ಕೇರಳದ ಯೂಟ್ಯೂಬರ್ ಮನಾಫ್‌ಗೂ ಎಸ್‌ಐಟಿ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಮನಾಫ್ ವಿಡಿಯೋ ಮಾಡಿ ಕೇರಳದಲ್ಲಿ ಭಾರೀ ಸಂಚಲನ ಮಾಡಿದ್ದನು.
ಲಾರಿ ಮಾಲೀಕನೂ ಆಗಿರುವ ಯೂಟ್ಯೂಬರ್ ಮನಾಫ್ ಈ ಪ್ರಕರಣದ ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಯಲ್ಲಿ ತಂಗಿದ್ದಾಗ ಅಲ್ಲಿಗೂ ತೆರಳಿ ಚಿನ್ನಯ್ಯನನ್ನು ಮಾತನಾಡಿಸಿ, ಮಾಹಿತಿ ಪಡೆದುಕೊಂಡಿದ್ದ ಎಂಬುದು ಗೊತ್ತಾಗಿದೆ. ಹಾಗಾಗಿ ಮನಾಫ್‌ಗೂ ಸಹ ವಿಚಾರಣೆಗೆ ಹಾಜರಾಗುವಂತೆ ಇದೀಗ ನೋಟೀಸ್ ನೀಡಲಾಗಿದೆ.
ಒಟ್ಟಾರೆ ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ಇನ್ನೂ ಯಾರ್ಯಾರು ಯೂ ಟ್ಯೂಬರ್‌ಗಳು ಎಸ್‌ಐಟಿ ವಿಚಾರಣೆಗೊಳಪಡುತ್ತಾರೋ ಎಂಬುದನ್ನು ಕಾದುನೋಡಬೇಕಿದೆ.
ಹಲವಾರು ಯೂ ಟ್ಯೂಬರ್‌ಗಳು ಹೆಚ್ಚು ಹೆಚ್ಚು ಲೈಕ್ಸ್‌ಗಳಿಗಾಗಿ ಧರ್ಮಸ್ಥಳದ ಸುತ್ತಮುತ್ತ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಭಿನ್ನಭಿನ್ನವಾಗಿ ಬಿತ್ತರಿಸಿದ್ದರು ಎಂಬ ಆರೋಪ ಎದುರಾಗಿದೆ.
ಅಮೆರಿಕಾದಲ್ಲೂ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಸಲಾಗುತ್ತಿದೆ: ಎಂ.ಬಿ ಪಾಟೀಲ್
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


