ಕಲಬುರ್ಗಿ;ಕಲಬುರ್ಗಿ ತಾಲೂಕಿನ ಮೇಳಕುಂದ ಗ್ರಾಮದಲ್ಲಿ, ಮೋಟೇಶನ್ ಮತ್ತು ಪಾಣಿ ಹೆಸರು ಸೇರ್ಪಡೆ ಮಾಡುವುದಕ್ಕಾಗಿ ಲಂಚ ಸ್ವೀಕರಿಸುವ ವೇಳೆ ಇಬ್ಬರು ಕಂದಾಯ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.30 ಸಾವಿರ ರೂಪಾಯಿ ಲಂಚ(Bribe) ಪಡೆಯುವ ವೇಳೆ ಇಬ್ಬರು ಕಂದಾಯ ಅಧಿಕಾರಿಗಳು ಲೋಕಾಯುಕ್ತ(Lokayukta) ಬಲೆಗೆ ಬಿದ್ದಿರುವ ಘಟನೆ ಕಲಬುರಗಿ(Kalburgi) ತಾಲ್ಲೂಕಿನ ಉಪ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ.ಮೇಲಕುಂದಾ (ಬಿ) ಗ್ರಾಮದ ಗ್ರಾಮಾಧಿಕಾರಿ ಡಾ. ಕಾಂತೇಶ್ ಮತ್ತು ಅಖಾತರ್ ಪಟೇಲ್ ಬಂಧಿತ ಅಧಿಕಾರಿಗಳಾಗಿದ್ದು, ಮೋಟೇಶನ್ ಮತ್ತು ಪಹಣಿ ಹೆಸರು ಸೇರ್ಪಡೆ ಮಾಡುವುದಕ್ಕಾಗಿ ಸಿದ್ದರಾಮಯ್ಯ ಎಂಬುವವರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.ಖಚಿತ ಮಾಹಿತಿ ಪಡೆದ ಲೋಕಾಯುಕ್ತ ಪೊಲೀಸರು, 20 ಸಾವಿರ ರೂಪಾಯಿ ಮುಂಗಡ ಹಣ ಸ್ವೀಕರಿಸುವ ವೇಳೆ ದಾಳಿ ನಡೆಸಿ, ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಈ ಕಾರ್ಯಾಚರಣೆ ಕಲಬುರಗಿ ಲೋಕಾಯುಕ್ತ ಎಸ್.ಪಿ. ಬಿ.ಕೆ. ಉಮೇಶ್ ಅವರ ಮಾರ್ಗದರ್ಶನದಲ್ಲಿ ನಡೆದಿದ್ದು, ಪೊಲೀಸ್ ಇನ್‌ಸ್ಪೆಕ್ಟರ್ ಅಕ್ಕಮಹಾದೇವಿ ಹಾಗೂ ಸಿಬ್ಬಂದಿಗಳಾದ ಮಲ್ಲಿನಾಥ್ ರಾಣೋಜಿ, ಬಸವರಾಜ್, ಅಸ್ಲಾಂ, ಯಮನೂರಪ್ಪ, ಪೈಮೊದಿನ್ ಸೇರಿದಂತೆ ಹಲವರು ಭಾಗವಹಿಸಿದ್ದರು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


