Tuesday, November 3, 2026
spot_img
More
    spot_img
    HomeLatest newsನೆಲ್ಲಿಕಾಯಿ ಟೀ: ದಿನವೂ ಕುಡಿದರೆ ಆರೋಗ್ಯಕ್ಕೆ ಹತ್ತಾರು ಲಾಭಗಳು!

    ನೆಲ್ಲಿಕಾಯಿ ಟೀ: ದಿನವೂ ಕುಡಿದರೆ ಆರೋಗ್ಯಕ್ಕೆ ಹತ್ತಾರು ಲಾಭಗಳು!

    ಕೆಲವರಿಗಂತೂ ದಿನದ ಆರಂಭವೇ ಒಂದು ಕಪ್ ಚಹಾ ಸೇವನೆಯಿಂದಾಗುತ್ತದೆ. ಬೆಳಗ್ಗೆ ಎದ್ದ ಕೂಡಲೇ, ತಿಂಡಿಯೊಡನೆ, ಪುನಃ ಸಂಜೆ—ಹೀಗೆ ಬಹುತೇಕರು ದಿನಕ್ಕೆ 3-4 ಬಾರಿ ಟೀ ಸೇವಿಸಲು ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ, ಸಾಮಾನ್ಯ ಚಹಾದ ಬದಲು ನೆಲ್ಲಿಕಾಯಿ ಟೀ (Amla Tea) ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಆಯ್ಕೆಯಾಗಬಹುದು.ನೆಲ್ಲಿಕಾಯಿ ಚಹಾದಲ್ಲಿ ವಿವಿಧ ಔಷಧೀಯ ಗುಣಗಳು ಅಡಗಿದ್ದು, ಇದರ ನಿಯಮಿತ ಸೇವನೆಯಿಂದ ದೇಹದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದನ್ನು ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಜೀರ್ಣಕ್ರಿಯೆಯನ್ನು ಸುಗಮಗೊಳಿಸಲು ಹಾಗೂ ಚರ್ಮದ ಆರೋಗ್ಯವನ್ನು ಉತ್ತೇಜಿಸಲು ಸಾಧ್ಯವಿದೆ. ಆದ್ದರಿಂದ, ಬೆಳಗಿನ ಚಹಾದ ಪರ್ಯಾಯವಾಗಿ ಈ ಆರೋಗ್ಯಕರ ಪಾನೀಯವನ್ನು ಸೇವಿಸಿ, ನಿಮ್ಮ ದೈನಂದಿನ ಆರೋಗ್ಯವನ್ನು ಮತ್ತಷ್ಟು ಉತ್ತಮಗೊಳಿಸಿ,ನೆಲ್ಲಿಕಾಯಿ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ ಇದೆ.ದು ಕಾಯಿಲೆಗಳ ವಿರುದ್ಧ ಹೋರಾಡುವ ಸಾಮರ್ಥ್ಯ ನೀಡುತ್ತದೆ. ರೋಗನಿರೋಧಕ ಶಕ್ತಿ ಒದಗಿಸುವ ಆಹಾರಗಳಲ್ಲಿ ನೆಲ್ಲಿಕಾಯಿ ಚಹಾ (ಆಮ್ಲಾ ಟೀ) ಕೂಡ ಒಂದು.

    ಆಮ್ಲ ಟೀ(ನೆಲ್ಲಿಕಾಯಿ ಟೀ) ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು

    ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

    ಆಮ್ಲಾ ವಿಟಮಿನ್ C ನಲ್ಲಿ ಸಮೃದ್ಧವಾಗಿದ್ದು, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.ಆಮ್ಲದಲ್ಲಿ ವಿಟಮಿನ್ ಸಿ ಸಮೃದ್ಧ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದರ ಮೂಲಕ ದೇಹ ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳ ವಿರುದ್ಧ ಹೋರಾಡುತ್ತದೆ.ಇದರ ಮೂಲಕ ದೇಹ ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳ ವಿರುದ್ಧ ಹೋರಾಡುತ್ತದೆ. ಉರಿಯೂತದ ಗುಣಲಕ್ಷಣಗಳು, ನೋಯುತ್ತಿರುವ ಗಂಟಲು ಮತ್ತು ಶೀತಗಳಿಂದ ಉಂಟಾಗುವ ಊತದಂತಹ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ

