ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರ ಸರಣಿಯ ಬೃಹತ್ ಗೆಲುವಿನ ಬಳಿಕ ನಟಿಸುತ್ತಿರುವ ಸಿನಿಮಾ ಟಾಕ್ಸಿಕ್ ಮೇಲೆ ನಿರೀಕ್ಷೆ ಎಷ್ಟರ ಮಟ್ಟಿಗಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.
ಕೇವಲ ಒಂದೇ ಒಂದು ಘೋಷಣೆಯಿಂದ ಈಗಾಗಲೇ ಬುಕ್ಮೈಶೋನಲ್ಲಿ 50 ಸಾವಿರಕ್ಕೂ ಹೆಚ್ಚು ಇಂಟರೆಸ್ಟ್ ಗಳಿಸಿರುವ ಈ ಮೆಗಾ ಚಿತ್ರದ ಬಗ್ಗೆ ಇದೀಗ ಬಹು ದಿನಗಳ ಬಳಿಕ ಅಧಿಕೃತ ಅಪ್ಡೇಟ್ ಒಂದು ಹೊರಬಿದ್ದಿದೆ.
ಹೌದು, ಚಿತ್ರದ ಕುರಿತು ಕೆವಿಎನ್ ಪ್ರೊಡಕ್ಷನ್ಸ್ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು ಪೋಸ್ಟರ್ ಒಂದನ್ನು ಹಂಚಿಕೊಂಡಿದೆ. ಈ ಪೋಸ್ಟರ್ನಲ್ಲಿ ʼಅಮಲೇರಿಸಿಕೊಳ್ಳಲು ಸಿದ್ಧರಿದ್ದೀರಾ? ನಿರೀಕ್ಷಿಸಿ…ʼ ಎಂಬ ಸಾಲು ಇದ್ದು, ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಲಿದೆಯಾ ಎಂಬ ನಿರೀಕ್ಷೆಗಳು ಹುಟ್ಟಿಕೊಂಡಿವೆ.
ಇನ್ನು ಈ ಚಿತ್ರಕ್ಕೆ ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ದು, ಮಲಯಾಳಂನ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕಿ ಸಂದರ್ಶನವೊಂದರಲ್ಲಿ ತಿಳಿಸಿರುವ ಪ್ರಕಾರ ಇದೊಂದು ಗ್ಯಾಂಗ್ಸ್ಟರ್ ಚಿತ್ರವಾಗಿರಲಿದ್ದು, ಎಮೋಷನ್ ಅಂಶಗಳನ್ನೊಳಗೊಂಡಿರಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


