Saturday, September 19, 2026
spot_img
More
    spot_img
    HomeEntertainmentಬೆಂಗಳೂರಿನ ಪುಷ್ಪ 2 ಮಿಡ್‌ನೈಟ್‌ ಶೋಗಳನ್ನು ರದ್ದು ಮಾಡಿ, ಇಷ್ಟು ಗಂಟೆಗೆ ಆರಂಭಿಸಿ; ಡಿಸಿ ಆದೇಶ

    ಬೆಂಗಳೂರಿನ ಪುಷ್ಪ 2 ಮಿಡ್‌ನೈಟ್‌ ಶೋಗಳನ್ನು ರದ್ದು ಮಾಡಿ, ಇಷ್ಟು ಗಂಟೆಗೆ ಆರಂಭಿಸಿ; ಡಿಸಿ ಆದೇಶ

    ನಾಳೆ ( ಡಿಸೆಂಬರ್‌ 5 ) ಬಹು ನಿರೀಕ್ಷಿತ ಪುಷ್ಪ 2 ಚಿತ್ರ ಬಿಡುಗಡೆಯಾಗುತ್ತಿದ್ದು, ಚಿತ್ರ ವೀಕ್ಷಿಸಲು ಸಿನಿ ರಸಿಕರು ಕಾತರರಾಗಿದ್ದಾರೆ. ಇನ್ನು ಬೆಂಗಳೂರಿನಲ್ಲಿಯೂ ಸಹ ಪ್ಯಾನ್‌ ಇಂಡಿಯಾ ತೆಲುಗು ಚಿತ್ರ ʼಪುಷ್ಪ ದ ರೂಲ್‌ʼ ಹವಾ ಜೋರಾಗಿದ್ದು, ಮಧ್ಯರಾತ್ರಿಯಿಂದಲೇ ಪ್ರದರ್ಶನಗಳನ್ನು ಆರಂಭಿಸಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿತ್ತು.

    Advertisement

    ಆದರೆ ಅಲ್ಲು ಅರ್ಜುನ್‌ ಅಭಿಮಾನಿಗಳ ಹಾಗೂ ಸಿನಿ ರಸಿಕರ ಈ ಆಸೆಗೆ ಬೆಂಗಳೂರು ಜಿಲ್ಲಾಧಿಕಾರಿ ತಣ್ಣೀರು ಚೆಲ್ಲಿದ್ದು, ಚಿತ್ರಕ್ಕೆ ನಗರದಲ್ಲಿ ಆಯೋಜಿಸಲಾಗಿದ್ದ ಎಲ್ಲಾ ಮಿಡ್‌ನೈಟ್‌ ಶೋಗಳು ಹಾಗೂ ಸೂರ್ಯೋದಯಕ್ಕೂ ಮುನ್ನ ಇದ್ದ ಮುಂಜಾನೆ ಶೋಗಳನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ.

    ಹೌದು, ಈ ಕುರಿತು ಪೊಲೀಸರಿಗೆ ಪತ್ರ ಬರೆದಿರುವ ಜಿಲ್ಲಾಧಿಕಾರಿ ಕರ್ನಾಟಕ ಸಿನಿಮಾ ರೆಗ್ಯೂಲೇಷನ್‌ ಕಾಯ್ದೆಯನ್ನು ಉಲ್ಲೇಖಿಸಿದ್ದು, ಈ ನಿಯಮದಂತೆ ಬೆಳಗ್ಗೆ 6.30ರ ನಂತರವಷ್ಟೇ ಚಿತ್ರವನ್ನು ಪ್ರದರ್ಶಿಸಬೇಕು, ಅದಕ್ಕೂ ಮುನ್ನ ಇರುವ ಎಲ್ಲಾ ಪ್ರದರ್ಶವನ್ನು ಕೂಡಲೇ ರದ್ದುಗೊಳಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಕರ್ನಾಟಕ ನಿರ್ಮಾಪಕರ ಕೌನ್ಸಿಲ್‌ ನೀಡಿದ್ದ ದೂರಿನ ಆಧಾರದ ಮೇಲೆ ಈ ಆದೇಶವನ್ನು ಡಿಸಿ ಹೊರಡಿಸಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading