Sunday, August 30, 2026
spot_img
More
    spot_img
    HomeStateತುಮಕೂರಿನಲ್ಲಿ ಶಾಲೆ ಬಿಟ್ಟು ಪಿ.ಎಂ ಗೆ ಪತ್ರ ಬರೆದ ಹುಡುಗಿ!

    ತುಮಕೂರಿನಲ್ಲಿ ಶಾಲೆ ಬಿಟ್ಟು ಪಿ.ಎಂ ಗೆ ಪತ್ರ ಬರೆದ ಹುಡುಗಿ!

    Advertisement

    ಶಾಲೆಯ ಕಾಂಪೌಂಡ್ ‌ಗಾಗಿ ಶಾಲೆ ತೊರೆದಿದ್ದಾಳೆ ಪುಟಾಣಿ ವಿದ್ಯಾರ್ಥಿನಿಯೋರ್ವಳು! ತಾನು ಕಾಂಪೌಂಡ್‌ ನಿರ್ಮಿಸಿಕೊಡುವವರೆಗೂ ಸ್ಕೂಲಿಗೆ ಬರುವುದಿಲ್ಲವೆಂದು ಹಠ ಹಿಡಿದು ಕುಳಿತಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

    ತುಮಕೂರು ತಾಲ್ಲೂಕಿನ ಬೆಳಧರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬರೊಬ್ಬರಿ 105 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶಾಲೆಯ ಪಕ್ಕದಲ್ಲೇ ಕಲ್ಯಾಣ ಮಂಟಪವಿದ್ದು, ಆಟದ ಮೈದಾನದಲ್ಲಿ ಕಲ್ಯಾಣ‌ ಮಂಟಪಕ್ಕೆ ಬರುವ ಕಾರು, ಬಸ್ಸು ವಾಹನಗಳು ನಿಲ್ಲುತ್ತಿವೆ. ಊಟ ಮಾಡಿದ ಎಂಜಲು ಎಲೆಗಳನ್ನೆಲ್ಲ ಶಾಲೆಯ ಆವರಣದಲ್ಲೇ ಎಸೆಯಲಾಗುತ್ತಿದೆ. ಎಂಜಲು ಎಲೆಯ ಮೇಲೆಯೇ ಮಕ್ಕಳ ಊಟ ಪಾಠ ನಡೆಯುತ್ತಿದೆ.

    ತುಮಕೂರು ತಾಲ್ಲೂಕಿನ ಬೆಳಧರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 4 ನೇ ತರಗತಿ ವಿದ್ಯಾರ್ಥಿನಿ ಪಿಎಂ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಬಾಲಕಿ ನಿಮ್ಮಿಂದ ಉತ್ತರ‌ ಸಿಗುವವರೆಗೂ ನಾನು ಶಾಲೆಗೆ ಹೋಗುವುದಿಲ್ಲ ಎಂದು ಹಠಹಿಡಿದು ಕುಳಿತಿದ್ದಾಳೆ.

    2024 ರಲ್ಲಿ ಬಿಇಓ ಗೆ ಪತ್ರ ಬರೆದು ಮನವಿ ಮಾಡಿದ್ದ ಸಿಮ್ರಾ ಸನೋಬರ್ ಕಾಂಪೌಂಡ್‌ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದಳು. ಅಂದು ವಿದ್ಯಾರ್ಥಿನಿಗೆ ಕಾಂಪೌಂಡ್ ಕಟ್ಟಿಕೊಡುವ ಆಶ್ವಾಸನೆ ನೀಡಿದ್ದ ಬಿಇಓ, ಬಳಿಕ ಒಂದು ವರ್ಷ ಕಳೆದರೂ ಕಾಂಪೌಂಡ್ ನಿರ್ಮಾಣ ಮಾಡಿರಲಿಲ್ಲ.

    ಇದರಿಂದ ನಮಗೆ ಆಟವಾಡಲು ತೊಂದರೆಯಾಗ್ತಿದೆ. ಕಾಂಪೌಂಡ್ ನಿರ್ಮಾಣ ಆಗೋವರೆಗೂ ಶಾಲೆಗೆ ಬರೊದಿಲ್ಲ ಎಂದು ಪತ್ರ ಸಿಮ್ರಾ ಸಿಎಂ ಸಿದ್ದರಾಮಯ್ಯ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಬರೆದು ಮನವಿ ಮಾಡಿಕೊಂಡಿದ್ದಾಳೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading