸಹ ಬಳಸಿದ್ದಾರೆ. ಹೀಗಾಗಿ ವಿಚಾರಣೆಗೆಂದೇ ದಿನಕ್ಕೆ ಲಕ್ಷಕ್ಕೂ ಮೀರಿ ಖರ್ಚಾಗುತ್ತಿದೆ. ಹೌದು, 15 ಕಾರ್ಮಿಕರಿಗೆ ದಿನಕ್ಕೆ 2 ಸಾವಿರ ನೀಡಲಾಗುತ್ತಿದ್ದು, ಅವರಿಗೆ ತಿಂಡಿ, ಊಟ ಉಳಿದುಕೊಳ್ಳಲು ಸಹ ಹಣ ಖರ್ಚಾಗುತ್ತಿದೆ. ಊಟ, ತಿಂಡಿ ಹಾಗೂ ಉಳಿಯಲು ಲಾಡ್ಜ್ ವ್ಯವಸ್ಥೆಗೆ ದಿನಕ್ಕೆ 10 ಸಾವಿರ ಖರ್ಚಾಗುತ್ತಿದೆ.
ಇನ್ನು ಇಟಾಚಿ ವೆಚ್ಚ, ಇನ್ನುಳಿದ ವೆಚ್ಚಗಳೆಲ್ಲ ಸೇರಿದಂತೆ ದಿನಕ್ಕೆ 1.50 ಲಕ್ಷ ರೂಪಾಯಿ ಖರ್ಚಾಗುತ್ತಿದೆ ಎಂದು ತಿಳಿದುಬಂದಿದೆ.
ಮುಷ್ಕರಕ್ಕೆ ಮುಂದಾದ ಸಾರಿಗೆ ನೌಕರರಿಗೆ ಶಾಕ್: ರಜೆ ಹಾಗೂ ವಾರದ ರಜೆ ರದ್ದು
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


