ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಿನ್ನೆ ತಾನೇ ಮೈಸೂರಿಗೆ ಆಗಮಿಸಿರುವ ಗಜಪಡೆ ಆಗಸ್ಟ್.10ರಂದು ಅರಮನೆಗೆ ಪ್ರವೇಶಿಸಲಿವೆ.
ಆಗಸ್ಟ್.10ರ ಭಾನುವಾರ ಸಂಜೆ 6.45 ರಿಂದ 7.20ರ ಗೋಧೊಳಿ ಲಗ್ನದಲ್ಲಿ ದಸರಾ ಗಜಪಡೆಗಳು ಅರಮನೆಗೆ ಎಂಟ್ರಿ ಆಗಲಿವೆ. ಅರಮನೆಯ ಪೂರ್ವ ದಿಕ್ಕಿನಲ್ಲಿರುವ ಜಯಮಾರ್ತಾಂಡ ದ್ವಾರದಿಂದ ಗಜಪಡೆಗಳು ಅರಮನೆ ಪ್ರವೇಶಿಸಲಿದ್ದು, ಇದನ್ನು ಸಾರ್ವಜನಿಕರು ಕೂಡ ಕಣ್ತುಂಬಿಕೊಳ್ಳಬಹುದಾಗಿದೆ.
ಈಗಾಗಲೇ ಅರಮನೆ ಆವರಣದಲ್ಲಿ ದಸರಾ ಗಜಪಡೆಗಳು, ಮಾವುತರು ಹಾಗೂ ಕಾವಾಡಿಗರ ವಾಸ್ತವ್ಯಕ್ಕೆ ಎಲ್ಲಾ ಸಿದ್ಧತೆ ಮಾಡಲಾಗಿದ್ದು, ಭಾನುವಾರದಿಂದ ನಾಡಹಬ್ಬ ದಸರಾ ಮಹೋತ್ಸವ ಮುಗಿಯುವವರೆಗೂ ಆನೆಗಳು ಅರಮನೆ ಆವರಣದಲ್ಲೇ ಬೀಡುಬಿಡಲಿವೆ.
ಇನ್ನು ಭಾನುವಾರ ಆನೆಗಳು ಅರಮನೆ ಪ್ರವೇಶಿಸುವ ವೇಳೆಗೆ ಸರಿಯಾಗಿ ಅರಮನೆ ದೀಪಾಲಂಕಾರ ಸಹ ಕಂಗೊಳಿಸಲಿದೆ. ದೀಪಾಲಂಕಾರದ ಸೌಂದರ್ಯದ ನಡುವೆಯೇ ಆನೆಗಳ ಅರಮನೆ ಪ್ರವೇಶದ ಸೊಬಗನ್ನು ಸವಿಯುವ ಅವಕಾಶ ಇದರಿಂದ ಲಭಿಸುತ್ತದೆ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮಾಹಿತಿ ನೀಡಿದ್ದಾರೆ.
,ಮುಷ್ಕರಕ್ಕೆ ಮುಂದಾಗಿದ್ದ ನೌಕರರ ಮೇಲೆ ಬಿಎಂಟಿಸಿ ಬ್ರಹ್ಮಾಸ್ತ್ರ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


