Wednesday, November 4, 2026
spot_img
More
    spot_img
    HomeEntertainmentಇಂದಿನಿಂದಲೇ ಪುಷ್ಪ ದರ್ಶನ: ಕರ್ನಾಟಕದಲ್ಲಿ ಟಿಕೆಟ್‌ ದರ ಬಲು ದುಬಾರಿ!

    ಇಂದಿನಿಂದಲೇ ಪುಷ್ಪ ದರ್ಶನ: ಕರ್ನಾಟಕದಲ್ಲಿ ಟಿಕೆಟ್‌ ದರ ಬಲು ದುಬಾರಿ!

    ಸ್ಟೈಲಿಷ್‌ ಸ್ಟಾರ್‌ ಅಲ್ಲು ಅರ್ಜುನ್‌ ಹಾಗೂ ನಿರ್ದೇಶಕ ಸುಕುಮಾರ್‌ ಕಾಂಬಿನೇಷನ್‌ನ ಬಹು ನಿರೀಕ್ಷಿತ ಬಿಗ್‌ ಬಜೆಟ್‌ ಚಿತ್ರ ಪುಷ್ಟ ದ ರೂಲ್‌ ನಾಳೆ ( ಡಿಸೆಂಬರ್‌ 5 ) ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.

    ಪುಷ್ಪ ದ ರೈಸ್‌ ಚಿತ್ರದ ಮುಂದುವರಿದ ಭಾಗವಾಗಿರುವ ಪುಷ್ಪ ದ ರೂಲ್‌ ಈಗಾಗಲೇ ಟ್ರೈಲರ್‌ ಹಾಗೂ ಹಾಡುಗಳಿಂದ ಸಿನಿ ರಸಿಕರಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

    ಇನ್ನು ಪುಷ್ಪ ಪ್ಯಾನ್‌ ಇಂಡಿಯಾ ಬಿಡುಗಡೆಯಾದರೂ ದೊಡ್ಡ ಮಟ್ಟದಲ್ಲಿ ರೀಚ್‌ ಆಗಿರಲಿಲ್ಲ. ಆದರೆ ಚಿತ್ರ ಒಟಿಟಿಗೆ ಬಂದ ಬಳಿಕ ಚಿತ್ರದ ಎರಡನೇ ಭಾಗಕ್ಕಾಗಿ ಸಿನಿ ರಸಿಕರು ದೊಡ್ಡ ಮಟ್ಟದಲ್ಲಿ ಕಾಯುತ್ತಿದ್ದಾರೆ.

    ಚಿತ್ರ ನಾಳೆ ಬಿಡುಗಡೆಯಾಗುತ್ತಿದ್ದರೂ ಇಂದು (ಡಿಸೆಂಬರ್‌ 4) ರಾತ್ರಿ ಒಂಬತ್ತರ ನಂತರ ದೇಶದ ಹಲವು ನಗರಗಳಲ್ಲಿ ಚಿತ್ರದ ಪ್ರೀಮಿಯರ್‌ ಶೋಗಳನ್ನು ಆಯೋಜಿಸಲಾಗಿದ್ದು, ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕಿಂಗ್‌ ತೆರೆಯಲಾಗಿದೆ.

    ಇನ್ನು ಈ ಪ್ರೀಮಿಯರ್‌ ಶೋ ಟಿಕೆಟ್‌ ದರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ದುಬಾರಿ ಎಂಬ ಚರ್ಚೆ ಹುಟ್ಟುಹಾಕಿದ್ದು, ಕರ್ನಾಟಕದಲ್ಲಿಯೂ ಸಹ ಟಿಕೆಟ್‌ ದರ ಜೇಬು ಸುಡುತ್ತಿದೆ. ಆದರೂ ಸಹ ಸಿನಿ ರಸಿಕರು ಟಿಕೆಟ್‌ಗಳನ್ನು ಖರೀದಿಸಲು ಮುಗಿಬೀಳುತ್ತಿದ್ದು, ಶೋಗಳು ಸೋಲ್ಡ್‌ಔಟ್‌ ಆಗುತ್ತಿವೆ.

    ಮೈಸೂರಿನಲ್ಲಿ ಪುಷ್ಪ ಚಿತ್ರದ ಪ್ರೀಮಿಯರ್‌ ಶೋ ಟಿಕೆಟ್‌ ದರ 500ರಿಂದ 750 ರೂಪಾಯಿಗಳವರೆಗೆ ಇದ್ದರೆ, ಬೆಂಗಳೂರಿನ ಸಿಂಗಲ್‌ ಸ್ಕ್ರೀನ್‌ಗಳಲ್ಲಿ 600ರಿಂದ 800, ಮಲ್ಟಿಪ್ಲೆಕ್ಸ್‌ಗಳಲ್ಲಿ 800, 850, 900, 1000, 1200 ರೂಪಾಯಿಗಳಷ್ಟಿದೆ. ಇನ್ನು ಕೆಲವೊಂದು ಮಲ್ಟಿಪ್ಲೆಕ್ಸ್‌ಗಳಲ್ಲಿ 1900 ರೂಪಾಯಿಗಳಿಗೆ ಟಿಕೆಟ್‌ ಮಾರಾಟ ಮಾಡಲಾಗುತ್ತಿದೆ.

    ಒಟ್ಟಿನಲ್ಲಿ ಚಿತ್ರಕ್ಕೆ ಸಿಕ್ಕಾಪಟ್ಟೆ ಹೈಪ್‌ ಇರುವುದು ಟಿಕೆಟ್‌ ದರ ಎಷ್ಟೇ ಹೆಚ್ಚು ಮಾಡಿದರೂ ಸಿನಿ ರಸಿಕರು ಟಿಕೆಟ್‌ಗಳನ್ನು ಬುಕ್‌ ಮಾಡುತ್ತಿರುವುದಕ್ಕೆ ಕಾರಣವಾಗಿದ್ದು, ಇಷ್ಟು ದುಬಾರಿ ಟಿಕೆಟ್‌ ದರದೊಂದಿಗೆ ತೆರೆಗೆ ಅಪ್ಪಳಿಸಲಿರುವ ಪುಷ್ಪ ಸಿನಿ ರಸಿಕರ ಮನ ಗೆಲ್ತಾನಾ ಎಂಬ ಪ್ರಶ್ನೆಗೆ ನಾಳೆ ಉತ್ತರ ಸಿಗಲಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search