ನಟಿ ರಶ್ಮಿಕಾ ಮಂದಣ್ಣ ಸದ್ಯ ಭಾರತದ ಅತಿ ಯಶಸ್ವಿ ನಟಿ. ದಕ್ಷಿಣ ಭಾರತ ಮಾತ್ರವಲ್ಲದೇ ಬಾಲಿವುಡ್‌ನಲ್ಲೂ ಸಾಲು ಸಾಲು ಹಿಟ್ ಚಿತ್ರಗಳಲ್ಲಿ ನಟಿಸಿ ಯಶಸ್ಸಿನ ಉತ್ತುಂಗದಲ್ಲಿದ್ದಾರೆ.
ಹೀಗೆ ಭಾರೀ ಯಶಸ್ಸು ಸಾಧಿಸಿದರೂ ಸಹ ರಶ್ಮಿಕಾ ತನ್ನ ಹೇಳಿಕೆಗಳಿಂದ ಹಲವಾರು ಬಾರಿ ವಿರೋಧವನ್ನು ಕಟ್ಟಿಕೊಂಡಿದ್ದಾರೆ. ಈ ಹಿಂದೆ ನಾನು ಹೈದರಾಬಾದಿನವಳು ಎಂದು ಹೇಳಿಕೆ ನೀಡಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ರಶ್ಮಿಕಾ ಇದೀಗ ರಾಷ್ಟ್ರೀಯ ಮಾಧ್ಯಮವೊಂದರ ಸಂದರ್ಶನದಲ್ಲಿ ಕೊಡವ ಸಮುದಾಯದಿಂದ ನಟಿಯಾದ ಮೊದಲ ಮಹಿಳೆ ನಾನು ಎಂದು ಹೇಳಿಕೆ ನೀಡುವ ಮೂಲಕ ಭಾರೀ ವಿವಾದನ್ನು ಎಬ್ಬಿಸಿದ್ದಾರೆ.
ಕೊಡವ ಸಮುದಾಯದಿಂದ ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಹಲವಾರು ಕಲಾವಿದರು ಸೇವೆ ಸಲ್ಲಿಸಿದ್ದು, ಸಲ್ಲಿಸುತ್ತಿದ್ದು, ರಶ್ಮಿಕಾ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ರಶ್ಮಿಕಾ ರಾಷ್ಟ್ರೀಯ ಮಾಧ್ಯಮದಲ್ಲಿ ಇಂತಹ ಹೇಳಿಕೆ ನೀಡಿದ್ದು, ಈಗಾಗಲೇ ಕಲಾ ಸೇವೆಯಲ್ಲಿರುವ ಹಿರಿಯ ನಟಿಯರಿಗೆ ಮಾಡಿದ ಅವಮಾನವಾಗಿದ್ದು, ನೆಟ್ಟಿಗರು ಈಗಾಗಲೇ ರಶ್ಮಿಕಾ ಹೇಳಿಕೆಗೆ ಕಿಡಿಕಾರಿದ್ದಾರೆ.
ಹಿರಿಯ ನಾಗರಿಕರ ಕಾರ್ಡ್: 60 ವರ್ಷವಾದ ಕೂಡಲೇ ನೀವು ಪಡೆಯಬಹುದಾದ ಪ್ರಮುಖ ಸೌಲಭ್ಯಗಳು
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗೆ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


