ಆಗಸ್ಟ್ 10ರಂದು ಎಲ್ಲೋ ಲೈನ್ ಮೆಟ್ರೋ ಮಾರ್ಗವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ಮಾರ್ಗವು ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ವಿಸ್ತರಿಸಿದ್ದು, ನಗರದ ಸಂಚಾರ ಸಮಸ್ಯೆಗೆ ಪ್ರಮುಖ ಪರಿಹಾರವಾಗಲಿದೆ.
ಬೊಮ್ಮಸಂದ್ರದಿಂದ ಆರ್‌ವಿ ರಸ್ತೆವರೆಗೂ 19 ಕಿಲೋ ಮೀಟರ್ ಇದ್ದು,16 ನಿಲ್ದಾಣಗಳನ್ನು ಹೊಂದಿದೆ. ಆರ್.ವಿ ರೋಡ್, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಹೊಂಗಸಂದ್ರ, ಕೂಡ್ಲುಗೇಟ್, ಸಿಂಗಸಂದ್ರ, ಹೊಸರೋಡ್, ಬೇರೆಟೇನಾ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಇನ್ಫೋಸಿಸ್ ಫೌಂಡೇಶನ್ ಕೊನಪ್ಪನ ಅಗ್ರಹಾರ, ಹೂಸ್ಕೂರು ರೋಡ್, ಬಯೋಕಾನ್ ಹೆಬ್ಬಗೋಡಿ ಮತ್ತು ಬೊಮ್ಮಸಂದ್ರ.
ಡ್ರೈವರ್ಲೆಸ್ ರೈಲುಗಳು ಸಂಚಾರ ಮಾಡಲಿದೆ. ಆದರೆ 25 ನಿಮಿಷಗಳಿಗೊಮ್ಮೆ ಒಂದು ಮೆಟ್ರೋ ರೈಲು ಸಂಚಾರ ಮಾಡಲಿದೆ. ಈ ಮಾರ್ಗಕ್ಕೆ ಒಟ್ಟು 15 ರೈಲುಗಳು ಬೇಕಾಗಿದ್ದು ನಾಲ್ಕನೇ ರೈಲು ಟಿಟಾಗಢ ರೈಲ್ ಸಿಸ್ಟಂ ಲಿಮಿಟೆಡ್ (ಟಿಆರ್‌ಎಸ್‌ಎಲ್) ಕಾರ್ಯಾಗಾರದಿಂದ ಹೊರಟಿದ್ದು ಆಗಸ್ಟ್ 10ರ ವೇಳೆಗೆ ಬೆಂಗಳೂರು ತಲುಪುವ ನಿರೀಕ್ಷೆ ಇದೆ
ನಮ್ಮ ಮೆಟ್ರೊ ಹಳದಿ ಮಾರ್ಗದ ಕಾಮಗಾರಿ 2018ರಲ್ಲಿ ಆರಂಭವಾಗಿತ್ತು. 2021ರಲ್ಲಿ ಕೊನೆಗೊಳ್ಳಬೇಕಿತ್ತು. ಕೋವಿಡ್ ಇನ್ನಿತರ ಕಾರಣದಿಂದ ತಡವಾಗಿತ್ತು. 2023ಕ್ಕೆ ಆರಂಭಿಸಲು ಗುರಿ ಪುನರ್‌ನಿಗದಿಯಾಗಿತ್ತು. ಆದರೆ, ಕಾಮಗಾರಿ ಮತ್ತೊಂದು ವರ್ಷ ತಡವಾಗಿ 2024ರ ಜೂನ್‌ಗೆ ಪೂರ್ಣವಾಗಿತ್ತು. ಈಗ ಉದ್ಘಾಟನೆಗೆ ಸಜ್ಜಾಗಿದೆ.
,ಮುಷ್ಕರಕ್ಕೆ ಮುಂದಾದ ಸಾರಿಗೆ ನೌಕರರಿಗೆ ಶಾಕ್: ರಜೆ ಹಾಗೂ ವಾರದ ರಜೆ ರದ್ದು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