    ಮಧುಮೇಹ ನಿಯಂತ್ರಣ

    ದೇಹದ ರಕ್ತ ಸಂಚಾರದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದರೆ, ಮಧುಮೇಹದ ಮಟ್ಟ ನಿಯಂತ್ರಣ ತಪ್ಪಿ ಏರಿಕೆಯಾಗಬಹುದು. ಇದರೊಂದಿಗೆ ಇತರ ಹಲವಾರು ಆರೋಗ್ಯ ಸಮಸ್ಯೆಗಳೂ ಕಾಣಿಸಿಕೊಳ್ಳಲು ಆರಂಭಿಸುತ್ತವೆ. ನೆಲ್ಲಿಕಾಯಿಯಲ್ಲಿ ಕ್ರೋಮಿಯಂ ಆಮ್ಲ ಅಧಿಕವಾಗಿರುವುದರಿಂದ, ಇದು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ನೆಲ್ಲಿಕಾಯಿ ಟೀ ನಿತ್ಯ ಸೇವನೆಯಿಂದ ಮಧುಮೇಹವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.ನೀವು ಮಧುಮೇಹಿಗಳಾಗಿದ್ದರೆ ನೆಲ್ಲಿಕಾಯಿ ಚಹಾ ಬಹಳ ಪ್ರಯೋಜನಕಾರಿ. ನೆಲ್ಲಿಕಾಯಿಯನ್ನು ಹಾಗೆಯೇ ತಿನ್ನುವುದು, ಕಲ್ಲು ಉಪ್ಪಿನೊಂದಿಗೆ ಬೆರೆಸಿ ತಿನ್ನುವುದು,ರುಬ್ಬಿಕೊಂಡು ಚಟ್ನಿ ಮಾಡಿ ಸೇವಿಸುವುದು ನೆಲ್ಲಿಕಾಯಿ ಜ್ಯೂಸ್ ಮಾಡಿ ಕುಡಿಯುವುದು ಸಹ ಪ್ರಯೋಜನಕಾರಿಯಾಗಿರುತ್ತದೆ.

    ಕಣ್ಣಿನ ಆರೋಗ್ಯಕ್ಕೆ ಉತ್ತಮ:

    ಆಮ್ಲಾ ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೃಷ್ಟಿ ಸುಧಾರಿಸುತ್ತದೆ ಹಾಗೂ ಗ್ಲುಕೋಮಾದಂತಹ ಕಣ್ಣಿನ ಸಮಸ್ಯೆಗಳನ್ನು ತಡೆಯುತ್ತದೆ. ಅಲ್ಲದೆ, ಆಮ್ಲಾದಲ್ಲಿರುವ ಉರಿಯೂತದ ಗುಣಲಕ್ಷಣಗಳು ಕಣ್ಣಿನ ಉರಿಯೂತ ಹಾಗೂ ಕಣ್ಣು ಕೆಂಪಾಗುವುದು, ತುರಿಕೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

    ಫ್ರೀ ರಾಡಿಕಲ್ ಹಾನಿ ಕಡಿಮೆ ಮಾಡುತ್ತದೆ

    ನೆಲ್ಲಿಕಾಯಿಯಲ್ಲಿ ಹೆಚ್ಚು ಪ್ರಮಾಣದಲ್ಲಿ ವಿಟಮಿನ್ C ಇರುವುದು ಶಕ್ತಿಯುತ ಉತ್ಕರ್ಷಣ ನಿರೋಧಕವಾಗಿ (ಆಂಟಿ-ಆಕ್ಸಿಡೆಂಟ್) ಕಾರ್ಯನಿರ್ವಹಿಸುತ್ತದೆ. ಇದಲ್ಲದೇ, ಈ ಹಣ್ಣಿನಲ್ಲಿ ಪಾಲಿಫಿನಾಲ್‌ಗಳು, ಟ್ಯಾನಿನ್‌ಗಳು, ಮತ್ತು ಫ್ಲೇವನಾಯ್ಡ್‌ಗಳೂ ಹೇರಳವಾಗಿವೆ. ಇವೆಲ್ಲವೂ ದೇಹವನ್ನು ಆಕ್ಸಿಡೇಟಿವ್ ಒತ್ತಡದಿಂದ ಹಾಗೂ ಸ್ವತಂತ್ರ ರಾಡಿಕಲ್ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತವೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ನಿಯಮಿತವಾಗಿ ನೆಲ್ಲಿಕಾಯಿ ಟೀ ಸೇವಿಸುವುದರಿಂದ ಈ ಪ್ರಯೋಜನಗಳನ್ನು ಅನುಭವಿಸಬಹುದು.

