Friday, November 6, 2026
spot_img
More
    spot_img
    HomeLatest newsಗ್ರಾಮ ಪಂಚಾಯಿತಿ ಆಸ್ತಿಗಳಿಗೆ ಇ-ಸ್ವತ್ತು: ನಮೂನೆ ಮತ್ತು ನಿಯಮಗಳು

    ಗ್ರಾಮ ಪಂಚಾಯಿತಿ ಆಸ್ತಿಗಳಿಗೆ ಇ-ಸ್ವತ್ತು: ನಮೂನೆ ಮತ್ತು ನಿಯಮಗಳು

    ಕರ್ನಾಟಕ ಸರ್ಕಾರ ಗ್ರಾಮ ಪಂಚಾಯಿತಿಗಳ ಆಸ್ತಿಗಳಿಗೆ ಇ-ಸ್ವತ್ತು ನೀಡುವ ಪ್ರಕ್ರಿಯೆ ಪ್ರಾರಂಭಿಸಿದೆ. ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9 ಮತ್ತು 11-ಎ ನೀಡುವ ಬಗ್ಗೆ ಸುತ್ತೋಲೆಯನ್ನು ಹೊರಡಿಸಲಾಗಿದೆ.

    ಈ ಕುರಿತು ಡಾ.ಎನ್. ನೋಮೇಶ್ ಕುಮಾರ್. ನಿರ್ದೇಶಕರು (ಪಂ.ರಾಜ್) ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ.

    ಸುತ್ತೋಲೆಯು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಕರ್ನಾಟಕ ಭೂಕಂದಾಯ ಅಧಿನಿಯಮ, 1964ರ ಪ್ರಕರಣ 94-ಸಿ, 94-ಸಿಸಿ ಹಾಗೂ 94-ಡಿ ರಡಿಯಲ್ಲಿ ನಿವೇಶನ ಮತ್ತು ಮನೆ ನೀಡುವ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9 ಮತ್ತು 11-ಎ ನೀಡುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

    ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಕರ್ನಾಟಕ ಭೂಕಂದಾಯ ಅಧಿನಿಯಮ, 1964 ರ ಪ್ರಕರಣ 94- ಸಿ, 94-ಸಿಸಿ ಹಾಗೂ 94-ಡಿ ರಡಿಯಲ್ಲಿ ನಿವೇಶನ ಮತ್ತು ಮನೆ ನೀಡುವ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9 ಮತ್ತು 11-ಎ ನೀಡಲು ಕೈಗೊಳ್ಳಬೇಕಾದ ಕ್ರಿಯೆಗಳ ಬಗ್ಗೆ ಸರ್ಕಾರದಿಂದ ಆದೇಶ ಹೊರಡಿಸಲಾಗಿರುತ್ತದೆ.

    ಕರ್ನಾಟಕ ಭೂಕಂದಾಯ ಅಧಿನಿಯಮ, 1964 ರ ಪ್ರಕರಣ 94-ಡಿ ರಡಿಯಲ್ಲಿ ಕಂದಾಯ ಇಲಾಖೆಯಿಂದ ವಿತರಣೆ ಮಾಡಲಾದ ಹಕ್ಕು ಪತ್ರಗಳಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿಗಳಲ್ಲಿ ಉಂಟಾದ ಗೊಂದಲಗಳ ಕುರಿತು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸದರಿ ಸಭೆಯ ನಡವಳಿಯಂತೆ ಈ ಕೆಳಕಂಡಂತೆ ಕ್ರಮ ವಹಿಸಲು ತಿಳಿಸಿದೆ.

    * ಕಂದಾಯ ಇಲಾಖೆಯ ತಂತ್ರಾಂಶದ ಮೂಲಕ ತಹಶೀಲ್ದಾರರಿಂದ ಸ್ವೀಕರಿಸಲಾದ ಹಕ್ಕು ಪತ್ರಗಳಲ್ಲಿ ತಪ್ಪಾದ/ ಅಪೂರ್ಣ (ವಿಸ್ತೀರ್ಣ, ಚಕ್ಕುಬಂಧಿ ಇತ್ಯಾದಿ) ಮಾಹಿತಿಯಿದ್ದಲ್ಲಿ, ಅಂತಹ ಹಕ್ಕು ಪತ್ರಗಳಿಗೆ ಇ-ಸ್ವತ್ತು ತಂತ್ರಾಂಶದಲ್ಲಿ PID ತಯಾರಿಸಿದ ಇ-ಸ್ವತ್ತು ತಂತ್ರಾಂಶದಲ್ಲಿ ತಿರಸ್ಕರಿಸುವುದು.

