ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಅವರು ಬೆಂಗಳೂರು ಮೆಟ್ರೋ (ನಮ್ಮ ಮೆಟ್ರೋ) ಪ್ರಯಾಣ ದರವನ್ನು ಶೇ. 136 ರಷ್ಟು ಏರಿಕೆ ಮಾಡಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು ದೇಶದಲ್ಲೇ ಅತಿ ದುಬಾರಿ ಮೆಟ್ರೋ ದರವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೂರ್ಯ ನೀಡಿದ ಅಂಕಿಅಂಶಗಳ ಪ್ರಕಾರ, ದೆಹಲಿ ಮೆಟ್ರೋದಲ್ಲಿ ದರ ಏರಿಕೆ ಕನಿಷ್ಠ ₹1 ರಿಂದ ಗರಿಷ್ಠ ₹4ರೊಳಗಾಗಿ ಸೀಮಿತವಾಗಿದ್ದರೆ, ಬೆಂಗಳೂರಿನಲ್ಲಿ ಒಂದೇ ಸುತ್ತಿನಲ್ಲಿ ₹25ರಷ್ಟು ಹೆಚ್ಚಳ ಮಾಡಲಾಗಿದೆ. ಇದರಿಂದ ಪ್ರತಿದಿನ ಸುಮಾರು 10 ಲಕ್ಷ ಪ್ರಯಾಣಿಕರಿಗೆ, ವಿಶೇಷವಾಗಿ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಮತ್ತು ಐಟಿ-ಬಿಟಿ ನೌಕರರಿಗೆ ಭಾರೀ ಹೊರೆ ಉಂಟಾಗಿದೆ.
ದಿನನಿತ್ಯ 10 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು, ಮುಖ್ಯವಾಗಿ ವಿದ್ಯಾರ್ಥಿಗಳು, ಕಾರ್ಮಿಕರು, ಮತ್ತು ಐಟಿ ವಲಯದ ಉದ್ಯೋಗಿಗಳು ಮೆಟ್ರೋ ಬಳಸುತ್ತಿದ್ದು, ಈ ದರ ಏರಿಕೆಯಿಂದ ಅವರಿಗೆ ಭಾರೀ ಆರ್ಥಿಕ ಹೊರೆಯಾಗಿದೆ.
25 ಕಿ.ಮೀ. ಗಿಂತ ಹೆಚ್ಚು ದೂರ ಪ್ರಯಾಣಿಸುವವರು ಪ್ರತಿ ಪ್ರಯಾಣಕ್ಕೆ ₹90 ಪಾವತಿಸಬೇಕಾಗುತ್ತದೆ. ಉದಾಹರಣೆಗೆ, ವಿಜಯನಗರದಿಂದ ವೈಟ್‌ಫೀಲ್ಡ್‌ಗೆ ಹೋಗಲು ₹90 ಹಾಗೂ ವಾಪಸ್ ಬರಲು ಮತ್ತೊಂದು ₹90, ಅಂದರೆ ಪ್ರತಿದಿನ ಕನಿಷ್ಠ ₹180 ವೆಚ್ಚವಾಗುತ್ತದೆ. ಇದಕ್ಕೆ ಮೆಟ್ರೋ ತಲುಪಲು ಅಥವಾ ಮನೆಗೆ ಹಿಂತಿರುಗಲು ಬೇಕಾಗುವ ಬಸ್/ಕ್ಯಾಬ್ ಖರ್ಚು ಸೇರಿಲ್ಲವೆಂದು ಅವರು ತಿಳಿಸಿದರು.
ಈ ದರ ಏರಿಕೆಗೆ ಸಂಬಂಧಿಸಿದಂತೆ ಶುಲ್ಕ ನಿಗದಿ ಸಮಿತಿ (FFC) ವರದಿಯನ್ನು ಸರ್ಕಾರ ತಕ್ಷಣವೇ ಸಾರ್ವಜನಿಕಗೊಳಿಸಬೇಕು ಎಂದು ತೇಜಸ್ವಿ ಸೂರ್ಯ ಒತ್ತಾಯಿಸಿದ್ದಾರೆ. ಈ ಸಂಬಂಧವಾಗಿ ಅವರು ಈಗಾಗಲೇ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಸೆಪ್ಟೆಂಬರ್ 22ರಂದು ಅಂತಿಮ ವಿಚಾರಣೆ ನಡೆಯಲಿದೆ. ಸಾರ್ವಜನಿಕ ಹಿತಾಸಕ್ತಿ ಮುಖ್ಯ. ಆದ್ದರಿಂದ ವರದಿ ಬಹಿರಂಗಪಡಿಸಿ, ದರ ಇಳಿಕೆ ಮಾಡಿ ಜನರಿಗೆ ತಕ್ಷಣದ ಪರಿಹಾರ ಒದಗಿಸಬೇಕು,” ಎಂದು ಅವರು ಆಗ್ರಹಿಸಿದ್ದಾರೆ.
ಭಾರತಕ್ಕೆ ಎಂಟ್ರಿ ಕೊಟ್ಟ ಮೊದಲ ಟೆಸ್ಲಾ ಕಾರು: ‘ಮಾಡಲ್ ವೈ’ ಖರೀದಿಸಿದ ಮಹಾರಾಷ್ಟ್ರ ಸಚಿವರು!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


