ಸೆಪ್ಟೆಂಬರ್ 7ರಂದು ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವಾಗಲಿದೆ. ಈ ಸಮಯದಲ್ಲಿ ಚಂದ್ರನು ಕೆಂಪು ಬಣ್ಣದಲ್ಲಿ ಗೋಚರಿಸುವುದರಿಂದ ಇದನ್ನು ರಕ್ತ ಚಂದ್ರ(ರೆಡ್ ಮೂನ್) ಎಂದು ಕರೆಯಲಾಗುತ್ತದೆ. ಸೂರ್ಯ ಮತ್ತು ಚಂದ್ರ ಗ್ರಹಗಳ ನಡುವೆ ಭೂಮಿಯು ಕೂಡ ನೇರ ಒಂದೇ ರೇಖೆಯಲ್ಲಿ ಒಗ್ಗೂಡಿದಾಗ ಚಂದ್ರ ಗ್ರಹಣ ಎಂಬ ಪ್ರಕ್ರಿಯೆ ಉಂಟಾಗುತ್ತದೆ. ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದರ ಕಾರಣದಿಂದಾಗಿಯೇ ಗ್ರಹಣ ಗ್ರಹಿಕೆಗೆ ಲಭ್ಯವಾಗುತ್ತದೆ.
ಭಾರತ ಸೇರಿದಂತೆ ಆಸ್ಟ್ರೇಲಿಯಾ, ಉತ್ತರ ಮತ್ತು ದಕ್ಷಿಣ ಅಮೆರಿಕಾ, ನ್ಯೂಜಿಲೆಂಡ್, ಫಿಜಿ ದ್ವೀಪಸಮೂಹ ಮತ್ತು ಅಂಟಾರ್ಕ್ಟಿಕಾದ ಪ್ರಪಂಚದ ಹಲವು ಭಾಗಗಳಲ್ಲಿ ಚಂದ್ರಗ್ರಹಣ ಗೋಚರಿಸುತ್ತದೆ. ಚಂದ್ರಗ್ರಹಣದಲ್ಲಿ ಮೂರು ವಿಧಗಳಿವೆ. ಅವುಗಳೆಂದರೆ ಹೆಸರುಗಳು ಭಾಗಶಃ ಚಂದ್ರಗ್ರಹಣ, ಸಂಪೂರ್ಣ ಚಂದ್ರಗ್ರಹಣ ಮತ್ತು ಪೆನಂಬ್ರಾಲ್ ಚಂದ್ರಗ್ರಹಣ.
ಚಂದ್ರಗ್ರಹಣವು ಸೆಪ್ಟೆಂಬರ್ 7ರಂದು ಭಾದ್ರಪದ ಪೂರ್ಣಿಮೆಯ ದಿನದಂದು ಪ್ರಾರಂಭವಾಗಿ ಸೆಪ್ಟೆಂಬರ್ 8ರ ಮಧ್ಯರಾತ್ರಿಯಲ್ಲಿ ಕೊನೆಗೊಳ್ಳುತ್ತದೆ. ಸೆಪ್ಟೆಂಬರ್ 7 ರಂದು ರಾತ್ರಿ 09:57 ರಿಂದ ಸೆಪ್ಟೆಂಬರ್ 8 ರಂದು ಬೆಳಿಗ್ಗೆ 01:26 ರವರೆಗೆ ಇರುತ್ತದೆ. ಚಂದ್ರಗ್ರಹಣದ ಒಟ್ಟು ಅವಧಿ 03 ಗಂಟೆ 29 ನಿಮಿಷಗಳು.
ಗ್ರಹಣದ ಸಂಪೂರ್ಣ ಹಂತವು 82 ನಿಮಿಷಗಳ ಕಾಲ ಇರುತ್ತದೆ.ನಾಸಾ ಪ್ರಕಾರ, ಕೆಂಪು ಬಣ್ಣವು ಏಕರೂಪವಾಗಿರುವುದಿಲ್ಲ. ಇದು ಭೂಮಿಯ ವಾತಾವರಣದಲ್ಲಿರುವ ಧೂಳು, ಮೋಡಗಳು ಅಥವಾ ಜ್ವಾಲಾಮುಖಿ ಬೂದಿಯಿಂದ ಪ್ರಭಾವಿತವಾಗಿರುತ್ತದೆ. ಚಂದ್ರ ಭೂಮಿಗೆ ಹತ್ತಿರವಾಗಿರೋದ್ರಿಂದ ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಗೋಚರಿಸುತ್ತಾನೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಚಂದ್ರಗ್ರಹಣದ ಸಮಯದಲ್ಲಿ ಆಹಾರವನ್ನು ಬೇಯಿಸಬಾರದು ಅಥವಾ ತಿನ್ನಬಾರದು. ಹೊಸ ವಸ್ತು ಖರೀದಿ ಮಾಡುವುದು. ಸ್ಮಶಾನಕ್ಕೆ ಹೋಗಬಾರದು, ಶುಭ ಕಾರ್ಯಗಳ ಮಾಡಬಾರದು. ಗ್ರಹಣದ ಸಮಯದಲ್ಲಿ ಪತಿ ಪತ್ನಿ ದೈಹಿಕ ಸಂಬಂಧ ಹೊಂದಬಾರದು. ಗ್ರಹಣ ಸಮಯದಲ್ಲಿ ಪ್ರಾಣಿಗಳ ಹಿಂಸೆ ಮಾಡುವುದು ಕೂಡ ಪಾಪದ ಕೆಲಸ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