    ತೂಕ ಇಳಿಕೆಗೆ ಸಹಕಾರಿ

    ನೆಲ್ಲಿಕಾಯಿ ಚಹಾದಲ್ಲಿರುವ ಡಯೆಟರಿ ಫೈಬರ್ (dietary fiber) ತೂಕ ನಿಯಂತ್ರಣಕ್ಕೆ ಸಹಕಾರಿ ಮತ್ತು ಇದು ಬೆಡದ ಕೊಲೆಸ್ಟ್ರಾಲ್ ಶಮನ ಮಾಡಬಹುದು. ಹಾಗೆಯೇ, ದೇಹದಲ್ಲಿ ಸಂಗ್ರಹವಾಗಿರುವ ಅತಿರೇಕ ಕೊಬ್ಬನ್ನು ಕಡಿಮೆ ಮಾಡುವ ಮೂಲಕ ಹೃದ್ರೋಗ, ಕಿಡ್ನಿ ಸ್ಟೋನ್, ಮತ್ತು ಇತರ ಆರೋಗ್ಯ ಸಮಸ್ಯೆಗಳ ಸಂಭವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಇದು ದೇಹದ ಚಯಾಪಚಯ ಕ್ರಿಯೆಯನ್ನು (metabolism) ಉತ್ತೇಜಿಸಿ, ಹೆಚ್ಚುವರಿ ಕ್ಯಾಲೊರಿಗಳನ್ನು ಪರಿಣಾಮಕಾರಿಯಾಗಿ ಬರ್ನ್ ಮಾಡಲು ಸಹಾಯ ಮಾಡುತ್ತದೆ.ಅದರಲ್ಲಿಯೂ ವಿಶೇಷವಾಗಿ, ಹಸಿವನ್ನು ನಿಯಂತ್ರಿಸುವ ಸಾಮರ್ಥ್ಯ ಇರುವುದರಿಂದ, ಅತಿಯಾಗಿ ತಿನ್ನುವ ಅಭ್ಯಾಸ ತಡೆಗಟ್ಟಲು ನೆರವಾಗುತ್ತದೆ.

    ಚರ್ಮದ ಆರೋಗ್ಯ:

    ಚರ್ಮದ ಅಲರ್ಜಿ, ಒಣ ತ್ವಚೆ, ಮೊಡವೆ (acne), ಹಾಗೂ ವಯಸ್ಸಿನ ಕಾರಣದಿಂದ ಉಂಟಾಗುವ ಸುಕ್ಕುಗಳು ಮುಂತಾದ ಸಮಸ್ಯೆಗಳ ನಿವಾರಣೆಗೆ ನೆಲ್ಲಿಕಾಯಿ ಟೀ ಅತ್ಯುತ್ತಮ ಪ್ರಾಕೃತಿಕ ಪರಿಹಾರವಾಗಬಹುದು.ನೆಲ್ಲಿಕಾಯಿಯಲ್ಲಿರುವ ವಿಟಮಿನ್ C ಮತ್ತು ಇತರ ಪೋಷಕಾಂಶಗಳು ಚರ್ಮದ ಉಜ್ಜ್ವಲತೆಯನ್ನು ಹೆಚ್ಚಿಸಲು, ಹೊಸ ಕೋಶಗಳ ಪುನರುತ್ಪತ್ತಿಯನ್ನು ಉತ್ತೇಜಿಸಲು ಹಾಗೂ ಹಾನಿಗೊಳಗಾದ ಚರ್ಮವನ್ನು ಪುನಃ ಚೈತನ್ಯಗೊಳಿಸಲು ಸಹಾಯ ಮಾಡುತ್ತವೆ.ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ, ಚರ್ಮವನ್ನು ಒಳಗಿನಿಂದ ಪೋಷಿಸಿ ಅದನ್ನು ಹೆಚ್ಚು ಕಾಂತಿಯುಕ್ತವಾಗಿ ಹಾಗೂ ಆರೋಗ್ಯಕರವಾಗಿ ಉಳಿಸಿಕೊಳ್ಳಲು ನೆರವಾಗುತ್ತದೆ.

    ಹೀಗೆ ತಯಾರಿಸಿ:

    ಈ ಟೀ ಮಾಡುವುದು ಬಹಳ ಸುಲಭವಾಗಿದೆ. ಒಂದು ಲೋಟ ನೀರಿಗೆ ಒಂದು ಚಮಚ ಆಮ್ಲ (ನೆಲ್ಲಿಕಾಯಿ) ಪುಡಿ ಸೇರಿಸಿ. ಅದನ್ನು ಕುದಿಸಲು ಆರಂಭಿಸಿದಾಗ ಚಿಟಿಕೆಯಷ್ಟು ಜೀರಿಗೆ, ಸಣ್ಣ ತುಂಡು ಶುಂಠಿ, ಹಾಗೂ ಕೆಲವು ತುಳಸಿ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಬಳಿಕ ಇದನ್ನು ಚನ್ನಾಗಿ ಸೂರಿಸಿ, ಇದಕ್ಕೆ ಸ್ವಲ್ಪ ನಿಂಬೆ ರಸ ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ. ಈ ರುಚಿಕರ ಹಾಗೂ ಆರೋಗ್ಯಕರ ನೆಲ್ಲಿಕಾಯಿ ಟೀ ಸವಿಯಲು ಸಿದ್ಧವಾಗಿದೆ!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search