ಯುಟ್ಯೂಬರ್ ಚಂದನ್ ಗೌಡ ಧರ್ಮಸ್ಥಳದಲ್ಲಿ ನಡೆದ ಎಸ್‌ಐಟಿ ತನಿಖೆ ಕುರಿತಾದ ವಿಡಿಯೊಗಳನ್ನು ಮಾಡಿದ್ದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಗಂಭೀರ ಆರೋಪ ಮಾಡಿರುವ ಮತ್ತೋರ್ವ ಯುಟ್ಯೂಬರ್ ಸುಮಂತ್ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದ್ದರಿಂದ ಬಂದ ಹಣ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಚಂದನ್ ಗೌಡ ಅವರ ಬಟ್ಟೆ ಅಂಗಡಿ ಉದ್ಘಾಟನೆ ದಿನ ಅವರದ್ದೇ ಅಂಗಡಿಯ ವ್ಲಾಗ್ ಮಾಡಲು ಹೋಗಿದ್ದ ಈತ ಅದೇ ದಿನ ಯುನೈಟೆಡ್ ಮೀಡಿಯಾದ ಅಭಿ ತನಗೆ 2 ಲಕ್ಷ ಹಣ ಕೊಡುವುದಾಗಿ ಹೇಳಿ ಧರ್ಮಸ್ಥಳದ ವಿರುದ್ಧ ವಿಡಿಯೊ ಮಾಡಲು ಹೇಳಿದ್ದ ಎಂದು ಸಹ ಆರೋಪ ಮಾಡಿದ್ದಾನೆ.
ಈ ಕುರಿತು ಟಿವಿ9 ಗೋಲ್ಡನ್ ಕನ್ನಡಿಗ ಸುಮಂತ್‌ನನ್ನು ಮಾತನಾಡಿಸಿದ್ದು, ಇಂದೂ ಸಹ ಅದೇ ಹೇಳಿಕೆಯನ್ನು ಕೊಟ್ಟಿದ್ದಾನೆ. ಚಂದನ್ ಗೌಡ ಲೋಕಸಭಾ ಚುನಾವಣೆ ಸಂದರ್ಭದಲ್ಲಿ 2 ಲಕ್ಷ ಸಹ ತನ್ನ ಬಳಿ ಇಲ್ಲ ಎಂದು ಚಿನ್ನ ಅಡವಿಟ್ಟಿದ್ದರು ಇಂದು ಹೇಗೆ 50 ಲಕ್ಷ ರೂಪಾಯಿಯ ಬಟ್ಟೆ ಅಂಗಡಿ ಆರಂಭಿಸಿದರು ಎಂದು ಪ್ರಶ್ನೆ ಹಾಕಿದ್ದಾನೆ.
ಇನ್ನು ಟಿವಿ9ನ ಮತ್ತೊಂದು ವಿಡಿಯೊದಲ್ಲಿ ಚಂದನ್ ಇದಕ್ಕೆ ಪ್ರತಿಕ್ರಿಯಿಸಿದ್ದು, ಸುಮಂತ್ ಹೇಳುವ ಹಾಗೆ ತನಗೆ ಹಣ ಬಂದಿರುವುದನ್ನು ಸಾಬೀತುಪಡಿಸಲಿ, ಸಾಬೀತುಪಡಿಸದಿದ್ದರೆ ಆತನ ವಿರುದ್ಧ ಕಾನೂನು ಪ್ರಕಾರ ಹೋರಾಟ ನಡೆಸುವುದಾಗಿ ತಿಳಿಸಿದ್ದರು.
ಒಟ್ಟಿನಲ್ಲಿ ಧರ್ಮಸ್ಥಳದ ಕುರಿತು ವಿಡಿಯೊ ಮಾಡುವ ವಿಚಾರದಲ್ಲಿ ಸದ್ಯ ಯುಟ್ಯೂಬರ್ಸ್ ವಾರ್ ಶುರುವಾಗಿದ್ದು, ಯಾರದ್ದು ನಿಜ ಹಾಗೂ ಯಾರದ್ದು ಸುಳ್ಳು ಎಂಬುದು ಜನರ ಮುಂದೆ ಬರಬೇಕೆಂದರೆ ಕಾನೂನು ಪ್ರಕಾರವೇ ಬರಬೇಕಿದೆ.
ಐಪಿಎಲ್ ಟಿಕೆಟ್ ಮೇಲೆ ಹೆಚ್ಚುವರಿ ಹೊರೆ: ಶೇ. 28ರಿಂದ ಶೇ. 40ಕ್ಕೆ ಜಿಎಸ್‌ಟಿ ಏರಿಕೆ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


