ನವದೆಹಲಿ: ಇಂದು (ಫೆಬ್ರವರಿ 5) ದೆಹಲಿ ವಿಧಾನಸಭಾ ಚುನಾವಣೆಯ ಎಲ್ಲಾ 70 ಕ್ಷೇತ್ರಗಳಿಗೂ ಮತದಾನ ನಡೆದಿದ್ದು, ಮತದಾನ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿದ್ದಂತೆ ವಿವಿಧ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಗಳನ್ನು ಬಹಿರಂಗಪಡಿಸಿವೆ.
ಇನ್ನು ಯಾವುದೇ ಚುನಾವಣೆ ಸಮೀಕ್ಷೆಯನ್ನು ತೆಗೆದುಕೊಂಡರೂ ಕಾಂಗ್ರೆಸ್ ಒಂದು ಸ್ಥಾನದಲ್ಲಿ ಗೆದ್ದರೆ ಹೆಚ್ಚು ಎಂಬ ವರದಿಯಿದ್ದು, ಬಿಜೆಪಿ ಹಾಗೂ ಎಎಪಿ ನಡುವೆ ನೇರಾನೇರ ಮುಖಾಮುಖಿ ಏರ್ಪಡಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ.
ಅನೇಕ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಯನ್ನು ಮಾಡಿದ್ದು ಈ ಪೈಕಿ ಆಯ್ದ 10 ಸಮೀಕ್ಷಾ ವರದಿಗಳನ್ನು ಈ ಕೆಳಗೆ ಪ್ರಕಟಿಸಲಾಗಿದೆ.
ಮ್ಯಾಟ್ರೈಜ್ ಚುನಾವಣೋತ್ತರ ಸಮೀಕ್ಷೆ: ಬಿಜೆಪಿ 35ರಿಂದ 40 ಸ್ಥಾನಗಳಲ್ಲಿ, ಎಎಪಿ 32ರಿಂದ 37 ಸ್ಥಾನಗಳಲ್ಲಿ ಬಹುಮತ ಪಡೆಯಲಿದ್ದು, ಕಾಂಗ್ರೆಸ್ ೦-1 ಸ್ಥಾನ ಗೆಲ್ಲಬಹುದು ಎಂದು ತಿಳಿಸಿದೆ
ಪೀಪಲ್ ಪಲ್ಸ್ ಚುನಾವಣೋತ್ತರ ಸಮೀಕ್ಷೆ: ಬಿಜೆಪಿ 51ರಿಂದ 60 ಸ್ಥಾನಗಳಲ್ಲಿ, ಎಎಪಿ 10ರಿಂದ 19 ಸ್ಥಾನಗಳಲ್ಲಿ ಬಹುಮತ ಪಡೆಯಲಿದ್ದು, ಕಾಂಗ್ರೆಸ್ ಶೂನ್ಯ ಸುತ್ತಲಿದೆ ಎಂದು ತಿಳಿಸಿದೆ.
ದೈನಿಕ್ ಭಾಸ್ಕರ್ ಸಂಸ್ಥೆಯ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಬಿಜೆಪಿ 23ರಿಂದ 27 ಸ್ಥಾನಗಳಲ್ಲಿ, ಎಎಪಿ 43ರಿಂದ 47 ಸ್ಥಾನಗಳಲ್ಲಿ ಹಾಗೂ ಕಾಂಗ್ರೆಸ್ 0-1 ಸ್ಥಾನದಲ್ಲಿ ಬಹುಮತ ಸಾಧಿಸಲಿದೆ ಎಂದು ತಿಳಿಸಿದೆ.
ಚಾಣಕ್ಯ ಸಂಸ್ಥೆಯ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಬಿಜೆಪಿ 39ರಿಂದ 44 ಸ್ಥಾನಗಳಲ್ಲಿ, ಎಎಪಿ 25ರಿಂದ 28 ಸ್ಥಾನಗಳಲ್ಲಿ ಹಾಗೂ ಕಾಂಗ್ರೆಸ್ 0-1 ಸ್ಥಾನದಲ್ಲಿ ಬಹುಮತ ಸಾಧಿಸಲಿದೆ ಎಂದು ತಿಳಿದುಬಂದಿದೆ.
ಡಿವಿ ರಿಸರ್ಚ್ ಸಂಸ್ಥೆಯ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಬಿಜೆಪಿ 36ರಿಂದ 44, ಎಎಪಿಗೆ 26ರಿಂದ 34 ಸ್ಥಾನಗಳಲ್ಲಿ ಗೆಲ್ಲಲಿದ್ದು, ಕಾಂಗ್ರೆಸ್ ಶೂನ್ಯ ಸುತ್ತಲಿದೆ ಎಂದು ತಿಳಿಸಿದೆ.
ಪಿ ಮಾರ್ಕ್ ಸಂಸ್ಥೆಯ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಬಿಜೆಪಿ 39ರಿಂದ 49, ಎಎಪಿಗೆ 21-31 ಹಾಗೂ ಕಾಂಗ್ರೆಸ್‌ಗೆ 0-1 ಕ್ಷೇತ್ರಗಳಲ್ಲಿ ಬಹುಮತ ಸಿಗಲಿದೆ ಎಂದು ತಿಳಿಸಿದೆ.
ಪೀಪಲ್ ಇನ್‌ಸೈಟ್ ಪ್ರಕಾರ ಬಿಜೆಪಿ 40-44, ಎಎಪಿ 25-29 ಸ್ಥಾನಗಳಲ್ಲಿ ಹಾಗೂ ಕಾಂಗ್ರೆಸ್ 0-1 ಸ್ಥಾನದಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದೆ.
ಜೆವಿಸಿ ಪ್ರಕಾರ ಬಿಜೆಪಿ 39-45 ಸ್ಥಾನಗಳಲ್ಲಿ, ಎಎಪಿ 22-31 ಸ್ಥಾನಗಳಲ್ಲಿ ಹಾಗೂ ಕಾಂಗ್ರೆಸ್ 0-2 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ತಿಳಿಸಿದೆ.
ಹೀಗೆ ಬಹುತೇಕ ಎಲ್ಲಾ ಚುನಾಣೋತ್ತರ ಸಮೀಕ್ಷೆಗಳಲ್ಲೂ ಬಿಜೆಪಿಯೇ ಗೆಲ್ಲಲಿದೆ ಎಂಬ ವರದಿ ಇದ್ದು, ಒಂದೆರಡು ಸಮೀಕ್ಷೆಗಳಲ್ಲಿ ಮಾತ್ರ ಎಎಪಿ ಹೆಸರು ಕೇಳಿಬಂದಿದೆ. ಇನ್ನು ಕಾಂಗ್ರೆಸ್ ಒಂದು ಸ್ಥಾನ ಗೆದ್ದರೆ ಹೆಚ್ಚು ಎಂದು ಎಲ್ಲಾ ಸಮೀಕ್ಷೆಗಳೂ ಹೇಳಿವೆ. ಇದು ಕೇವಲ ಎಕ್ಸಿಟ್ ಪೋಲ್ ಆಗಿದ್ದು ಎಕ್ಸಾಕ್ಟ್ ಪೋಲ್ ಏನೆಂಬುದು ಇದೇ ತಿಂಗಳ 8ರಂದು ಬಹಿರಂಗವಾಗಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