    * ತಪ್ಪಾದ/ ಅಪೂರ್ಣ ಮಾಹಿತಿಯುಳ್ಳ ಹಕ್ಕುಪತ್ರಗಳಿಗೆ ಗ್ರಾಮ ಪಂಚಾಯತಿಗಳಲ್ಲಿ ಈಗಾಗಲೇ PID ಗಳನ್ನು ಸೃಜಿಸಿರುವ ಸಂದರ್ಭಗಳಿದ್ದಲ್ಲಿ XML ಫೈಲ್‌ಗಳನ್ನು ರಿಜೆಕ್ಟ್ ಮಾಡುವುದು, ಈಗಾಗಲೇ, ಒಂದು ವೇಳೆ ನೋಟೀಸ್ ಸೃಜಿಸಿ 15 ದಿನಗಳ ಮ್ಯುಟೇಷನ್‌ ಅವಧಿಯಲ್ಲಿದ್ದಲ್ಲಿ ಅಂತಹ PID ಗಳನ್ನು ಅನುಮೋದಿಸದೆ ಫಲಾನುಭವಿಗಳ ಮಾಹಿತಿಯನ್ನು ತಹಶೀಲ್ದಾರರಿಗೆ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮುಂದಿನ ಸೂಕ್ತ ಕ್ರಮಕ್ಕಾಗಿ ಸಲ್ಲಿಸುವುದು.

    * ತಹಶೀಲ್ದಾರರಿಂದ ಸ್ವೀಕರಿಸಲಾದ ಹಕ್ಕು ಪತ್ರಗಳ ವಿವರಗಳನ್ವಯ ಈಗಾಗಲೇ ಗ್ರಾಮ ಪಂಚಾಯತಿಯ ಪಂಚತಂತ್ರ ತಂತ್ರಾಂಶದಲ್ಲಿ ಫಲಾನುಭವಿಯ ವಿವರಗಳು ಇದ್ದಲ್ಲಿ ತಹಶೀಲ್ದಾರರಿಂದ ಸ್ವೀಕರಿಸಲಾದ ಹಕ್ಕು ಪತ್ರಗಳಿಗೆ ಹೊಸದಾಗಿ ಇ-ಸ್ವತ್ತು ತಂತ್ರಾಂಶದಲ್ಲಿ PID ಸೃಜಿಸದೆ, ಪಂಚತಂತ್ರ ತಂತ್ರಾಂಶದಲ್ಲಿನ ಅಸ್ತಿಯ PID ಗೆ ಹಕ್ಕು ಪತ್ರವನ್ನು ಜೋಡಣೆ ಮಾಡುವುದು. ಈ ಪ್ರಕರಣದಲ್ಲಿ ನೊಂದಣಿಯ ಅಗತ್ಯ ಇರುವುದಿಲ್ಲ.

    * ಪಂಚತಂತ್ರ ತಂತ್ರಾಂಶದಲ್ಲಿನ ಮಾಹಿತಿಗೆ ಹಕ್ಕು ಪತ್ರವನ್ನು ಜೋಡಣೆ ಮಾಡದೆಯೇ, ಹಕ್ಕು ಪತ್ರಗಳಿಗೆ ಹೊಸದಾಗಿ ಇ-ಸ್ವತ್ತು ತಂತ್ರಾಂಶದಲ್ಲಿ PID ಸೃಜಿಸಲಾಗಿದ್ದರೆ, ಪಂಚತಂತ್ರದಲ್ಲಿನ ಹಳೆಯ PIDಯನ್ನು ನಿಷ್ಕ್ರಿಯಗೊಳಿಸುವುದು (Disable).

    * ಪಂಚತಂತ್ರ ತಂತ್ರಾಂಶದಲ್ಲಿನ ಮಾಹಿತಿಗೆ ಹಕ್ಕು ಪತ್ರವನ್ನು ಜೋಡಣೆ ಮಾಡದೆಯೇ, ಹಕ್ಕು ಪತ್ರಗಳಿಗೆ ಹೊಸದಾಗಿ ಇ-ಸ್ವತ್ತು ತಂತ್ರಾಂಶದಲ್ಲಿ PID ಸೃಜಿಸಲಾಗಿದ್ದು ಮತ್ತು ಪಂಚತಂತ್ರ ತಂತ್ರಾಂಶದಲ್ಲಿನ PID ಯನ್ನು ಇ-ಸ್ವತ್ತು ತಂತ್ರಾಂಶದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ವರ್ಗಾವಣೆಗೆ ಒಳಪಡಿಸಿದ್ದರೆ, ಅಂತಹ ಸಂದರ್ಭದಲ್ಲಿ ಹಕ್ಕು ಪತ್ರಗಳನ್ವಯ ಸೃಜಿಸಲಾಗಿರುವ PID ಯ XML File ಗೆ ಗ್ರಾಮ ಪಂಚಾಯತಿಯಿಂದ ನೋಟೀಸ್ ಸೃಜಿಸದೆ, XML File ಅನ್ನು ರಿಜೆಕ್ಟ್ ಮಾಡುವುದು. ಒಂದು ವೇಳೆ ನೋಟೀಸ್ ಸೃಜಿಸಿ, 15 ದಿನಗಳ ಮ್ಯುಟೇಷನ್ ಅವಧಿಯಲ್ಲಿದ್ದರೇ, ಅಂತಹ PID ಗಳನ್ನು ಅನುಮೋದಿಸದೆ ಫಲಾನುಭವಿಗಳ ಮಾಹಿತಿಯನ್ನು ತಹಶೀಲ್ದಾರರಿಗೆ ಮುಂದಿನ ಸೂಕ್ತ ತಿದ್ದುಪಡಿಗೆ ವರ್ಗಾಯಿಸುವುದು.

