Tuesday, September 1, 2026
spot_img
More
    spot_img
    HomeStateDistrictಧರ್ಮಸ್ಥಳ: 12ನೇ ಪಾಯಿಂಟ್‌ ಅಗೆಯಲು ಮುಂದಾದ ಎಸ್‌ಐಟಿ; 11ನೇ ಪಾಯಿಂಟ್‌ನಲ್ಲಿ ಸಿಕ್ತಾ ಅಸ್ತಿಪಂಜರ?

    ಧರ್ಮಸ್ಥಳ: 12ನೇ ಪಾಯಿಂಟ್‌ ಅಗೆಯಲು ಮುಂದಾದ ಎಸ್‌ಐಟಿ; 11ನೇ ಪಾಯಿಂಟ್‌ನಲ್ಲಿ ಸಿಕ್ತಾ ಅಸ್ತಿಪಂಜರ?

    ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಸರಣಿ ಕೊಲೆ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕ ನೀಡಿರುವ ದೂರಿನ ಆಧಾರದ ಮೇಲೆ ಎಸ್‌ಐಟಿ ತನಿಖೆ ನಡೆಯುತ್ತಿದ್ದು, ಇಂದು ( ಆಗಸ್ಟ್‌ 5 ) ಏಳನೇ ದಿನದ ಗುಂಡಿ ಅಗೆಯುವ ಕಾರ್ಯಾಚರಣೆಯನ್ನು ಎಸ್‌ಐಟಿ ಅಧಿಕಾರಿಗಳು ಕೈಗೊಂಡಿದ್ದಾರೆ.

    Advertisement

    ಮೊದಲ ಹತ್ತು ಸ್ಥಳಗಳಲ್ಲಿ ಗುಂಡಿ ಅಗೆದ ಅಧಿಕಾರಿಗಳಿಗೆ ಕೇವಲ ಆರನೇ ಪಾಯಿಂಟ್‌ನಲ್ಲಿ ಮಾತ್ರ ಅಸ್ತಿಪಂಜರದ ಅವಶೇಷಗಳು ಪತ್ತೆಯಾಗಿದ್ದವು. ಆದರೆ, ನಿನ್ನೆ ( ಆಗಸ್ಟ್‌ 4 ) 11ನೇ ಪಾಯಿಂಟ್‌ ಅಗೆಯುವುದಕ್ಕೂ ಮುನ್ನ ಸಮೀಪದಲ್ಲೇ ಇದ್ದ ಕಾಡಿನೊಳಗೆ ಕರೆದೊಯ್ದ ಸಾಕ್ಷಿ ದೂರುದಾರ ಬೇರೆ ಜಾಗವನ್ನು ಅಗೆಯಲು ಹೇಳಿದ್ದ. ಆ ಜಾಗದಲ್ಲಿ ಒಂದಕ್ಕಿಂತ ಹೆಚ್ಚು ಶವದ ಅಸ್ತಿಪಂಜರಗಳೂ ಸಹ ದೊರಕಿದ್ದವು.

    ಹೀಗೆ ಬೇರೆಡೆ ಅಗೆದು ಕೆಲ ಕುರುಹುಗಳನ್ನು ಸಂಗ್ರಹಿಸಿದ್ದ ಎಸ್‌ಐಟಿ ಅಧಿಕಾರಿಗಳು ಇಂದು 11ನೇ ಸ್ಥಳದ ಉತ್ಖನನ ನಡೆಸಿದ್ದು, ಅಲ್ಲಿ ಯಾವುದೇ ಅಸ್ತಿಪಂಜರದ ಕುರುಹು ಸಹ ಪತ್ತೆಯಾಗದೇ ಗುಂಡಿಯನ್ನು ಮುಚ್ಚಿದ್ದಾರೆ. 6 ಅಡಿಗಳಷ್ಟು ಆಳದವರೆಗೆ ಗುಂಡಿಯನ್ನು ಅಗೆಯಲಾಗಿದ್ದು, ಯಾವುದೇ ಮೂಳೆ ಪತ್ತೆಯಾಗಿಲ್ಲ.

    ಹೀಗಾಗಿ ಎಸ್‌ಐಟಿ ತಂಡ ಊಟದ ಬಳಿಕ 12ನೇ ಸ್ಥಳದ ಉತ್ಖನನ ಮಾಡಲು ಮುಂದಾಗಿದೆ. ಈ ಪಾಯಿಂಟ್‌ನಲ್ಲಿ ಅಸ್ತಿಪಂಜರಗಳು ಪತ್ತೆಯಾಗಲಿವೆಯಾ ಎಂಬ ಕುತೂಹಲ ಮೂಡಿಸಿದೆ. ಅಲ್ಲದೇ ಅನಾಮಿಕ ಹೇಳಿದ್ದ 13ನೇ ಪಾಯಿಂಟ್‌ ಅತಿಮುಖ್ಯವಾಗಿದ್ದು, ಭಾರೀ ಕುತೂಹಲ ಕೆರಳಿಸಿದೆ.

    ಜೋಡಿ ಮಾರ್ಗ ಕಾಮಗಾರಿ: ಗೋಲ್‌ಗುಂಬಜ್‌, ಇಂಟರ್‌ಸಿಟಿ ಸೇರಿದಂತೆ ಪ್ರಮುಖ ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading