ಸೆಪ್ಟೆಂಬರ್ 22ರಂದು ಹೊಸ ಜಿಎಸ್‌ಟಿ ನೀತಿ ಜಾರಿಯಾಗುತ್ತಿದೆ. ಹಲವು ಸುಧಾರಣೆ ತರಲಾಗಿದೆ. ಜಿಎಸ್‌ಟಿ ಕೌನ್ಸಿಲ್ ಸಭೆ ಬಳಿಕ ಮಾತನಾಡಿದ ನಿರ್ಮಲಾ ಸೀತಾರಾಮನ್ ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಸ್ಲ್ಯಾಬ್ ಗಳ ಬದಲಾವಣೆ ಗೆ ಕೌನ್ಸಿಲ್ ನ ಎಲ್ಲಾ ಸದಸ್ಯರು ಒಪ್ಪಿದ್ದಾರೆ ಎಂದು ನಿರ್ಮಾಲಾ ಸೀತಾರಾಮನ್ ಹೇಳಿದ್ದಾರೆ. ಹಾಗಾಗಿ ಇನ್ನು ಕೇವಲ ಎರಡು ಸ್ಲ್ಯಾಬ್ ಮಾತ್ರ ಇರಲಿದೆ. ಅಂದರೆ ಶೇಕಡಾ 5ರಷ್ಟು ಜಿಎಸ್‌ಟಿ ಹಾಗೂ ಶೇಕಡಾ 18 ರಷ್ಟು ಜಿಎಸ್‌ಟಿ. ಸ್ಲ್ಯಾಬ್ ಬದಲಾವಣೆ ಯಿಂದ ದರಗಳು ಬದಲಾವಣೆ ಆಗಲಿವೆ.
ಎಲ್ಲಾ ಔಷಧಗಳ ಮೇಲೆ ಬಿಎಸ್‌ಟಿ ಶೇಕಡಾ 12 ರಿಂದ ಶೇಕಡ ಶೂನ್ಯಕ್ಕೆ ಇಳಿಕೆ ಮಾಡಿದೆ. ಸಲೂನ್, ಯೋಗ ಕೇಂದ್ರಗಳು ಹಾಗೂ ಸಾಮಾನ್ಯ ನಾಗರಿಕರು ಬಳಸುವ ಸೌಂದರ್ಯ, ದೈಹಿಕ, ಯೋಗ ಕ್ಷೇಮ ಸೇವೆ ಮೇಲಿನ ಜಿಎಸ್‌ಟಿ ಶೇಕಡ 18 ರಿಂದ ಶೇಕಡ 5ಕ್ಕೆ ಇಳಿಕೆ ಮಾಡಲಾಗಿದೆ.
ಹಾಲು, ಪನೀರ್ ಮತ್ತು ಭಾರತೀಯ ಬ್ರೆಡ್‌ಗಳನ್ನು ಸಂಪೂರ್ಣವಾಗಿ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದ್ದು, ಅವುಗಳ ದರಗಳು 5% ರಿಂದ ಶೂನ್ಯಕ್ಕೆ ಇಳಿದಿವೆ. 33 ಜೀವ ಉಳಿಸುವ ಔಷಧಗಳು ಮತ್ತು ಔಷಧಿಗಳು ಈಗ ಶೂನ್ಯ ತೆರಿಗೆಯಾಗಿದೆ.
ಶೂನ್ಯಕ್ಕೆ ಇಳಿದಿರುವ ವಸ್ತುಗಳು (0%):
* ಅಲ್ಟ್ರಾ-ಹೈ ಟೆಂಪರೇಚರ್ ಹಾಲು
* ಪನೀರ್
* ರೊಟ್ಟಿ, ಪರೋಟಾ
* 33 ಜೀವರಕ್ಷಕ ಔಷಧಗಳು, ಕ್ಯಾನ್ಸರ್ ಔಷಧಿಗಳು, ಅಪರೂಪದ ಕಾಯಿಲೆಗಳಿಗೆ ಔಷಧಿಗಳು
* ವೈಯಕ್ತಿಕ ಜೀವ ವಿಮೆ, ಆರೋಗ್ಯ ಪಾಲಿಸಿಗಳು
12% ಅಥವಾ 18%ನಿಂದ 5%ಗೆ ಇಳಿದಿರುವ ವಸ್ತುಗಳು:
* ಟೂತ್‌ಬ್ರಶ್, ಟೂತ್‌ಪೇಸ್ಟ್
* ಸೈಕಲ್
* ಕೇಶ ತೈಲ (ಹೇರ್ ಆಯಿಲ್)
* ಟಾಯ್ಲೆಟ್ ಸೋಪ್, ಸೋಪ್ ಬಾರ್‌ಗಳು
* ಶಾಂಪೂ
* ಶೇವಿಂಗ್ ಕ್ರೀಮ್
* ಬೆಣ್ಣೆ, ತುಪ್ಪ, ಚೀಸ್ ಮತ್ತು ಡೈರಿ ಸ್ಪ್ರೆಡ್‌ಗಳು, ನಾಮ್‌ಕೀನ್‌ಗಳು, ಪಾತ್ರೆಗಳು
* ಟೇಬಲ್ ವೇರ್, ಕಿಚನ್ ವೇರ್ ಮತ್ತು ಇತರೆ *ಮನೆಯ ಉಪಕರಣಗಳು
* ಹೊಲಿಗೆ ಯಂತ್ರಗಳು
*ಫೀಡಿಂಗ್ ಬಾಟಲಿಗಳು, ಶಿಶುಗಳಿಗೆ ನ್ಯಾಪ್‌ಕಿನ್‌ಗಳು ಮತ್ತು ಕ್ಲಿನಿಕಲ್ ಡೈಪರ್‌ಗಳು
28%ನಿಂದ 18%ಗೆ ಇಳಿದಿರುವ ವಸ್ತುಗಳು:
* ಹವಾನಿಯಂತ್ರಣ ಯಂತ್ರಗಳು (ಎಸಿ)
* 32 ಇಂಚುಗಳಿಗಿಂತ ದೊಡ್ಡದಾದ ಟಿವಿಗಳು (ಎಲ್ಲಾ ಟಿವಿಗಳು ಈಗ 18% ಜಿಎಸ್‌ಟಿ ವ್ಯಾಪ್ತಿಗೆ)
* ಡಿಶ್‌ವಾಷಿಂಗ್ ಯಂತ್ರಗಳು
* ಸಿಮೆಂಟ್
* ಸಣ್ಣ ಕಾರುಗಳು
* ಬಸ್‌ಗಳು, ಟ್ರಕ್‌ಗಳು, ಆಂಬ್ಯುಲೆನ್ಸ್‌ಗಳು
* ಎಲ್ಲಾ ಆಟೋ ಭಾಗಗಳು
* ತ್ರಿಚಕ್ರ ವಾಹನಗಳು
* 350 ಸಿಸಿ ಅಥವಾ ಅದಕ್ಕಿಂತ ಕಡಿಮೆ ಸಾಮರ್ಥ್ಯದ ಬೈಕ್ಗಳು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