    * ಕರ್ನಾಟಕ ಭೂಕಂದಾಯ ಅಧಿನಿಯಮ, 1964 ರ ಪ್ರಕರಣ 94-ಡಿ ರಡಿಯಲ್ಲಿ ವಾಸದ ಮನೆಗಳಿಗೆ ಹಾಗೂ ಹೊಂದಿಕೊಂಡಿರುವ ಜಾಗಗಳಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಗಿರುತ್ತದೆ. ಪ್ರಸ್ತುತ, ವಿತರಣೆ ಮಾಡಲಾಗಿರುವ ಹಕ್ಕು ಪತ್ರಗಳಲ್ಲಿ ನಿವೇಶನದ ಮಾಹಿತಿ ಮಾತ್ರ ಲಭ್ಯವಿರುವುದರಿಂದ ಕಾವೇರಿ ತಂತ್ರಾಂಶದಿಂದ ಗ್ರಾಮ ಪಂಚಾಯತಿಗಳು ಫಲಾನುಭವಿ ಹೆಸರಿಗೆ ಸ್ವೀಕರಿಸುವ XML File ಗಳನ್ನು ಮ್ಯುಟೇಷನ್ ಪ್ರಕ್ರಿಯೆಗೆ ಒಳಪಡಿಸಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿಯು, 15 ದಿನಗಳ ನೋಟೀಸ್ ಅವಧಿಯಲ್ಲಿ ಹಕ್ಕು ಪತ್ರಗಳಲ್ಲಿನ ವಿವರಗಳಿಗೆ ಅನುಗುಣವಾಗಿ ಮನೆಗಳ ಸ್ಥಳ ಪರಿಶೀಲನೆ ಮಾಡಿ ಕಟ್ಟಡಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮಹಜರಿನೊಂದಿಗೆ ಲಿಖಿತವಾಗಿ ಫಲಾನುಭವಿಯಿಂದ ಪಡೆದು ಫಲಾನುಭವಿಯ ಹೆಸರನ್ನು ಇ-ಸ್ವತ್ತು ತಂತ್ರಾಂಶದಲ್ಲಿ ಅನುಮೋದನೆ ಮಾಡಿದ ನಂತರ, ಪುನಃ ಮ್ಯಾನ್ಯುಯಲ್ ಮ್ಯುಟೇಷನ್ ಮಾಡುವ ಮೂಲಕ (ಸ್ವತ್ತಿನ ಪ್ರಕಾರ) ನಿವೇಶನದ ವಿವರದೊಂದಿಗೆ ಕಟ್ಟಡದ ಮಾಹಿತಿಯನ್ನು ತಂತ್ರಾಂಶದಲ್ಲಿ ಇಂದೀಕರಿಸುವ ಮೂಲಕ ಫಲಾನುಭವಿಯ ಹೆಸರಿಗೆ ನಮೂನೆಗಳ ವಿತರಣೆಗೆ ಕ್ರಮ ವಹಿಸುವುದು.

    * ಹಕ್ಕು ಪತ್ರಗಳ ಷರತ್ತುಗಳನ್ವಯ ಫಲಾನುಭವಿಗಳು ಪಡೆದ ಆಸ್ತಿಯನ್ನು 15 ವರ್ಷಗಳ ಅವಧಿಯವರೆಗೆ ಪರಭಾರೆ ಮಾಡದ ಅಂಶವನ್ನು ಇ-ಸ್ವತ್ತು ತಂತ್ರಾಂಶದ ಹಕ್ಕುಗಳು ಮತ್ತು ಋಣಗಳು ಕಾಲಂನಲ್ಲಿ ಸ್ವಯಂ ಚಾಲಿತವಾಗಿ (Automatic) ದಾಖಲಾಗಿರುವುದನ್ನು ಹಾಗೂ ಇ-ಸ್ವತ್ತು ನಮೂನೆಗಳಲ್ಲಿ ದಾಖಲಾಗಿರುವುದರ ಬಗ್ಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಯು ದೃಢೀಕರಿಸಿಕೊಳ್ಳುವುದು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಸೇರಿದ ಕಟ್ಟಡ/ನಿವೇಶನ PTCL ವ್ಯಾಪ್ತಿಗೆ ಒಳಪಡುವುದರಿಂದ PTCL ಕಾಯ್ದೆಯಂತೆ ಕ್ರಮ ವಹಿಸುವುದು.

    ಎಲ್ಲಾ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಎಲ್ಲಾ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಉಪ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತಿಯ ಇತರೆ ಎಲ್ಲಾ ಅಧಿಕಾರಿಗಳು, ಎಲ್ಲಾ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಹಾಯಕ ನಿರ್ದೇಶಕರುಗಳು, ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳಿಗೆ ಸೂಚಿಸಲಾಗಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search